- Home
- Entertainment
- TV Talk
- 'ಲೋ ಅರ್ಜುನ, ನಿಂಗೆ ಹಾರ್ಟ್ ಸರ್ಜನ್ ಸರ್ಟಿಫಿಕೇಟ್ ಕೊಟ್ಟವರು ಯಾರು?' Karna Serial ಫ್ಯಾನ್ಸ್ ಆಕ್ರೋಶ
'ಲೋ ಅರ್ಜುನ, ನಿಂಗೆ ಹಾರ್ಟ್ ಸರ್ಜನ್ ಸರ್ಟಿಫಿಕೇಟ್ ಕೊಟ್ಟವರು ಯಾರು?' Karna Serial ಫ್ಯಾನ್ಸ್ ಆಕ್ರೋಶ
ಕರ್ಣ ಸೀರಿಯಲ್‌ನಲ್ಲಿ, ಅಕ್ಕ ನಿತ್ಯಾಳ ಪ್ರೀತಿಗಾಗಿ ತಂಗಿ ನಿಧಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ಅರ್ಜುನ್‌ನನ್ನು ಮದುವೆಯಾಗಲು ಒಪ್ಪಿದ್ದಾಳೆ. ಆದರೆ, ಹಾರ್ಟ್ ಸರ್ಜನ್ ಆಗಿರುವ ಅರ್ಜುನ್‌ಗೆ ನಿಧಿಯ ಮನಸ್ಸಿನ ದುಃಖ ಅರ್ಥವಾಗದಿರುವುದು ನೆಟ್ಟಿಗರ ಟ್ರೋಲ್‌ಗೆ ಕಾರಣವಾಗಿದೆ.

ನಿತ್ಯಾಗೆ ಸದ್ಯ ಗೆಲುವು
ಕರ್ಣ ಸೀರಿಯಲ್‌ನಲ್ಲಿ ಸದ್ಯ ನಿತ್ಯಾ ಮತ್ತು ನಿಧಿಯ ನಡುವಿನ ತೊಳಲಾಟದಲ್ಲಿ ನಿತ್ಯಾ ಗೆಲುವು ಸಾಧಿಸಿದ್ದಾಳೆ. ಕರ್ಣನ ಮೇಲೆ ತನಗೆ ಲವ್ ಆಗಿರುವ ವಿಷಯವನ್ನು ಅವಳು ತಂಗಿ ನಿಧಿ ಎದುರಿಗೆ ಹೇಳಿಕೊಂಡು ಬಿಟ್ಟಿದ್ದಾಳೆ.
ನಿಧಿ ನಿರುತ್ತರ
ತನ್ನ ಅಕ್ಕನಿಗೆ ತನ್ನ ಲವ್ ವಿಷ್ಯ ಹೇಳೋಣ ಎಂದುಕೊಂಡು ಕಾತರದಿಂದ ನಿಧಿ ಕಾಯುತ್ತಿದ್ದಳು. ಆದರೆ ಅದಕ್ಕೂ ಮುಂಚೆ ನಿತ್ಯಾ ತನಗೆ ಕರ್ಣನ ಮೇಲೆ ಲವ್ ಆಗಿರೋ ವಿಷ್ಯ ತಿಳಿಸಿಬಿಟ್ಟಿದ್ದರಿಂದ ನಿಧಿ ಅಕ್ಕನಿಗಾಗಿ ತ್ಯಾಗ ಮಾಡಲು ಸಿದ್ಧ ಆಗಿದ್ದಾಳೆ.
ಅರ್ಜುನ್ ಜೊತೆ ಮದುವೆಗೆ ಸಿದ್ಧ
ನಿಧಿ ಮತ್ತು ಅರ್ಜುನ್ ಮದುವೆ ಮಾತುಕತೆ ನಡೆಯುತ್ತಿರುವ ಕಾರಣ, ಅವನನ್ನು ಮದುವೆಯಾಗಲು ತಾನು ಸಿದ್ಧ ಎಂದು ನಿಧಿ ಹೇಳಿಬಿಟ್ಟಿದ್ದಾಳೆ. ಇದನ್ನು ಕೇಳಿ ಕರ್ಣನಿಗೆ ಶಾಕ್ ಆಗಿದೆ.
ನಿತ್ಯಾ ಅತ್ತರೂ ಗೊತ್ತೇ ಆಗಲಿಲ್ಲ
ನಿತ್ಯಾ ಅಳುತ್ತಾ ಈ ವಿಷಯವನ್ನು ಹೇಳಿದರೂ, ಅದು ಅರ್ಜುನ್‌ಗೆ ಗೊತ್ತೇ ಆಗಲಿಲ್ಲ. ನಿಧಿ ಮದುವೆಗೆ ಒಪ್ಪಿದ್ದು ನೋಡಿ ಖುಷಿಯಿಂದ ಕುಣಿದಾಡಿದ್ದಾನೆ.
ಇವನೊಬ್ಬ ಹೃದಯ ತಜ್ಞನಾ?
ಹೇಳಿ ಕೇಳಿ ಅವನು ಹಾರ್ಟ್ ಸರ್ಜನ್. ನಿಧಿ ಅಳುತ್ತಾ ಇರುವುದನ್ನು ನೋಡದಿದ್ದರೂ ಅವಳ ಮುಖ ನೋಡಿಯಾದರೂ ಅವನಿಗೆ ಅವಳಿಗೆ ಈ ಮದುವೆ ಇಷ್ಟ ಇಲ್ಲ ಎನ್ನುವುದು ತಿಳಿಯಬೇಕಿತ್ತು. ಆದರೆ ನಿಧಿ ಅಳುತ್ತಾ ಇದ್ದರೂ ಅವನಿಗೆ ಗೊತ್ತೇ ಆಗಲಿಲ್ಲ.
ಸರ್ಟಿಫಿಕೇಟ್ ಕೊಟ್ಟವರಿಗೆ ತಡಕಾಟ
ಇದರ ಪ್ರೊಮೋ ಬಿಡುಗಡೆಯಾಗುತ್ತಲೇ ಅರ್ಜುನ್‌ಗೆ ಹಾರ್ಟ್ ಸರ್ಜನ್ ಸರ್ಟಿಫಿಕೇಟ್ ಕೊಟ್ಟವರು ಯಾರು, ಅವರನ್ನು ಎಳೆದುಕೊಂಡು ಬನ್ನಿ ಎಂದು ನೆಟ್ಟಿಗರು ತಮಾಷೆಯ ಕಮೆಂಟ್ಸ್ ಮಾಡುತ್ತಿದ್ದಾರೆ. ನಿಧಿಯ ಮುಖ ನೋಡಿದ್ರೂ ಅವಳ ಹೃದಯದಲ್ಲಿ ತಾನಿಲ್ಲ ಎನ್ನುವುದು ಅವನಿಗೆ ಗೊತ್ತಾಗಲಿಲ್ಲ ಎಂದ ಮೇಲೆ ಅವನನ್ನು ಹಾರ್ಟ್ ಸರ್ಜನ್ ಎಂದು ರೋಲ್ ಕೊಡುವ ಅಗತ್ಯ ಏನಿತ್ತು ಎಂದೂ ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

