- Home
- Entertainment
- TV Talk
- ಅಸಲಿ ಹೆಸರನ್ನು ಸೀರಿಯಲ್‌ನಲ್ಲಿ ಸುಳ್ಳಾಗಿ ಹೇಳಿದ ಚಿನ್ನುಮರಿ; ಜಯಂತ್‌ಗೆ ಭಯ ಹುಟ್ಟಿಸಿ ಗಢಗಢ ನಡುಗಿಸಿದ ಜಾನು
ಅಸಲಿ ಹೆಸರನ್ನು ಸೀರಿಯಲ್‌ನಲ್ಲಿ ಸುಳ್ಳಾಗಿ ಹೇಳಿದ ಚಿನ್ನುಮರಿ; ಜಯಂತ್‌ಗೆ ಭಯ ಹುಟ್ಟಿಸಿ ಗಢಗಢ ನಡುಗಿಸಿದ ಜಾನು
Kannada Serial Lakshmi Nivasa: ಸಮುದ್ರದಿಂದ ರಕ್ಷಿಸಲ್ಪಟ್ಟ ಜಾನುಗೆ ನರಸಿಂಹ ಆಶ್ರಯ ನೀಡಿದ್ದಾನೆ. ಜಯಂತ್‌ನ ಕನಸಿನಲ್ಲಿ ಜಾನು ಕಾಣಿಸಿಕೊಂಡು ಭಯ ಹುಟ್ಟಿಸಿದ್ದಾಳೆ. ವಿಶ್ವ ಜಾನುಗಾಗಿ ಹುಡುಕಾಟ ನಡೆಸುತ್ತಿದ್ದು, ಅವರಿಬ್ಬರ ಭೇಟಿ ಕುತೂಹಲ ಮೂಡಿಸಿದೆ.

ಸಮುದ್ರದ ಪಾಲಾಗಿದ್ದ ಜಾಹ್ನವಿಗೆ ಆಪ್ತ ಗೆಳೆಯ ವಿಶ್ವನ ತಂದೆ ನರಸಿಂಹನ ಆಶ್ರಯ ಸಿಕ್ಕಿದೆ. ತನ್ನ ಪ್ರಾಣವನ್ನು ಕಾಪಾಡಿದ ಜಾಹ್ನವಿಯನ್ನು ನರಸಿಂಹ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ನರಸಿಂಹನ ಪಾತ್ರವನ್ನ ತುಂಬಾ ಪ್ರಬುದ್ಧವಾಗಿ ತೋರಿಸಲಾಗಿದೆ.
ಜಾಹ್ನವಿ ಪಾತ್ರದಲ್ಲಿ ನಟಿಸುವ ನಟಿಯ ನಿಜವಾದ ಹೆಸರು ಚಂದನಾ. ಈಗ ಸೀರಿಯಲ್‌ನ ಈ ಪಾತ್ರದಿಂದ ಜಾನು ಅಂತಾನೇ ಫೇಮಸ್ ಆಗಿದ್ದಾರೆ. ಧಾರಾವಾಹಿಯಲ್ಲಿ ನರಸಿಂಹನ ಮುಂದೆ ತನ್ನ ಜಾನು ಅಂತ ಹೇಳದೇ ಚಂದನಾ, ತನ್ನೂರು ಕುಂದಾಪುರ ಎಂದು ಹೇಳಿಕೊಂಡಿದ್ದಾಳೆ. ಅಪ್ಪ-ಅಮ್ಮ ಈಗ ಇಲ್ಲ. ಮುಂದೆ ಏನು ಮಾಡಬೇಕು ಅಂತ ಗೊತ್ತಿಲ್ಲ ಎಂದು ಜಾನು ಹೇಳಿದ್ದಾಳೆ.
ತನ್ನ ಪ್ರಾಣ ಕಾಪಾಡಿದ್ದಕ್ಕೆ ನರಸಿಂಹ ಒಂದಿಷ್ಟು ಹಣವನ್ನು ಜಾನುಗೆ ನೀಡಲು ಮುಂದಾಗುತ್ತಾನೆ. ಆದ್ರೆ ಈ ಜಾನು ಹಣ ತೆಗೆದುಕೊಳ್ಳಲು ನಿರಾಕರಿಸುತ್ತಾಳೆ. ಹಾಗಾಗಿ ಒಂಟಿಯಾಗಿರುವ ಜಾಹ್ನವಿಯನ್ನು ತನ್ನ ಮನೆಗೆ ಬರುವಂತೆ ನರಸಿಂಹ ಆಹ್ವಾನ ನೀಡಿದ್ದಾನೆ. ತನ್ನ ಮನೆಯಲ್ಲಿಯೇ ಕೆಲಸ ಮಾಡಿಕೊಂಡು ಇರುವಂತೆ ಹೇಳಿದ್ದಕ್ಕೆ ಜಾನು ಸಹ ಒಪ್ಪಿಕೊಂಡಿದ್ದಾಳೆ.
ಇತ್ತ ಜಯಂತ್ ಸದ್ಯ ಲಕ್ಷ್ಮೀ ನಿವಾಸದಲ್ಲಿಯೇ ಉಳಿದುಕೊಂಡಿದ್ದಾನೆ. ಜಯಂತ್ ಕನಸಿನಲ್ಲಿ ಬಂದಿರುವ ಜಾನು, ಸೈಕೋ ಗಂಡನಿಗೆ ನಾನು ಸತ್ತಿದ್ದಕ್ಕೆ ನಿಮಗೆ ನಿಜವಾಗಿಯೂ ದುಃಖವಾಗಿದೆಯಾ ಎಂದು ಪ್ರಶ್ನಿಸಿ ಚಾಕುವಿನಿಂದ ಜಯಂತ್‌ಗೆ ಚುಚ್ಚಿದ್ದಾಳೆ. ಕನಸಿನಿಂದಾಗಿ ಜೋರಾಗಿ ಜಯಂತ್ ಕೂಗಿದ್ದರಿಂದ ಶ್ರೀನಿವಾಸ್ ಅಳಿಯನಿಗೆ ಸಮಾಧಾನ ಮಾಡಿದ್ದಾರೆ.
ಇತ್ತ ಜಾನು ಸಂಪರ್ಕಕ್ಕೆ ಸಿಗದ್ದಕ್ಕೆ ವಿಶ್ವ ಆತಂಕಕ್ಕೆ ಒಳಗಾಗಿದ್ದಾನೆ. ಕಾಲ್ ಮಾಡಿದ್ರೂ ಜಾನು ಮೊಬೈಲ್ ಸ್ವಿಚ್ಛ್ ಆಫ್ ಬರುತ್ತಿದೆ. ಜಯಂತ್ ಜೊತೆ ಮತ್ತು ಮನೆಯಲ್ಲಿಯೂ ಜಾನು ಇಲ್ಲ. ಒಂದು ವೇಳೆ ತವರಿಗೆ ಹೋದ್ರೆ ಫೋನ್ ಯಾಕೆ ಆಫ್ ಆಗಿರುತ್ತೆ ಎಂದು ತನ್ನನ್ನೇ ತಾನು ಪ್ರಶ್ನೆ ಮಾಡಿಕೊಳ್ಳುತ್ತಿದ್ದಾನೆ. ಇತ್ತ ಜಾನು ತನ್ನ ಮನೆಗೆ ಬರುತ್ತಿರೋ ವಿಶ್ವನಿಗೆ ಗೊತ್ತಿಲ್ಲ. ಆಸ್ಪತ್ರೆಯಲ್ಲಿ ಜಾನು ನನಗೆ ಏನೋ ಹೇಳಲು ಮುಂದಾಗಿದ್ದಳು. ಅದು ಏನಿರಬಹುದು ಎಂದು ವಿಶ್ವ ಯೋಚಿಸುತ್ತಿದ್ದಾನೆ.
ವಿಶ್ವ ಮತ್ತು ಜಾನು ಮುಖಾಮುಖಿಯಾದ್ರೆ ಏನಾಗುತ್ತೆ ಎಂದು ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಇತ್ತ ವೆಂಕಿ ಮನೆಗೆ ಬರದಿರೋದರಿಂದ ಚೆಲುವಿ ಆತಂಕಕ್ಕೆ ಒಳಗಾಗಿದ್ದಾಳೆ. ವೆಂಕಿ ಕಾಣದಿರೋದರಿಂದ ಪೊಲೀಸ್ ಕಂಪ್ಲೇಟ್ ಕೊಡಲು ಚೆಲುವಿ ಮುಂದಾಗಿದ್ದಾಳೆ.