- Home
- Entertainment
- TV Talk
- ರಮೇಶನ ಕುತಂತ್ರಕ್ಕೆ ಬಲಿಯಾದ ಕಂದಮ್ಮ: ಕರ್ಣ ಡೈರೆಕ್ಟರ್‌ಗೆ ಹಿಡಿ ಶಾಪ ಹಾಕಿದ ನೆಟ್ಟಿಗರು
ರಮೇಶನ ಕುತಂತ್ರಕ್ಕೆ ಬಲಿಯಾದ ಕಂದಮ್ಮ: ಕರ್ಣ ಡೈರೆಕ್ಟರ್‌ಗೆ ಹಿಡಿ ಶಾಪ ಹಾಕಿದ ನೆಟ್ಟಿಗರು
ಸಾಕು ಮಗ ಕರ್ಣನ ಮೇಲಿನ ಸಿಟ್ಟಿಗೆ ಅವನಪ್ಪ ರಮೇಶ ಮಾಡುತ್ತಿರುವ ಕುತಂತ್ರ ಒಂದೆರಡಲ್ಲ. ಇದೀಗ ಕರ್ಣನ ಮೇಲಿನ ಸಿಟ್ಟಿಗೆ ಎರಡು ಮಕ್ಕಳನ್ನು ಬಲಿ ತೆಗೆದಿದ್ದು, ನೆಟ್ಟಿಗರು ನಿರ್ದೇಶಕರಿಗೇ ಉಗೀತಾ ಇದ್ದಾರೆ.

ಮತ್ತೆ ರೋಚಕ ತಿರುವು ಪಡೆದುಕೊಳ್ಳುತ್ತಿರುವ ಕರ್ಣ ಧಾರವಾಹಿ
ಕಿರಣ್ ರಾಜ್ ಅಭಿನಯದ ಕರ್ಣ ದಿನೆ ದಿನೇ ಬಹಳ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿಧಿ ಫೇಲ್ ಆಗಿದ್ದಾಳೆ ಅನ್ನುವಷ್ಟರಲ್ಲಿ ಸಂಜಯ್ ಕುತಂತ್ರ ಬಯಲಾಗಿ, ಅವಳು ಒಳ್ಳೇ ಅಂಕಗಳನ್ನು ಪಡೆದು ಪಾಸ್ ಆದ ಬೆನ್ನಲ್ಲೇ ಇದೀಗ ರಮೇಶ ಮಾಡಿದ ಕೆಲಸ ಓದುಗರನ್ನು ಕೆರಳಿಸಿದೆ.
ಕರ್ಣನ ವಿರುದ್ದ ಸೇಡಿಗೆ ಎರಡು ಮಕ್ಕಳು ಬಲಿ
ಸಾಕು ಮಗ, ಖ್ಯಾತ ಗೈನಾಕಲಿಜಿಸ್ಟ್ ಕರ್ಣನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿರುವ ಸಂಜಯ್ ಹಾಗೂ ಅವರಪ್ಪ ರಮೇಶ್ ಇದೀಗ ಎರಡು ಮಕ್ಕಳ ಪ್ರಾಣವನ್ನೇ ತೆಗೆದುಕೊಂಡಿದ್ದಾನೆ. ಒಮ್ಮೆ ಹೆಲ್ತ್ ಚೆಕಪ್ ಮಾಡಿ ಹೋದ ಕರ್ಣ, ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆಂದು ಕನ್ಫರ್ಮ್ ಮಾಡಿಕೊಂಡೇ ತೆರಳಿರುತ್ತಾನೆ. ಆದರೆ, ಮಕ್ಕಳು, ಅಮ್ಮನ ಹಾರ್ಟ್ ಬೀಟ್ ನಿಂತು ಹೋದ ಪ್ರೋಮೋವನ್ನು ಜೀ ವಾಹಿನಿ ರಿಲೀಸ್ ಮಾಡಿದ್ದು, ನೆಟ್ಟಿಗರು ಕೆಂಡಾಮಂಡಲ ಉರಿದುಕೊಳ್ಳುತ್ತಿದ್ದಾರೆ. ಕುತಂತ್ರಿಯೊಬ್ಬನ ಹಠಕ್ಕೆ ಮುಗ್ಧ ಕಂದಮ್ಮಗಳ ಪ್ರಾಣ ತೆಗೆದುಕೊಂಡಿದ್ದು ಅನ್ಯಾಯವೆಂದು ಬೇಸರ ಹೊರ ಹಾಕುತ್ತಿದ್ದಾರೆ.
ರಮೇಶನ ಕುತಂತ್ರಕ್ಕೆ ನಿತ್ಯಾ ಜೊತೆ ಮದ್ವೆ:
ಮನುಷ್ಯ ಇಷ್ಟು ಕೆಟ್ಟವನಾಗಿರುತ್ತಾನಾ ಎಂಬುದಕ್ಕೆ ಕರ್ಣನ ಅಪ್ಪ ರಮೇಶ ಒಂದು ಉದಾಹರಣೆಯಾದರೆ, ಪ್ರಪಂಚದಲ್ಲಿ ಮನುಷ್ಯ ಇಷ್ಟು ಒಳ್ಳೇಯನಾಗಿರಲು ಸಾಧ್ಯವಾ ಎಂದು ಅನಿಸುವಷ್ಟು ಕರ್ಣ ಒಳ್ಳೇಯವನು. ಇದೇ ರಮೇಶನ ಕುತಂತ್ರಕ್ಕೆ ನಿಧಿ ಜೊತೆ ಮದ್ವೆಯಾಗಬೇಕಿದ್ದ ಕರ್ಣ ನಿತ್ಯಾನೊಂದಿಗೆ ಮದ್ವೆಯಾದ ನಾಟಕ ಆಡುತ್ತಿದ್ದಾನೆ. ಯಾರದ್ದೋ ಮಗುವಿಗೆ ಅಮ್ಮನಾಗುತ್ತಿರುವ ನಿತ್ಯಾ ಜೀವನವನ್ನು ಸೆಟಲ್ ಮಾಡಲು ಕರ್ಣ ಒಂದಲ್ಲೊಂದು ಒಳ್ಳೇ ಕೆಲಸ ಮಾಡುತ್ತಿದ್ದಾನೆ
ಕರ್ಣ ಸೀರಿಯಲ್ ಡೈರೆಕ್ಟರ್ ಮೇಲೆ ತಿರುಗಿಬಿದ್ದ ವೀಕ್ಷಕರು
ಒಂದಾದ ಮೇಲೆ ಮತ್ತೊಂದು ಕುತಂತ್ರ ಮಾಡಲು ಮುಂದಾಗುತ್ತಿರುವ ರಮೇಶನ ಆಟವನ್ನು ಹೇಗದಾರೂ ಪತ್ತೆ ಮಾಡುತ್ತಿರುವ ಕರ್ಣ ತಿರುಗಿ ಬೀಳುತ್ತಿದ್ದಾನೆ. ಕರ್ಣನ ನಡೆ ಬಗ್ಗೆ ಸಿಕ್ಕಾಪಟ್ಟೆ ಖುಷಿಯಾಗಿದ್ದ ವೀಕ್ಷಕರು ಇದೀಗ, ಮತ್ತದೇ ಕುತಂತ್ರಿ ಆಟಕ್ಕೆ ಜೈಲಿಗೆ ಹೋಗಬೇಕಾಗಿ ಬಂದಿರೋದು ನೆಟ್ಟಿಗರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಅದರಲ್ಲಿಯೂ ಮಕ್ಕಳ ಜೀವ ತೆಗೆದಿರುವುದಕ್ಕೆ ಕ್ಷಮಿಸಲೂ ಸಾಧ್ಯವೇ ಇಲ್ಲ, ನಿರ್ದೇಶಕರ ತಲೆ ಕೆಟ್ಟಿದೆ ಎನ್ನುವಂತೆ ಕಮೆಂಟ್ ಮಾಡುತ್ತಿದ್ದಾರೆ.
ವೀಕ್ಷಕರಿಗೆ ಕಚಗುಳಿ ಇಡುತ್ತಿರುವ ನಿಧಿ-ಕರ್ಣನ ರೊಮ್ಯಾನ್ಸ್
ಕರ್ಣನಾಗಿ ಕಿರಣ್ ರಾಜ್ (Kiran Raj), ನಿತ್ಯಾಳಾಗಿ ನಮ್ರತಾ ಗೌಡ (Namrata Gowda), ನಿಧಿಯಾಗಿ ಭವ್ಯಾ ಗೌಡ (Bhavya Gowda) ನಟಿಸುತ್ತಿದ್ದು, ಕುತಂತ್ರಿ ರಮೇಶನ ಪಾತ್ರದಲ್ಲಿ ಖ್ಯಾತ ನಟ ನಾಗಭರಣ (Nagabharana) ಅಮೋಘವಾಗಿ ನಟಿಸುತ್ತಿದ್ದಾರೆ. ಆಗಾಗ ಸೀರಿಯಲ್‌ನಲ್ಲಿ ನಿಧಿ-ಕರ್ಣನ ರೊಮ್ಯಾನ್ಸ್ ವೀಕ್ಷಕರಿಗೆ ಕಚಗುಳಿ ಇಡುತ್ತಿದೆ. ನಿತ್ಯಾ ಜೊತೆ ಮನಸ್ಸಿಲ್ಲದ ಮನಸ್ಸಿನಿಂದ ಸಂದರ್ಭಕ್ಕೆ ಕಟ್ಟುಬಿದ್ದು ಕರ್ಣ ಮದ್ವೆಯಾದರೂ, ಪಕ್ಕಾ ಭಾರತೀಯರ ಮೆಂಟಾಲಿಟಿಯಂತೆ ಏನೇ ಆದ್ರೂ ಕರ್ಣ-ನಿತ್ಯಾನೇ ಒಂದಾಗಬೇಕು ಅಂತ ಆಗಾಗ ವೀಕ್ಷಕರು ಮನವಿ ಮಾಡಿ ಕೊಳ್ಳೋದು ಇದೆ.
ಕರ್ಣ ಸೀರಿಯಲ್ ಟಿಆರ್‌ಪಿಯಲ್ಲೂ ಮುಂದೆ
ಕರ್ಣ ನಿಧಿಯನ್ನು ಇಷ್ಟಪಡುತ್ತಿರುವುದು ಗೊತ್ತಿಲ್ಲದ ನಿಧಿ ಅಕ್ಕ, ನಿತ್ಯಾ ನಿಧಾನಕ್ಕೆ ಕರ್ಣನ ಮೇಲೆ ಪ್ರೀತಿ ಬೆಳೆಯಿಸಿಕೊಳ್ಳುತ್ತಿದ್ದಾಳೆ ಎಂದೆನಿಸುತ್ತದೆ. ಸಮಾಜದ ದೃಷ್ಟಿಯಲ್ಲಿ ಇವರಿಬ್ಬರು ಗಂಡ-ಹೆಂಡ್ತಿಯಾಗಿದ್ದು, ಬರ ಬರುತ್ತಾ ಬಹುಶಃ ನಿತ್ಯಾಳೇ ಕರ್ಣನನ್ನು ಗಂಡನೆಂದು ಒಪ್ಪಿಕೊಂಡು ಬಿಡಬಹುದು. ಆಗ ನಿಧಿ ಕಥೆ ಏನೋ ಗೊತ್ತಿಲ್ಲ. ಒಟ್ಟಿನಲ್ಲಿಈ ಸೀರಿಯಲ್ ವೀಕ್ಷಕರ ನೆಚ್ಚಿನ ಕಥೆಗಳಲ್ಲಿ ಒಂದಾಗಿದ್ದು, ಟಿಆರ್‌ಪಿಯಲ್ಲೂ ಸದಾ ಮೊದಲ ಸ್ಥಾನದಲ್ಲಿರುತ್ತದೆ.
ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಸೀರಿಯಲ್‌ನಲ್ಲಿ ಕಿರಣ್ ರಾಜ್ ಹರ್ಷನಾಗಿ ನಟಿಸುತ್ತಿದ್ದರು. ಭುವಿ ಮತ್ತು ಹರ್ಷ ಜೋಡಿ ಇನ್ನೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದು, ಇದೀಗ ನಿಧಿ ಹಾಗೂ ಕರ್ಣ ಜೋಡಿಯೂ ಜನಪ್ರಿಯವಾಗುತ್ತಿದೆ. ಕನ್ನಡತಿಯಲ್ಲಿ ಭುವಿಯಾಗಿ ರಂಜನಿ ರಾಘವನ್ ನಟಿಸುತ್ತಿದ್ದರು. ಸದಾ ಕನ್ನಡದಲ್ಲಿಯೇ ಮಾತನಾಡುವ, ಮಧ್ಯಮ ವರ್ಗದ ಈ ಹುಡುಗಿ ಮೇಲೆ ಸಿರಿವಂತೆ ಹರ್ಷ ಅಟ್ರಾಕ್ಟ್ ಆಗೋ ಕಥೆಯಾಗಿತ್ತು ಅದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

