- Home
- Entertainment
- TV Talk
- Karna Serial: ನಿತ್ಯಾಳನ್ನು ಮದುವೆಯಾಗದೆ ಓಡಿದ್ದ ತೇಜಸ್ ಪಾತ್ರಧಾರಿ ಕಂಡಿದ್ದೇ ಕಂಡಿದ್ದು, ಪ್ರೇಕ್ಷಕರ ಆಕ್ರೋಶ
Karna Serial: ನಿತ್ಯಾಳನ್ನು ಮದುವೆಯಾಗದೆ ಓಡಿದ್ದ ತೇಜಸ್ ಪಾತ್ರಧಾರಿ ಕಂಡಿದ್ದೇ ಕಂಡಿದ್ದು, ಪ್ರೇಕ್ಷಕರ ಆಕ್ರೋಶ
ಕರ್ಣ ಧಾರಾವಾಹಿಯಲ್ಲಿ ನಿತ್ಯಾಳನ್ನು ಮದುವೆ ಆಗಲು ಕಾಶಿಯಾತ್ರೆಗೆ ಹೋಗಿದ್ದ ತೇಜಸ್ ಇದ್ದಕ್ಕಿದ್ದಂತೆ ತಂದೆ-ತಾಯಿ ಜೊತೆ ಕಾಣೆ ಆಗಿದ್ದನು. ಇತ್ತ ನಿತ್ಯಾ ಪ್ರಗ್ನೆಂಟ್ ಕೂಡ ಆಗಿದ್ದಾಳೆ. ತೇಜಸ್ ಎಲ್ಲಿಗೆ ಹೋಗಿದ್ದಾನೆ ಎಂದು ಎಲ್ಲರೂ ಯೋಚಿಸುವಾಗ ಈಗ ಅವರು ಪ್ರತ್ಯಕ್ಷರಾಗಿದ್ದಾರೆ.

ಅವಳಿಗೆ ಅವಳೇ ತಾಳಿ ಕಟ್ಟಿಕೊಂಡಳು
ನಿತ್ಯಾ ಮಾತ್ರ ತೇಜಸ್ ಎಲ್ಲಿ? ನಾನು ಪ್ರೀತಿಸಿದ ತೇಜಸ್ ಎಲ್ಲಿ ಎಂದು ಹುಡುಕಾಟ ಮಾಡಿದ್ದರು. ಕೊನೆಗೂ ಅವನು ಮೋಸ ಮಾಡಿರೋದು ಗೊತ್ತಾಗಿದೆ. ಈಗ ಅವಳಿಗೆ ಅವಳೇ ತಾಳಿ ಕಟ್ಟಿಕೊಂಡು, ಕರ್ಣನನ್ನು ಮದುವೆ ಆಗಿದ್ದೀನಿ ಅಂತ ಅವನ ಮನೆಗೆ ಪ್ರವೇಶ ಮಾಡಿದ್ದಾಳೆ.
ನಿತ್ಯಾ ಹೊಟ್ಟೆಯಲ್ಲಿ ಮಗು
ತಾಳಿ ಕಟ್ಟುವ ಶಾಸ್ತ್ರ ಬಿಟ್ಟು, ಕರ್ಣ ಹಾಗೂ ನಿತ್ಯಾ ಬಾಕಿಯ ಶಾಸ್ತ್ರವನ್ನು ಎಲ್ಲರ ಮುಂದೆ ಮಾಡಿಕೊಂಡಿದ್ದಾರೆ. ಮುಂದೊಂದು ದಿನ ಸತ್ಯ ಹೇಳೋಣ ಅಂತ ಕರ್ಣ ಅಂದುಕೊಂಡಿದ್ದಾನೆ. ಆದರೆ ನಿತ್ಯಾ ಹೊಟ್ಟೆಯಲ್ಲಿ ಮಗು ಇರುವ ವಿಷಯವನ್ನು ಅವನು ಅವಳಿಗೂ ಕೂಡ ಹೇಳಿಲ್ಲ.
ರೊಮ್ಯಾಂಟಿಕ್ ಡ್ಯಾನ್ಸ್
ಕರ್ಣ ಧಾರಾವಾಹಿಯ ತೇಜಸ್ ಎಲ್ಲಿಗೆ ಹೋಗಿದ್ದಾನೆ ಎನ್ನುವ ಪ್ರಶ್ನೆ ಕಾಡಿತ್ತು. ಈಗ ತೇಜಸ್ ಬೇರೆ ಹುಡುಗಿಯ ಜೊತೆ ರೊಮ್ಯಾಂಟಿಕ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಈಗ ಸೌಂಡ್ ಮಾಡುತ್ತಿದೆ.
ವೀಕ್ಷಕರು ಏನು ಹೇಳಿದ್ರು?
ನಿತ್ಯಾಳನ್ನು ಮದುವೆ ಮನೇಲಿ ಬಿಟ್ಟು ಓಡಿ ಹೋಗಿ ಇಲ್ಲಿ ಈ ಹುಡುಗಿ ಹತ್ರ ಚಕ್ಕಂದ ಆಡ್ತಾ ಇದ್ದೀರಾ ಎಂದೆಲ್ಲ ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ಅವರನ್ನು ಟ್ಯಾಗ್ ಮಾಡಿ, ತೇಜಸ್ ಸಿಕ್ಕಿದ್ರು ಎಂದು ಹೇಳುತ್ತಿದ್ದಾರೆ.
ಮದನ ಮೋಹಿನಿ ಹಾಡು
ತೇಜಸ್ ಪಾತ್ರಧಾರಿ ಚೇತನ್ ರಾಜ್ ಅವರು ಶರಣ್ಯಾ ಭಟ್ ಎನ್ನುವವರ ಜೊತೆ ಒಂದು ರೊಮ್ಯಾಂಟಿಕ್ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾಂತಾರ ಸಿನಿಮಾದ ಮದನ ಮೋಹಿನಿ ಎನ್ನುವ ಹಾಡಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಅದು ಬೇರೆ, ಇದು ಬೇರೆ
ಧಾರಾವಾಹಿ ಕಥೆಯೇ ಬೇರೆ, ರಿಯಲ್ ಕತೆಯೇ ಬೇರೆ, ಇದು ಧಾರಾವಾಹಿಯಂತೆ, ಒಂದು ವಿಶೇಷವಾದ ರೀಲ್ಸ್ ಆಗಿದೆ. ಅಲ್ಲಿ ತೇಜಸ್ ಓಡಿ ಹೋಗಿರುವುದಕ್ಕೆ ನಿಜವಾದ ಕಾರಣ ಏನು ಎಂದು ರಿವೀಲ್ ಆಗಿಲ್ಲ. ತೇಜಸ್ ಎಲ್ಲಿದ್ದಾನೆ ಎಂದು ಕೂಡ ರಿವೀಲ್ ಆಗಿಲ್ಲ.
ರಮೇಶ್ ಕಾರಣಾನಾ?
ತೇಜಸ್ ಓಡಿ ಹೋಗುವುದಕ್ಕೆ ಕರ್ಣನ ತಂದೆ ರಮೇಶ್ ಕಾರಣಾನಾ ಎಂಬ ಪ್ರಶ್ನೆ ಮೂಡಿದೆ. ಕರ್ಣ ಹಾಗೂ ನಿತ್ಯಾ ಮದುವೆ ಆಗಿ ಇವರ ಖುಷಿ ಹಾಳು ಮಾಡೋದು ರಮೇಶ್ ಪ್ಲ್ಯಾನ್ ಆಗಿತ್ತು.
ಮುಂದೆ ಏನಾಗತ್ತೆ?
ಕರ್ಣನನ್ನು ನಿಧಿ ಪ್ರೀತಿ ಮಾಡುತ್ತಿದ್ದಾಳೆ, ನಿಧಿ ಕಂಡ್ರೆ ಕರ್ಣನಿಗೆ ಇಷ್ಟ. ಲೋಕದ ಕಣ್ಣಿಗೆ ನಿತ್ಯಾ ಅವನ ಹೆಂಡ್ತಿ. ಮುಂದೆ ಏನಾಗುವುದು? ಒಟ್ಟಿನಲ್ಲಿ ವೀಕ್ಷಕರಿಗೆ ಸಿಕ್ಕಾಪಟ್ಟೆ ಕುತೂಹಲ ಶುರುವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

