- Home
- Entertainment
- TV Talk
- Karna Serial: ಮಗು ನನ್ನದೇ ಎಂದಾಯ್ತು ಕರ್ಣ- ಪ್ಲ್ಯಾನ್ ಸಕ್ಸಸ್ ಖುಷಿಯಲ್ಲಿ ರಮೇಶ್! ನಿಧಿ ಮಾಡಿದ್ದೇನು?
Karna Serial: ಮಗು ನನ್ನದೇ ಎಂದಾಯ್ತು ಕರ್ಣ- ಪ್ಲ್ಯಾನ್ ಸಕ್ಸಸ್ ಖುಷಿಯಲ್ಲಿ ರಮೇಶ್! ನಿಧಿ ಮಾಡಿದ್ದೇನು?
ರಮೇಶ್‌ನ ಕುತಂತ್ರದಿಂದ ತೇಜಸ್, ನಿತ್ಯಾಳೊಂದಿಗಿನ ಮದುವೆಯನ್ನು ಮುರಿದುಕೊಳ್ಳುತ್ತಾನೆ. ಕುಡಿದು ಬಂದ ತೇಜಸ್ ನಿತ್ಯಾ ಮತ್ತು ಮಗುವಿನ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ, ಕರ್ಣನು ಆ ಮಗು ತನ್ನದೆಂದು ಹೇಳಿ ನಿತ್ಯಾಳ ಮಾನ ಕಾಪಾಡುತ್ತಾನೆ. ಈ ಪ್ಲ್ಯಾನ್ ಸಕ್ಸಸ್ ಆದ ಖುಷಿಯಲ್ಲಿ ರಮೇಶ್ ಬೀಗುತ್ತಾನೆ.

ತೇಜಸ್ ದೂರ
ಕರ್ಣ ಸೀರಿಯಲ್ (Karna Serial)ನಲ್ಲಿ ಇದೀಗ ವಿಲನ್ ರಮೇಶ್ ಕುತಂತ್ರದಿಂದ ನಿತ್ಯಾಳ ಬಗ್ಗೆ ತೇಜಸ್ ತಪ್ಪು ತಿಳಿದುಕೊಂಡು ಮದುವೆ ಮುರಿದಿದ್ದಾನೆ. ಕರ್ಣ ಮತ್ತು ನಿತ್ಯಾಳಿಗೆ ಬಾಯಿಗೆ ಬಂದ ಹಾಗೆ ಬೈದಿದ್ದಾನೆ.
ಎಲ್ಲಾ ಅಯೋಮಯ
ಅದೇ ಇನ್ನೊಂದೆಡೆ, ನಿತ್ಯಾ ಮತ್ತು ತೇಜಸ್ ಮದುವೆ ಮಾಡಿಸಿ, ತನ್ನ ಮತ್ತು ನಿಧಿ ಲವ್ಸ್ಟೋರಿ ಹೇಳಲು ಫಂಕ್ಷನ್ ಅರೇಂಜ್ ಮಾಡಿದ್ದ ಕರ್ಣ. ಆದರೆ, ಮದುವೆ ಮುರಿದು ಬಿದ್ದಿದ್ದರಿಂದ ನಿತ್ಯಾ ಇರೋ ವಿಷಯವನ್ನು ತಿಳಿಸಲು ತಾನು ಪ್ರೆಗ್ನೆಂಟ್ ಎಂದು ಎಲ್ಲರ ಎದುರೇ ಹೇಳಿದಳು.
ಕುಡಿದು ಬಂದ ತೇಜಸ್
ಮುಂದೆ ಹೇಳುವಷ್ಟರಲ್ಲಿಯೇ, ಅಲ್ಲಿಗೆ ಕುಡಿದು ಬಂದ ತೇಜಸ್ ಈ ಮಗು ಕರ್ಣನದ್ದು ಎಂದು ಮಗು, ನಿತ್ಯಾ ಮತ್ತು ಕರ್ಣನ ಬಗ್ಗೆ ಕುಡಿದ ಅಮಲಿನಲ್ಲಿ ಇಲ್ಲಸಲ್ಲದ್ದನ್ನು ಮಾತನಾಡಿದ.
ಮಗು ನನ್ನದೇ
ಮಗುವಿನ ಬಗ್ಗೆ ಕೆಟ್ಟದ್ದಾಗಿ ಮಾತನಾಡುವುದನ್ನು ಕೇಳಿದ ಕರ್ಣ, ಈ ಮಗು ನನ್ನದೇ, ಅದರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ರೆ ಸರಿ ಇರಲಿಲ್ಲ ಎಂದು ತೇಜಸ್ನನ್ನು ಹೊರಕ್ಕೆ ಕಳುಹಿಸಿದ.
ನಿಧಿ ಸಾಥ್
ದುಃಖದಲ್ಲಿರುವ ನಿತ್ಯಾಳಿಗೆ ಕರ್ಣ-ನಿಧಿ ಸಮಾಧಾನ ಮಾಡಿದ್ದಾರೆ. ನಿಮ್ಮ ಎಲ್ಲಾ ವಿಚಾರದಲ್ಲಿಯೂ ನಾನು ಜೊತೆಯಲ್ಲಿ ಇದ್ದೇನೆ, ನಿನ್ನೆ ಮಾಡಿದ್ದು ಸರಿ ಇದೆ ಎಂದು ಕರ್ಣನ ಸಾಥ್ ನೀಡಿದ್ದಾಳೆ ನಿಧಿ.
ಪ್ಲ್ಯಾನ್ ಸಕ್ಸಸ್
ಅದೇ ಇನ್ನೊಂದೆಡೆ, ಪ್ಲ್ಯಾನ್ ಸಕ್ಸಸ್ ಆದ ಖುಷಿಯಲ್ಲಿ ಕರ್ಣನನ್ನು ತಬ್ಬಿಕೊಂಡ ರಮೇಶ್ ಅಪ್ಪ ಆಗ್ತಿರೋದಕ್ಕೆ ಕಂಗ್ರಾಟ್ಸ್ ಹೇಳಿ ಹೊಟ್ಟೆ ಉರಿಸಿದ್ದಾನೆ. ಅಷ್ಟಕ್ಕೂ ರಮೇಶ್ ಬಣ್ಣ ಇದಾಗಲೇ ಕರ್ಣನ ಮುಂದೆ ಬಯಲಾಗಿದೆ. ಮುಂದೇನಾಗುತ್ತೋ ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

