MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • 'ಯಾವ ಮಟ್ಟಿಗಾದ್ರೂ ಇಳೀತೇನೆ ಎನ್ನೋರಿಗೆ Bigg Boss: ಬಾತ್ರೂಮನ್ನೂ ತೋರಿಸ್ತೀನಿ ಅನ್ನೋಳಲ್ಲ ನಾನು'

'ಯಾವ ಮಟ್ಟಿಗಾದ್ರೂ ಇಳೀತೇನೆ ಎನ್ನೋರಿಗೆ Bigg Boss: ಬಾತ್ರೂಮನ್ನೂ ತೋರಿಸ್ತೀನಿ ಅನ್ನೋಳಲ್ಲ ನಾನು'

ಬಿಗ್‌ಬಾಸ್ ರಿಯಾಲಿಟಿ ಶೋ ಟಿಆರ್‌ಪಿಗಾಗಿ ವಿವಾದ ಮತ್ತು ಅಸಭ್ಯತೆಯನ್ನು ಬಳಸಿಕೊಳ್ಳುತ್ತದೆ ಎಂದು ವಿಶ್ಲೇಷಿಸಲಾಗಿದೆ. ಇದೇ ಕಾರಣಕ್ಕೆ ಖ್ಯಾತ ನಟಿ ಜಯಶ್ರೀ ಬಿ.ರಾಜ್ ಅವರು ಶೋನಲ್ಲಿ ಗೆಲ್ಲಲು ಯಾವುದೇ ಮಟ್ಟಕ್ಕೆ ಇಳಿಯಲು ಸಾಧ್ಯವಿಲ್ಲ ಎಂದು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿದ್ದಾರೆ.

2 Min read
Author : Suchethana D
Published : Oct 11 2026, 12:45 PM IST
Share this Photo Gallery
  • FB
  • TW
  • Linkdin
  • Whatsapp
16
ಅತಿ ಹೆಚ್ಚು ಟಿಆರ್​ಪಿ
Image Credit : Social Media

ಅತಿ ಹೆಚ್ಚು ಟಿಆರ್​ಪಿ

ಬಿಗ್​ಬಾಸ್​ (Bigg Boss) ಎಲ್ಲಾ ಭಾಷೆಗಳಲ್ಲಿಯೂ ಅತಿ ಹೆಚ್ಚು ಟಿಆರ್​ಪಿ ಹೊಂದಿರುವ ರಿಯಾಲಿಟಿ ಷೋ. ಇದನ್ನು ಉಗಿಯುತ್ತಲೇ ಮಜಾ ತೆಗೆದುಕೊಳ್ಳುವ ಮನಸ್ಥಿತಿಯವರು ಹಲವರು ಇರುವ ಕಾರಣ ಈ ಷೋ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಕಾಲ ಕ್ರಮೇಣ ಬಿಗ್​ಬಾಸ್​ ತನ್ನ ಜನಪ್ರಿಯತೆ ಕಳೆದುಕೊಂಡು ವೀಕ್ಷಕರ ಸಂಖ್ಯೆ ಕಡಿಮೆ ಆಗುತ್ತಿದೆ ಎಂದಾಗಲೆಲ್ಲಾ, ಟಿಆರ್​ಪಿ ಹೆಚ್ಚಿಸಲು ಉದ್ದೇಶಪೂರ್ವಕವಾಗಿ ಕಾಂಟ್ರವರ್ಸಿ ಕ್ರಿಯೇಟ್​ ಮಾಡುವುದು, ಬಿಗ್​ಬಾಸ್​ ಸ್ಪರ್ಧಿಗಳ ಅಸಹ್ಯ, ಅಸಭ್ಯ ಎನ್ನಿಸುವಂಥ, ಕೊನೆಗೆ ಮಂಚದ ವಿಷಯಕ್ಕೂ ಬಂದು ಅಶ್ಲೀಲ ನಡವಳಿಕೆ ತೋರಿಸಿ ಆ ಬಳಿಕ ಹೋಸ್ಟ್​ ಮಾಡುವವರು ಸ್ಪರ್ಧಿಗಳನ್ನು ಬೈಯುವುದು... ಇವೆಲ್ಲವೂ ಹಿಂದಿಯಂಥ ಬಿಗ್​ಬಾಸ್​ ನೋಡುಗರಿಗೆ ಹೊಸ ವಿಷಯವೇನಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಷೋಗೆ ಹೋಗಲು ನಿರಾಕರಣೆ
Image Credit : Social Media

ಷೋಗೆ ಹೋಗಲು ನಿರಾಕರಣೆ

ಬಿಗ್​ಬಾಸ್​ನ ಬೆರಳೆಣಿಕೆ ಸೀಸನ್​ಗಳನ್ನು ಹೊರತುಪಡಿಸಿದರೆ, ಬಹುತೇಕ ಎಲ್ಲಾ ಸೀಸನ್​ಗಳಲ್ಲಿಯೂ ಹೊಡೆದಾಟ, ಕಿರುಚಾಟಗಳ ಅಬ್ಬರ ಇದ್ದೇ ಇದೆ. ಇದನ್ನೇ ವೀಕ್ಷಕರು ಕುತೂಹಲದಿಂದ ನೋಡುವ ಕಾರಣ ಷೋ ಓಡಿಸಲು ಇದು ಅವರಿಗೆ ಅನಿವಾರ್ಯವೂ ಆಗಿರುವುದು ನಿಜವೇ. ಇದೇ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಸೆಲೆಬ್ರಿಟಿಗಳು, ಈ ಷೋಗೆ ಹೋಗಲು ನಿರಾಕರಿಸುತ್ತಾರೆ ಎನ್ನುವ ಮಾತನ್ನು ಇದಾಗಲೇ ಸಂದರ್ಶನಗಳಲ್ಲಿ ಹೇಳುವುದೂ ಇದೆ.

Related Articles

Related image1
ನನ್ನ ಮೇಲೆ 88 ಲಕ್ಷ ಸಾಲ- ಹೆಂಡ್ತಿನೇ ಎಲ್ಲಾ ನೋಡಿಕೊಳ್ಳೋದು, Bigg Boss ಅವಿನಾಶ್‌ ಕಣ್ಣೀರು
Related image2
Bigg Boss, ಕಳಂಕಿತರನ್ನು ಸ್ಟಾರ್​ ಮಾಡುವ ಗಟಾರ್​ ಷೋ: ಸ್ಟಾಂಡ್ಅಪ್ ಕಾಮಿಡಿಯನ್ ಮಾತಿಗೆ ಫ್ಯಾನ್ಸ್​ ಆಕ್ರೋಶ
36
ನಖಶಿಖಾಂತ ಉರಿ
Image Credit : Asianet News

ನಖಶಿಖಾಂತ ಉರಿ

ಬಿಗ್​ಬಾಸ್​ ಅನ್ನು ವಿರೋಧಿಸುವವರು ಎಷ್ಟು ಮಂದಿ ಇದ್ದಾರೋ ಆರಾಧಿಸುವವರ ಸಂಖ್ಯೆ ಕೂಡ ಅಷ್ಟೇ ಇದೆ. ಈ ಷೋ ಅನ್ನು ಆಸ್ವಾದಿಸುವ ವೀಕ್ಷಕರಿಗೆ, ಅದರ ವಿರುದ್ಧ ಮಾತನಾಡುವವರನ್ನು ಕಂಡರೆ ನಖಶಿಖಾಂತ ಉರಿಹತ್ತುವುದು ಇದೆ. ಇದೇ ಕಾರಣಕ್ಕೆ ಸಂದರ್ಶನಗಳಲ್ಲಿ ಸೆಲೆಬ್ರಿಟಿಗಳು ಇದರ ವಿರುದ್ಧ ಮಾತನಾಡಿದರೆ ತಮ್ಮ ಡಿಕ್ಷನರಿಯಲ್ಲಿ ಇರುವ ಎಲ್ಲಾ ಶಬ್ದಗಳನ್ನೂ ಕಮೆಂಟ್​ ಬಾಕ್ಸ್​ನಲ್ಲಿ ಹಾಕಿ ತೃಪ್ತಿಪಟ್ಟುಕೊಳ್ಳುತ್ತಾರೆ.

46
ಕರ್ಣ ಸೀರಿಯಲ್​ ಖ್ಯಾತಿಯ ನಟಿ
Image Credit : our own

ಕರ್ಣ ಸೀರಿಯಲ್​ ಖ್ಯಾತಿಯ ನಟಿ

ಈಗ ಇದೇ ಮಾತನ್ನು ಹೇಳಿದ್ದಾರೆ ಕರ್ಣ ಸೀರಿಯಲ್​ ಖ್ಯಾತಿಯ ಭುವನೇಶ್ವರಿ ಅರ್ಥಾತ್​ ಕರ್ಣನ ತಾಯಿ ಸೀತಾ ಪಾತ್ರ ಮಾಡುತ್ತಿರುವ ನಟಿ ಜಯಶ್ರೀ ಬಿ.ರಾಜ್​ ಅವರು. ಇವರು ಬಿಗ್​ಬಾಸ್​ನ 6ನೇ ಸೀಸನ್​ನಲ್ಲಿ ಸ್ಪರ್ಧಿಯಾಗಿದ್ದರು. ಬಿಗ್​ಬಾಸ್​ ಬಗ್ಗೆ ಕೇಳಿದಾಗ, ನಾನು ಮಾತನಾಡಿದರೆ ಕ್ಯಾಕರಿಸಿ ಉಗಿಯುತ್ತಾರೆ ಎನ್ನುತ್ತಲೇ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ನಟಿ ಜಯಶ್ರೀ.

56
ಕ್ಯಾಕರಿಸಿ ಉಗೀತಾರೆ ನೋಡಿ
Image Credit : Zee Kannada Instagram

ಕ್ಯಾಕರಿಸಿ ಉಗೀತಾರೆ ನೋಡಿ

statenewsind ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಜಯಶ್ರೀ ಅವರು, ತಮ್ಮ ಮಾತನ್ನು ಕೇಳಿ ಅದರ ಅಭಿಮಾನಿಗಳು ಉಗಿಯುತ್ತಾರೆ ಎನ್ನುತ್ತಲೇ, ನನ್ನ ಅಭಿಪ್ರಾಯ ನಾನು ಹಂಚಿಕೊಳ್ಳುತ್ತೇನೆ. ಅದು ನಿಮ್ಮ ಅಭಿಪ್ರಾಯವೇ ಆಗಿರಬೇಕೆಂದೇನೂ ಇಲ್ಲ. ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ರೀತಿ ಇರುತ್ತದೆ ಎಂದು, ನೀವು ಗೆಲ್ಲಲು ಯಾವ ಮಟ್ಟಿಗಾದರೂ ಹೋಗುತ್ತೀರಿ ಎನ್ನುವವರಿಗೆ ಬಿಗ್​ಬಾಸ್​ ಷೋ ಎಂದಿದ್ದಾರೆ ನಟಿ.

66
ನೀವು ಯಾವ ಲೆವೆಲ್ಲಿಗಾದರೂ ಇಳೀತೇನೆ
Image Credit : Zee Kannada Instagram

ನೀವು ಯಾವ ಲೆವೆಲ್ಲಿಗಾದರೂ ಇಳೀತೇನೆ

ಬಿಗ್​ಬಾಸ್​ ಸೈಕಾಲಾಜಿಕಲ್​ ಗೇಮ್​. ಮೈಂಡ್​ಸೆಟ್​ ಮೇಲೆ ಇರುವಂಥದ್ದು. ನೀವು ಯಾವ ಲೆವೆಲ್ಲಿಗಾದರೂ ಇಳೀತೇನೆ, ಇದನ್ನು ಗೆಲ್ಲುತ್ತೇನೆ ಎನ್ನುವವರಿಗೆ ಈ ಷೋ. ನನಗೆ ನನ್ನ ಪರ್ಸನಲ್​ ವಿಷಯವನ್ನು ಬಿಗ್​ಬಾಸ್​​ ಮನೆಯಲ್ಲಿ ಓಪನ್​ ಆಗಿ ಹೇಳಲು ಇಷ್ಟವಿರಲಿಲ್ಲ. ಗೆಲ್ಲಬೇಕು ಎನ್ನುವ ಉದ್ದೇಶದಿಂದ ಬಚ್ಚಲು ಮನೆಯ ವಿಷಯವನ್ನೂ ಬಿಚ್ಚಿಡುವವಳಲ್ಲ ನಾನು. ಪರ್ಸನಲ್​ ಲೈಫೇ ಬೇರೆ, ಷೋನೇ ಬೇರೆ. ವೈಯಕ್ತಿಯ ಬದುಕನ್ನೂ ಬಿಗ್​ಬಾಸ್​ನಂಥ ಷೋನಲ್ಲಿ ಹೇಳಿ ಎಲ್ಲರ ಸೆಂಟಿಮೆಂಟ್​ ಜೊತೆ ಆಟವಾಡಲು ನನಗೆ ಇಷ್ಟವಿರಲಿಲ್ಲ. ಅದಕ್ಕಾಗಿಯೇ ಬಿಗ್​ಬಾಸ್​ ಮನೆಯಿಂದ ಬೇಗ ಹೊರಕ್ಕೆ ಬಂದೆ ಎಂದಿದ್ದಾರೆ. ಆದ್ದರಿಂದ ಯಾವ ಲೆವೆಲ್​ಗಾದರೂ ಇಳೀತೇನೆ ಎನ್ನುವವರಿಗೆ ಈ ಷೋ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಕರ್ಣ ಧಾರಾವಾಹಿ
ಬಿಗ್ ಬಾಸ್
 

Latest Videos
Recommended Stories
Recommended image1
ಯೂಟ್ಯೂಬ್ ಚಾನೆಲ್ ಆರಂಭಿಸಿದ ಸಲ್ಮಾನ್ ಖಾನ್.. ಫಸ್ಟ್ ವಿಡಿಯೋದಲ್ಲಿ ಮಾಡಿದ್ದೇನು?
Recommended image2
Bigg Boss Kannada "ಪ್ರೋಮೋ ನಿಜವಾಗಿದ್ರೆ ಮಾತ್ರ ಕರ್ನಾಟಕ ನಿಮ್ಮನ್ನು ನಂಬುತ್ತೆ"
Recommended image3
Nana Patekar: ದೋಸ್ತಿ ಅಂದ್ರೆ ಇಷ್ಟೇನಾ? ಗೆಳೆಯಾ ಅಂದವರು ಯಾರು ನಾನಾ ಅಂತ್ಯಕ್ರಿಯೆಗೆ ಬರಲೇ ಇಲ್ಲಾ? ಭಾವುಕರಾದ ಡೈರೆಕ್ಟರ್‌
Related Stories
Recommended image1
ನನ್ನ ಮೇಲೆ 88 ಲಕ್ಷ ಸಾಲ- ಹೆಂಡ್ತಿನೇ ಎಲ್ಲಾ ನೋಡಿಕೊಳ್ಳೋದು, Bigg Boss ಅವಿನಾಶ್‌ ಕಣ್ಣೀರು
Recommended image2
Bigg Boss, ಕಳಂಕಿತರನ್ನು ಸ್ಟಾರ್​ ಮಾಡುವ ಗಟಾರ್​ ಷೋ: ಸ್ಟಾಂಡ್ಅಪ್ ಕಾಮಿಡಿಯನ್ ಮಾತಿಗೆ ಫ್ಯಾನ್ಸ್​ ಆಕ್ರೋಶ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved