MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • RIP ಕಂದಮ್ಮ.. ಅಗಲಿದ ಮುದ್ದಿನ ನಾಯಿಯನ್ನು ನೆನೆದು ಭಾವುಕ ಪೋಸ್ಟ್ ಹಂಚಿಕೊಂಡ ಕಿಶನ್ ಬಿಳಗಲಿ

RIP ಕಂದಮ್ಮ.. ಅಗಲಿದ ಮುದ್ದಿನ ನಾಯಿಯನ್ನು ನೆನೆದು ಭಾವುಕ ಪೋಸ್ಟ್ ಹಂಚಿಕೊಂಡ ಕಿಶನ್ ಬಿಳಗಲಿ

ಜನಪ್ರಿಯ ಡ್ಯಾನ್ಸರ್, ನಟ ಹಾಗೂ ಕನ್ನಡ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮನ್ನು ಅಗಲಿದ ಮುದ್ದಿನ ಶ್ವಾನವನ್ನು ನೆನಪಿಸಿಕೊಂಡು, ಮಿಸ್ ಯೂ ಕಂದಮ್ಮ ಎಂದಿದ್ದಾರೆ. 

2 Min read
Author : Pavna Das
Published : Jul 08 2026, 02:57 PM IST
Share this Photo Gallery
  • FB
  • TW
  • Linkdin
  • Whatsapp
16
ಕಿಶನ್ ಬಿಳಗಲಿ
Image Credit : Instagram

ಕಿಶನ್ ಬಿಳಗಲಿ

ತಮ್ಮ ನೃತ್ಯದ ಮೂಲಕ ಕನ್ನಡಿರನ್ನು ಮೋಡಿ ಮಾಡುತ್ತಿರುವ ನೃತ್ಯ ಪಟು, ನಟ ಹಾಗೂ ಕನ್ನಡ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಕಿಶನ್ ಬಿಳಗಲಿ ಶ್ವಾನ ಪ್ರೇಮಿ ಎನ್ನುವುದು, ಅವರ ಅಭಿಮಾನಿಗಳಾದ ಎಲ್ಲರಿಗೂ ಗೊತ್ತಿದೆ. ಆದರೆ ಇದೀಗ ಕಿಶನ್ ತಮ್ಮ ಮುದ್ದಿನ ಶ್ವಾನವೊಂದನ್ನು ಕಳೆದುಕೊಂಡು ಭಾವುಕರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕಿಶನ್ ಮುದ್ದಿನ ಶ್ವಾನ ಸಾವು
Image Credit : Instagram

ಕಿಶನ್ ಮುದ್ದಿನ ಶ್ವಾನ ಸಾವು

ಕಿಶನ್ ಬಿಳಗಲಿ ತಮ್ಮ ಊರಾದ ಚಿಕ್ಕಮಗಳೂರಿನಲ್ಲಿ ಹಲವಾರು ತಳಿಯ ಶ್ವಾನಗಳನ್ನು ಸಾಕಿದ್ದರು. ತಮಗೆ ಬಿಡುವು ಸಿಕ್ಕಾಗಲೆಲ್ಲಾ, ಕಿಶನ್ ಊರಿಗೆ ತೆರಳಿ ಅವುಗಳೊಂದಿಗೆ ಸಮಯ ಕಳೆಯುತ್ತಿರುತ್ತಾರೆ. ಹಾಗೆ ಮುದ್ದಾದ ವಿಡಿಯೋಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರ ಮುದ್ದಿನ ನಾಯಿಗಳಲ್ಲಿ ಒಂದು ಸಾವನ್ನಪ್ಪಿದ್ದು, ಕಿಶನ್ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

Related Articles

Related image1
Kishen Bilagali ಮಾಜಿ ಗರ್ಲ್ ಫ್ರೆಂಡ್ ಬರ್ತ್ ಡೇ…. ಹುಡುಗಿ ಫೋಟೊ ಶೇರ್ ಮಾಡಿದ ಕಿಶನ್ ಹೇಳಿದ್ದೆನು?
Related image2
Meet ದೇವಿ ಬಿಳಗಲಿ… ಚಿಕ್ಕಪ್ಪನಾದ ಸಂಭ್ರಮವನ್ನು ಹಂಚಿಕೊಂಡ Kishen Bilagali
36
RIP ಕಂದಮ್ಮ - ಅಮ್ಮನಿಗೆ ಹಾಯ್ ಹೇಳು
Image Credit : Instagram

RIP ಕಂದಮ್ಮ - ಅಮ್ಮನಿಗೆ ಹಾಯ್ ಹೇಳು

ಕಿಶನ್ ಬಿಳಗಲಿ ಪೋಸ್ಟ್ ಹೀಗಿದೆ… RIP ಕಂದಮ್ಮ - ಅಮ್ಮನಿಗೆ ಹಾಯ್ ಹೇಳು… ನಾನು ನಿನ್ನ ಜೊತೆಗಿನ ಎಲ್ಲಾ ಸಂತೋಷದ ನೆನಪುಗಳೊಂದಿಗೆ ಮುಂದುವರಿಯುತ್ತೇನೆ .. ಸುಲಭವಾಗಿ ಯಾವುದನ್ನೂ ಬಿಟ್ಟು ಕೊಡಬಾರದು ಎನ್ನುವುದನ್ನು ನೀನು ಕಲಿಸಿದ್ದಿ. ನೀನು ನಿನ್ನ ಜನರನ್ನು ಪ್ರೀತಿಸಿದೆ, ಸ್ನೇಹ ಎಂದರೆ ಏನು ಎನ್ನುವುದನ್ನು ತೋರಿಸಿದ್ದೀ, ಅಷ್ಟೇ ಅಲ್ಲ ಕಣ್ಣು ಕುರುಡಾದಾಗಲೂ ನೀನು ಪ್ರತಿ ಕ್ಷಣವನ್ನು ಸಕಾರಾತ್ಮಕತೆಯಿಂದ ಬೆಳಗಿಸಿದೆ. ಬಂಗಾರ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ .. ಮುಂದಿನ ಬಾರಿ ಸಿಗುವವರೆಗೆ ಎಂದು ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.

46
ಕಿಶನ್ ಕುಟುಂಬದ ಜೀವವಾಗಿದ್ದ ಶ್ವಾನ
Image Credit : Instagram

ಕಿಶನ್ ಕುಟುಂಬದ ಜೀವವಾಗಿದ್ದ ಶ್ವಾನ

ಈ ಶ್ವಾನವು ಕಿಶನ್ ಅವರ ಕುಟುಂಬದ ಅವಿಭಾಜ್ಯ ಅಂಗವಾಗಿತ್ತು. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುದ್ದಿನ ಕಂದಮ್ಮನ ಜೊತೆಗಿನ ಹಲವು ಮಧುರ ಕ್ಷಣಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಿದ್ದರು. ಈಗ ಆ ನೆನಪುಗಳನ್ನೇ ಜೊತೆಯಾಗಿ ಇಟ್ಟುಕೊಂಡು ಮುಂದೆ ಸಾಗುವುದಾಗಿ ಕಿಶನ್ ಹೇಳಿದ್ದಾರೆ. ಅಭಿಮಾನಿಗಳು ಸಹ ಕಿಶನ್ ಪೋಸ್ಟ್ ನೋಡಿ ಭಾವುಕರಾಗಿದ್ದಾರೆ.

56
ಧೈರ್ಯ ತುಂಬಿದ ಅಭಿಮಾನಿಗಳು
Image Credit : Instagram

ಧೈರ್ಯ ತುಂಬಿದ ಅಭಿಮಾನಿಗಳು

ಪೋಸ್ಟ್‌ಗೆ ಅಭಿಮಾನಿಗಳು ಹಾಗೂ ಸ್ನೇಹಿತರು ಸಂತಾಪ ಸೂಚಿಸುತ್ತಿದ್ದು, "Stay strong", "Run free Kandamma", "ನಿಮಗೆ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ನೀಡಲಿ", “ವಿಷ್ಯ ಕೇಳಿ ಬೇಜಾರಾಯ್ತು, ಆದರೆ ದೇವರಿಗೂ ಆ ಏಂಜಲ್ ನ್ನು ಬೇಗನೆ ಕಾಣುವ ಆಸೆ ರೆಸ್ಟ್ ಇನ್ ಪೀಸ್’ ಎಂಬ ಕಾಮೆಂಟ್‌ಗಳ ಮೂಲಕ ಕಿಶನ್ ಅವರಿಗೆ ಧೈರ್ಯ ತುಂಬುತ್ತಿದ್ದಾರೆ.

66
ಮಧುರ ನೆನಪುಗಳು
Image Credit : Instagram

ಮಧುರ ನೆನಪುಗಳು

ಕಿಶನ್ ಹಂಚಿಕೊಂಡ ವಿಡಿಯೋದಲ್ಲಿ ತಮ್ಮ ಶ್ವಾನದ ಜೊತೆ ಕಾರ್ ರೈಡಿಂಗ್, ಸಮುದ್ರ ತೀರದಲಿ ಆಟವಾಡಿದ, ಸ್ನಾನ ಮಾಡಿಸಿದ, ಕಿಶನ್ ಜೊತೆ ಮಲಗಿರುವ, ಇನ್ನೊಂದು ಶ್ವಾನ ಸತ್ತಾಗ ದುಃಖಿತರಾದ, ನೀರಲ್ಲಿ ಈಜಾಡುವ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಕೊನೆಗೆ ನಾಯಿಯ ಅಂತ್ಯಸಂಸ್ಕಾರದ ಫೋಟೊ, ವಿಡಿಯೋಗಳನ್ನು ಕಿಶನ್ ಹಂಚಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ನಾಯಿ
ಸಾಕು ಪ್ರಾಣಿ
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ರಿಯಾಲಿಟಿ ಶೋ

Latest Videos
Recommended Stories
Recommended image1
Niti Taylor: ಸಿಗರೇಟ್‌ನಿಂದ ಆತ ನನ್ನ ಸುಟ್ಟಿದ್ದ; ಖ್ಯಾತ ನಟಿಯ ಶಾಕಿಂಗ್ ಹೇಳಿಕೆಗೆ ಸಿನಿರಂಗ ಶಾಕ್!
Recommended image2
ಕ್ವಾಟ್ಲೆಗಳಿಗೆ ಕ್ವಾಟ್ಲೆ ಕೊಡ್ತಿದ್ದಾರೆ ರಕ್ಷಿತಾ ಶೆಟ್ಟಿ, ಗೆಸ್ ಮಾಡೋಕಾಗ್ದೆ ಪ್ರಶಾಂತ್ ಕಂಗಾಲು
Recommended image3
ಹ್ಯಾಪಿ ಮೂಡ್‌ನಲ್ಲಿರೋ ಗೌತಮ್-ಭೂಮಿಕಾಗೆ ಡಬಲ್ ಶಾಕ್; ಇಬ್ಬರಲ್ಲಿ ಯಾರಿಗೆ ಕಾದಿದೆ ಆಪತ್ತು?
Related Stories
Recommended image1
Kishen Bilagali ಮಾಜಿ ಗರ್ಲ್ ಫ್ರೆಂಡ್ ಬರ್ತ್ ಡೇ…. ಹುಡುಗಿ ಫೋಟೊ ಶೇರ್ ಮಾಡಿದ ಕಿಶನ್ ಹೇಳಿದ್ದೆನು?
Recommended image2
Meet ದೇವಿ ಬಿಳಗಲಿ… ಚಿಕ್ಕಪ್ಪನಾದ ಸಂಭ್ರಮವನ್ನು ಹಂಚಿಕೊಂಡ Kishen Bilagali
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved