MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • KBC 13 - ಕೋಟಿ ಗೆದ್ದ ಈ ಗೀತಾ ಸಿಂಗ್ lifeline ಬಳಸದೇ ಗೆದ್ದಿದ್ದು, ಹೇಗೆ?

KBC 13 - ಕೋಟಿ ಗೆದ್ದ ಈ ಗೀತಾ ಸಿಂಗ್ lifeline ಬಳಸದೇ ಗೆದ್ದಿದ್ದು, ಹೇಗೆ?

ಅಮಿತಾಬ್ ಬಚ್ಚನ್ (Amitabh Bachchan) ಅವರ ಗೇಮ್ ಶೋ ಕೌನ್ ಬನೇಗಾ ಕರೋಡ್ಪತಿ 13 (KBC) ದಿನದಿಂದ ದಿನಕ್ಕೆ ಜನಪ್ರಿಯವಾಗಿದೆ. ನವೆಂಬರ್‌ 9ರ ಮಂಗಳವಾರ ರಾತ್ರಿ ಕಾರ್ಯಕ್ರಮದ ಹಾಟ್ ಸೀಟ್ ಮೇಲೆ ಕುಳಿತಿದ್ದ ಗ್ವಾಲಿಯರ್ ನ ಗೀತಾ ಸಿಂಗ್ ಗೌರ್ (Geeta Singh Gaur) ಒಂದು ಕೋಟಿ ರೂಪಾಯಿ ಗೆದ್ದಿದ್ದಾರೆ. 1 ಕೋಟಿಯ ಪ್ರಶ್ನೆಗೆ ಅವರು ಯಾವುದೇ ಲೈಫ್‌ಲೈನ್ ಬಳಸದೆ ಉತ್ತರಿಸಿದರು. ಇಲ್ಲಿದೆ ಪೂರ್ತಿ ವಿವರ.

2 Min read
Author : Suvarna News | Asianet News
Published : Nov 12 2021, 04:12 PM IST
Share this Photo Gallery
  • FB
  • TW
  • Linkdin
  • Whatsapp
17

ಕೌನ್ ಬನೇಗಾ ಕರೋಡ್ಪತಿ 13ನೇ ಸಿಸನ್‌ನಲ್ಲಿ ಇನ್ನೊಬ್ಬ ಸ್ವರ್ಧಿ ಕೋಟ್ಯಾಧಿಪತಿ ಆಗಿ ಹೊರಹೊಮ್ಮಿದ್ದಾರೆ. ಕಳೆದ ಎಪಿಸೋಡ್‌ನಲ್ಲಿ  ಗ್ವಾಲಿಯರ್ ನ ಗೀತಾ ಸಿಂಗ್ ಗೌರ್ ಅವರು 1 ಕೋಟಿ ರೂಪಾಯಿ ಗೆದಿದ್ದಾರೆ.ಇವರು ಇದುವರೆಗೆ ಕೆಬಿಸಿ 13ರಲ್ಲಿ ಒಂದು ಕೋಟಿ ರೂಪಾಯಿ ಗೆದ್ದ ಮೂರನೇ ಸ್ಪರ್ಧಿ.

27
KBC 13 Amitabh Bachchan game show Geeta Singh Gaur becomes third Crorepati

KBC 13 Amitabh Bachchan game show Geeta Singh Gaur becomes third Crorepati

ಅವರು ಕೇವಲ 16 ವರ್ಷದವಳಿದ್ದಾಗ, ಕುಟುಂಬದ ಜವಾಬ್ದಾರಿ ಅವರ ಮೇಲೆ ಬಂದವು. ಆದರೂ ಮನಸ್ಸಿನಲ್ಲಿ ಓದುವ ಉತ್ಸಾಹ ಬಿಡದೆ 30ನೇ ವಯಸ್ಸಿನಲ್ಲಿ LLB ವ್ಯಾಸಂಗ ಮುಗಿಸಿದರು. ಮೊದಲ ಪ್ರಶ್ನೆಯಿಂದ 1 ಕೋಟಿಯ ಪ್ರಶ್ನೆಯವರೆಗೂ ಗೀತಾ ಸಿಂಗ್ ಕೆಬಿಸಿ ಆಟವನ್ನು ಬಹಳ ಬುದ್ಧಿವಂತಿಕೆಯಿಂದ ಆಡಿದರು. 

37

53 ವರ್ಷದ ಗೀತಾ ಸಿಂಗ್ ಗೌರ್ ಗೃಹಿಣಿಯಾಗಿದ್ದು, ತನ್ನ ಮನೆಯ ಆರೈಕೆ ಮತ್ತು ಮಕ್ಕಳನ್ನು ಬೆಳೆಸುವಲ್ಲಿ ತಮ್ಮ ಜೀವನವನ್ನು ಕಳೆದಿದ್ದಾರೆ. ಇದು ತನ್ನ ಜೀವನದ 'ಎರಡನೇ ಇನ್ನಿಂಗ್ಸ್' ಮತ್ತು ಅವರು ಇದನ್ನು ತನಗಾಗಿ ಬದುಕಲು ಬಯಸುತ್ತಾರೆ ಎಂದು ಗೀತಾ ಹೇಳಿದ್ದಾರೆ. 

47

ಟ್ರಿಪಲ್ ಟೆಸ್ಟ್ ರೌಂಡ್ ಪಾಸ್ ಆದ ನಂತರ ಗೀತಾ ಹಾಟ್ ಸೀಟ್ ಮೇಲೆ ಕುಳಿತಾಗ, ಅಮಿತಾಭ್ ಬಚ್ಚನ್‌  ಗೀತಾ ಅವರ ಸಾಂಪ್ರದಾಯಿಕ ರಜಪೂತ ಔಟ್‌ಫಿಟ್‌ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಗೀತಾ ಸಿಂಗ್ ಅವರು ತಮ್ಮ ಅಜ್ಜ ಮಹಿಳೆಯರ ಗೌರವಕ್ಕಾಗಿ ಹೋರಾಡಿದ್ದರು ಎಂದು ಹೇಳಿದ್ದರು. 

57

ಪಿಕೆ ಗಾರ್ಗ್ ಮತ್ತು ಹೋಮಿ ಡಿ ಮೋತಿವಾಲಾ ಅವರು ಯಾವ ಕ್ರೀಡಾಕೂಟಕ್ಕಾಗಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದರು ಎಂದು ಅಮಿತಾಬ್ ಬಚ್ಚನ್  ಗೀತಾ ಅವರಿಗೆ ಒಂದು ಕೋಟಿಯ ಪ್ರಶ್ನೆಯನ್ನು ಕೇಳಿದರು. ಈ ಪ್ರಶ್ನೆಗೆ ನಾಲ್ಕು ಆಯ್ಕೆಗಳು ಗಾಲ್ಫ್, ಪೊಲೊ, ರೋಯಿಂಗ್ ಮತ್ತು ಐಸ್ ಹಾಕಿ ಎಂದು ಇತ್ತು. 

67

ಗೀತಾ ಅವರಿಗೆ ಇನ್ನೂ ಎರಡು ಲೈಫ್ ಲೈನ್ ಗಳಿದ್ದವು, ಆದರೆ ಅದನ್ನು ಬಳಸದೆ ಗೀತಾ ಸರಿಯಾದ ಉತ್ತರ ನೀಡಿ  1 ಕೋಟಿ ರೂ ಗೆದ್ದರು ಮತ್ತು  ಗೀತಾ ಸಿಂಗ್  ಗೌರ್‌ KBC 13 ರ ಮೂರನೇ ಮಿಲಿಯನೇರ್ ಆದರು. ಅವರ ಆಟದ ಪ್ಲಾನ್ ನೋಡಿ ಗೀತಾ  ಆಟದ ಕೊನೆಯ ಪ್ರಶ್ನೆಗೆ ತಪ್ಪು ಉತ್ತರ ನೀಡಬಹುದೆಂದು ಪ್ರೇಕ್ಷಕರು ಎಂದು ಕೊಂಡಿದ್ದರು.

77

ಆದರೆ ಗೀತಾ ಸಿಂಗ್ ಗೌರ್  ಅವರಿಗೆ  7 ಕೋಟಿ ರೂಪಾಯಿ ಬಹುಮಾನದ  ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗಲಿಲ್ಲ ಮತ್ತು ಅವರ ಆಟವನ್ನು ನಿಲ್ಲಿಸಿದರು. ಕಾರ್ಯಕ್ರಮದ ನಿರೂಪಕ ಬಿಗ್ ಬಿ ಅವರು ಗೀತಾ ಅವರಿಗೆ ಎದ್ದು ನಿಂತು ಗೌರವ ಸಲ್ಲಿಸಿದರು ಮತ್ತು  ಅಮಿತಾಭ್  ಗೀತಾ ಅವರನ್ನು ತುಂಬಾ ಹೊಗಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
'ನಿಮ್ಮ ಚಿನ್ನುಗೆ ನೀವೇ ಶಾ* ಹಾಕ್ಬಿಡಿ..' ಪ್ರಾಣಿಕಾಮ ಪ್ರಚೋದನೆ ಆರೋಪದಲ್ಲಿ ಬಿಗ್‌ಬಾಸ್‌ ಡಾಗ್‌ ಸತೀಶ್‌ ವಿರುದ್ಧ ಎಫ್‌ಐಆರ್‌!
Recommended image2
Karna ಸೀರಿಯಲ್​ಗೆ ಎರಡೆರಡು ಬಾರಿ ಅದೃಷ್ಟ ತಂದ TRP King ಕಿರಣ್​ ರಾಜ್​ ರೋಚಕ ಸ್ಟೋರಿ
Recommended image3
Rani Serial: ಜೈಲಲ್ಲಿರೋ ತಾಯಿಗೋಸ್ಕರ ಗೋಗರೆದ ಪುಟಾಣಿ ಮಗಳು; ಕಂಬನಿ ಹಾಕಿದ ಕನ್ನಡಿಗರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved