- Home
- Entertainment
- TV Talk
- Karna Serial: ಕುಡಿದ ಅಮಲಲ್ಲಿರೋನಿಗೆ ಬುದ್ಧಿ ಹೇಳೋ ಕರ್ಣಂಗೆ ಬುದ್ಧಿ ಇಲ್ವಾ? ಇವನೆಂಥ ಡಾಕ್ಟರ್?
Karna Serial: ಕುಡಿದ ಅಮಲಲ್ಲಿರೋನಿಗೆ ಬುದ್ಧಿ ಹೇಳೋ ಕರ್ಣಂಗೆ ಬುದ್ಧಿ ಇಲ್ವಾ? ಇವನೆಂಥ ಡಾಕ್ಟರ್?
'ಕರ್ಣ' ಧಾರಾವಾಹಿಯಲ್ಲಿ, ಕುತಂತ್ರಿಗಳಿಗೆ ಬುದ್ಧಿ ಕಲಿಸಲು ಕರ್ಣ ಮುಂದಾಗಿದ್ದಾನೆ. ನಿತ್ಯಾ ಮತ್ತು ತೇಜಸ್‌ನನ್ನು ಒಂದು ಮಾಡಲು ಸತ್ಯವನ್ನು ಹೇಳಲು ಹೋದಾಗ, ಕುಡಿದ ಮತ್ತಿನಲ್ಲಿದ್ದ ತೇಜಸ್ ಕರ್ಣನ ಮಾತನ್ನು ನಂಬದೆ ಅವನಿಗೆ ಅವಮಾನ ಮಾಡಿ ಕಳುಹಿಸುತ್ತಾನೆ.

ಕುತಂತ್ರಿಗಳಿಗೆ ಬುದ್ಧಿ
ಕರ್ಣ ಸೀರಿಯಲ್ (Karna Serial)ನಲ್ಲಿ ಸದ್ಯ ಕರ್ಣ ಎಲ್ಲರಿಗೂ ಬುದ್ಧಿ ಕಲಿಸಲು ಮುಂದಾಗಿದ್ದು, ಎಲ್ಲ ವಿಲನ್ಸ್ ನಿದ್ದೆ ಹಾಳು ಮಾಡ್ತಿದ್ದಾನೆ. ರಮೇಶ್ ಸೇರಿದಂತೆ ಎಲ್ಲ ಕುತಂತ್ರಿಗಳಿಗೆ ಬುದ್ಧಿ ಕಲಿಸುತ್ತಿದ್ದಾರೆ.
ನಿತ್ಯಾಳ ಬದುಕಿಗೆ ದಾರಿ
ಇದರ ನಡುವೆಯೇ, ನಿತ್ಯಾಳಿಗೆ ತಮ್ಮ ಆಸ್ಪತ್ರೆಯ ಬೋರ್ಡ್ ಆಫ್ ಡೈರೆಕ್ಟರ್ ಕೂಡ ಮಾಡಿ, ಅತ್ತೆಯ ಕೋಪಕ್ಕೆ ಗುರಿಯಾಗಿದ್ದಾನೆ. ಆದರೆ ಅತ್ತೆಯ ಕುತಂತ್ರ ಕೂಡ ಅವನಿಗೆ ತಿಳಿದ ಕಾರಣ, ನಿತ್ಯಾಳ ಬದುಕಿಗೆ ದಾರಿ ಮಾಡಿಕೊಟ್ಟಿದ್ದಾನೆ.
ನಿತ್ಯಾ ಮತ್ತು ತೇಜಸ್ ಒಂದಾಗಬೇಕಿದೆ
ಇನ್ನೇನು ನಿತ್ಯಾ ಮತ್ತು ತೇಜಸ್ ಒಂದಾಗಬೇಕಿದೆ. ಹಾಗೆ ಆದರೆ ಕರ್ಣ ಮತ್ತು ನಿಧಿ ಒಂದಾದ ಹಾಗೆ. ಇದೇ ದಿನಕ್ಕೆ ವೀಕ್ಷಕರು ಕಾಯುತ್ತಲೇ ಇದ್ದಾರೆ.
ತೇಜಸ್ಗೆ ವಿಷಯ
ಆದರೆ, ರಮೇಶ್ ಮಾಡಿದ್ದ ಕುತಂತ್ರದಿಂದ ನಿತ್ಯಾ ಮತ್ತು ಆಕೆಯ ಹೊಟ್ಟೆಯಲ್ಲಿ ಇರುವ ಮಗುವಿನ ಬಗ್ಗೆ ತೇಜಸ್ ಇಲ್ಲಸಲ್ಲದ್ದನ್ನು ಮಾತನಾಡಿದ್ದ. ಇದನ್ನು ಕೇಳಿ ಕರ್ಣ ಅವನನ್ನು ಹೊರದಬ್ಬಿದ್ದ. ಆದರೆ ಇದೀಗ ಇದರಲ್ಲಿ ತೇಜಸ್ದು ತಪ್ಪಿಲ್ಲ ಎನ್ನುವುದು ಕರ್ಣನಿಗೆ ತಿಳಿದಿದೆ.
ತೇಜಸ್ಗೆ ಬುದ್ಧಿ
ಇದೇ ಕಾರಣಕ್ಕೆ ತೇಜಸ್ಗೆ ಬುದ್ಧಿ ಹೇಳಲು ಹೋಗಿದ್ದಾನೆ. ಕುಡಿದ ಅಮಲಿನಲ್ಲಿ ಇರೋ ತೇಜಸ್ಗೆ ಇರುವ ಸತ್ಯವನ್ನೆಲ್ಲಾ ಹೇಳಿದ್ದಾನೆ ಕರ್ಣ. ತಮ್ಮ ಮನೆಯಲ್ಲಿಯೇ ಒಬ್ಬರ ಕುತಂತ್ರದಿಂದ ಇವೆಲ್ಲಾ ಆಗಿದೆ ಎನ್ನೋದನ್ನು ಹೇಳಿದ್ದಾನೆ.
ಒಪ್ಪಿದ್ನಾ ತೇಜಸ್?
ಆದರೆ, ತೇಜಸ್ ಇದನ್ನೆಲ್ಲಾ ಒಪ್ಪಬೇಕಲ್ಲ. ತೇಜಸ್ ಒಪ್ಪುತ್ತಾನೆ, ಕರ್ಣ- ನಿಧಿ ಒಂದಾಗ್ತಾರೆ ಎಂದುಕೊಂಡ ವೀಕ್ಷಕರಿಗೆ ಠುಸ್ ಆಗಿದೆ. ಏಕೆಂದರೆ ತೇಜಸ್ ಇದೆಲ್ಲಾ ಸುಳ್ಳು ಎಂದಿದ್ದಾನೆ. ಕರ್ಣಮೋಸಗಾರ, ಈಗ ಕಥೆ ಕಟ್ಟುತ್ತಿದ್ದಾನೆ ಎಂದು ಅವನನ್ನೇ ಬೈದು ಹೊರ ಕಳುಹಿಸಿದ್ದಾನೆ.
ಕರ್ಣನಿಗೆ ಬುದ್ಧಿ ಇಲ್ವಾ?
ಇದೀಗ ಕರ್ಣ ಕುಡಿದ ಅಮಲಿನಲ್ಲಿ ಇರೋ ತೇಜಸ್ಗೆ ಬುದ್ಧಿ ಹೇಳಲು ಹೋಗಿರೋ ಕಾರಣ, ಇವನೆಂಥ ಡಾಕ್ಟರ್ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ಕುಡಿದವನ ತಲೆಯಲ್ಲಿ, ಅದೂ ಮೊದಲೇ ಕೆಟ್ಟದ್ದನ್ನು ತಲೆಯಲ್ಲಿ ತುಂಬಿಕೊಂಡಿರೋವಾಗ ಇವೆಲ್ಲಾ ಹೇಳಬಾರದು ಎಂದು ಗೊತ್ತಾಗಿಲ್ವಾ ಕೇಳ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

