- Home
- Entertainment
- TV Talk
- Karna Serial: ನಿತ್ಯಾ ಪ್ರಗ್ನೆಂಟ್ ಆಗಿರೋದು ಸುಳ್ಳಾ? ಕರ್ಣನ ಮುಂದೆ ಆ ಮಾತು ಯಾಕೆ ಬಂತು?
Karna Serial: ನಿತ್ಯಾ ಪ್ರಗ್ನೆಂಟ್ ಆಗಿರೋದು ಸುಳ್ಳಾ? ಕರ್ಣನ ಮುಂದೆ ಆ ಮಾತು ಯಾಕೆ ಬಂತು?
Karna Kannada Serial Episode Update: ಕರ್ಣ ಧಾರಾವಾಹಿಯಲ್ಲಿ ನಿತ್ಯಾ, ಕರ್ಣ ಈಗ ಚಿಕ್ಕಮಗಳೂರಿನಲ್ಲಿದ್ದಾರೆ. ಆ ವೇಳೆ ಅವರು ಹೋಟೆಲ್‌ನಲ್ಲಿದ್ದಾರೆ. ಅಲ್ಲಿ ಅವರಿಬ್ಬರು ಊಟ-ತಿಂಡಿ ಮಾಡಿದ್ದಾರೆ. ಈ ವೇಳೆ ನಿತ್ಯಾ ಬೇಸರ ಮಾಡಿಕೊಂಡಿದ್ದಾಳೆ. ಸದ್ಯ ವಾಹಿನಿಯು ಈ ಬಗ್ಗೆ ಪ್ರೋಮೋ ರಿಲೀಸ್ ಮಾಡಿದೆ.

ನಿತ್ಯಾಗೆ ಬೇಸರ ಆಯ್ತು
ನಿತ್ಯಾ ಅವರು ಸ್ವಲ್ಪ ಊಟ ಮಾಡಿ ಆಮೇಲೆ ಸಾಕು ಎಂದು ಎದ್ದಿದ್ದಾಳೆ. ಆಗ ಕರ್ಣ, “ನಿತ್ಯಾ ಅವರೇ, ಸ್ವಲ್ಪ ತಿಂದಿದ್ದೀರಾ, ಈ ಟೈಮ್‌ನಲ್ಲಿ ನೀವು ಇಷ್ಟು ಕಡಿಮೆ ತಿನ್ನಬಾರದು” ಎಂದು ಹೇಳಿದ್ದಾರೆ. ಆಗ ಅಲ್ಲಿದ್ದ ಒಂದು ಜೋಡಿ, “ಜೋಡಿ ಅಂದ್ರೆ ಹೀಗೆ ಇರಬೇಕು” ಎಂದು ಹೇಳಿದೆ. ಅದನ್ನು ಕೇಳಿ ನಿತ್ಯಾ ಬೇಸರ ಮಾಡಿಕೊಂಡಿದ್ದಾಳೆ.
ಪ್ರೀತಿಯಲ್ಲಿ ಯಾಮಾರಿದೆ
ಬೇರೆಯವರು ತಮ್ಮನ್ನು ಜೋಡಿ ಎಂದುಕೊಂಡಿರೋದು ನಿತ್ಯಾಗೆ ಬೇಸರ ತಂದಿದೆ. ಹೀಗಾಗಿ ಅವಳು ಅಲ್ಲಿಂದ ಎದ್ದು ಹೋಗಿದ್ದಾಳೆ. “ಒಂದು ಹೆಣ್ಣು ಒಬ್ಬರ ಜೊತೆ ಒಂದು ಕ್ಷಣ ಸಲಿಗೆಯಿಂದ ಇದ್ದರೆ ಎಷ್ಟು ಕಥೆ ಕಟ್ಟುತ್ತಾರೆ ಗೊತ್ತಾ? ಪ್ರೀತಿಯಿಂದ ಯಾಮಾರಿದ್ನೋ, ಅಥವಾ ಸಂದರ್ಭ ಹಾಗೆ ಅಂದುಕೊಳ್ಳೋ ಮಾಡ್ತೋ ಗೊತ್ತಿಲ್ಲ” ಎಂದು ಅವರು ಕರ್ಣನ ಬಳಿ ಹೇಳಿದ್ದಾರೆ.
ಸಮಾಧಾನ ಮಾಡಿದ ಕರ್ಣ
ನಿತ್ಯಾ ಮಾತು ಕೇಳಿ, ಕರ್ಣ, “ನಿಮ್ಮ ಮಾತಿಗೆ ಒಂದು ಮಾತಿನಲ್ಲಿ ಸಮಾಧಾನ ಮಾಡೋಕೆ ಆಗಲ್ಲ. ಆದರೆ ನೀವು ಕಳೆದುಕೊಂಡಿರೋ ಖುಷಿ ಯಾವುದೋ ರೂಪದಲ್ಲಿ ನಿಮ್ಮ ಮಡಿಲು ಸೇರುತ್ತದೆ ಎಂದು ಪ್ರಾಮೀಸ್ ಮಾಡ್ತೀನಿ” ಎಂದು ಹೇಳಿದ್ದಾರೆ.
ಕರ್ಣ ಹೇಳಿದ್ದೇನು?
ಕರ್ಣ ಯಾವ ವಿಷಯ ಮಾತಾಡಿದ್ದಾನೆ ಅಂತ ವೀಕ್ಷಕರು ಯೋಚನೆ ಮಾಡಿದ್ದಾರೆ. ನಿತ್ಯಾ ಹೊಟ್ಟೆಯಲ್ಲಿ ಮಗು ಇದ್ದು, ಆ ಮಗು ಬರುತ್ತದೆ ಎಂಬುದಕ್ಕೆ ಖುಷಿ ನಿಮ್ಮ ಮಡಿಲು ಸೇರುತ್ತದೆ ಅಂತ ಹೇಳಿದನೋ ಅಥವಾ ತೇಜಸ್ ಮತ್ತೆ ಸಿಗುತ್ತಾನೆ ಅಂತ ಹೇಳಿದನೋ ಗೊತ್ತಿಲ್ಲ.
ತೇಜಸ್‌ಗೆ ಏನಾಗಿದೆ
ಚಿಕ್ಕಮಗಳೂರಿನಲ್ಲಿ ತೇಜಸ್‌ನನ್ನು ರಮೇಶ್ ಕಿಡ್ನ್ಯಾಪ್ ಮಾಡಿಟ್ಟಿದ್ದಾನೆ. ತೇಜಸ್ ಚಿಕ್ಕಮಗಳೂರಿನಲ್ಲಿರೋದು ಕರ್ಣನಿಗೆ ಗೊತ್ತಾಗಿದೆ. ಹೀಗಾಗಿ ಅವರು ಅಲ್ಲಿಗೆ ಹೋಗಿದ್ದಾರೆ. ಕರ್ಣ ಅವನನ್ನು ಹುಡುಕೋದರೊಳಗಡೆ ತೇಜಸ್ ಸಾಯುತ್ತಾನಾ ಎಂದು ಕಾದು ನೋಡಬೇಕಿದೆ. ನಿಧಿ, ಕರ್ಣನ ಖುಷಿ ಹಾಳು ಮಾಡೋದೇ ರಮೇಶ್ ಗುರಿ.
ನಿತ್ಯಾ ಯಾಕೆ ಆ ಥರ ಮಾತಾಡಿದಳು?
ಪ್ರೀತಿಯಲ್ಲಿ ಯಾಮಾರಿದೆ ಎಂದು ನಿತ್ಯಾ ಹೇಳಿದ್ದಾಳೆ. ಪ್ರಗ್ನೆಂಟ್ ಆದೆ ಎಂದು ಹೇಳಿದಳೋ ಅಥವಾ ತೇಜಸ್ ಮೋಸ ಮಾಡಿರೋದಿಕ್ಕೆ ಅವಳು ಈ ಮಾತು ಹೇಳಿದಳೋ ಎನ್ನೋ ಗೊಂದಲ ಇದೆ.
ಇಷ್ಟೆಲ್ಲ ಮಾತನಾಡೋ ನಿತ್ಯಾ, ಮದುವೆಗೂ ಮುನ್ನವೇ ಮೈಮರೆತು ಹೀಗೆ ನಡೆದುಕೊಳ್ತಾಳಾ? ತಾಯಿ ಆಗ್ತಾಳಾ ಎಂಬ ಪ್ರಶ್ನೆಯೂ ಇದೆ.