Karna Serial: ರಮೇಶ್‌ನಿಗೆ ಮತ್ತೊಂದು ಶಾಕ್; ಗಾಯಗೊಂಡ ಹಾವಿನಂತಾದ ಕರ್ಣನ ನೀಚ ತಂದೆ
Ramesh s plan failed: ಮಗ ಕರ್ಣನ ನಗುವನ್ನು ಕಿತ್ತುಕೊಳ್ಳಲು ತಂದೆ ರಮೇಶ್ ರೂಪಿಸಿದ ಸಂಚು ವಿಫಲವಾಗಿದೆ. ಮನೆಗೆ ಬಂದ ಮಹಿಳೆಯರ ಕೊಂಕು ಮಾತುಗಳಿಗೆ ಕರ್ಣ ತಕ್ಕ ಉತ್ತರ ನೀಡಿದ್ದು, ನಿತ್ಯಾಳನ್ನು ಗೆಲ್ಲಿಸಿದ್ದಾನೆ. ಇದರಿಂದ ರಮೇಶ್ ಮತ್ತೊಮ್ಮೆ ಸೋಲನುಭವಿಸಿದ್ದಾನೆ.

ರಮೇಶ್ ಸಂಚು
ಕರ್ಣನ ನಗುವನ್ನು ಸಂಪೂರ್ಣವಾಗಿ ಕಿತ್ತುಕೊಳ್ಳಬೇಕೆಂದು ರಮೇಶ್ ಸಂಚುಗಳನ್ನು ರೂಪಿಸುತ್ತಿದ್ದಾನೆ. ನಿತ್ಯಾ ಜೊತೆಯಲ್ಲಿ ಕರ್ಣನ ಮದುವೆಯಾಗಿದೆ ಎಂದು ಭ್ರಮೆಯಲ್ಲಿರುವ ರಮೇಶ್, ಇಬ್ಬರಿಗೂ ನೋವುಂಟು ಪ್ರಯತ್ನದಲ್ಲಿದ್ದಾನೆ. ತಂದೆಯ ನೀಚತನ ತಿಳಿಯದ ಕರ್ಣ ಮಾತ್ರ ಎದುರಾಗುತ್ತಿರುವ ಎಲ್ಲಾ ಸಮಸ್ಯೆಗಳನ್ನು ನಗುತ್ತಲೇ ಎದುರಿಸುತ್ತಿದ್ದಾನೆ.
ರಮೇಶ್‌ನಿಗೆ ಶಾಕ್
ಸಾಮಾನ್ಯವಾಗಿ ಮನೆಗೆ ಬಂದ ಸೊಸೆಯನ್ನು ಸಂಬಂಧಿಕರಿಗೆ ಪರಿಚಯ ಮಾಡಿಸಲು ನೆರೆಹೊರೆಯವರು ಮತ್ತು ಸಂಬಂಧಿಕರನ್ನು ಕರೆಸಿ ಕಾರ್ಯಕ್ರಮ ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಮಹಿಳೆಯರಿಗೆ ಮಾತ್ರ ಆಹ್ವಾನಿಸಲಾಗಿರುತ್ತದೆ. ಆದ್ರೆ ಕರ್ಣ ಮತ್ತು ನಿತ್ಯಾ ಮದುವೆ ರಹಸ್ಯಗಳೊಂದಿಗೆ ನಡೆದಿತ್ತು. ಮದುವೆ ಮರುದಿನ ಕರ್ಣನ ಸೋತ ಮುಖ ನೋಡಲು ಬಂದಿದ್ದ ರಮೇಶ್‌ನಿಗೆ ಶಾಕ್ ಆಗಿತ್ತು.
ನಗುತ್ತಲೇ ದಿನಚರಿ
ಎಲ್ಲಾ ನೋವುಗಳನ್ನು ತನ್ನ ಎದೆಯಾಳದಲ್ಲಿ ಬಚ್ಚಿಟ್ಟುಕೊಂಡಿರುವ ಕರ್ಣ ಎಂದಿನಂತೆ ನಗುತ್ತಲೇ ದಿನಚರಿ ಆರಂಭಿಸಿದ್ದನು. ಕರ್ಣನ ನಗು ನೋಡಿದ ರಮೇಶ್‌ಗೆ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಗಿತ್ತು. ಗಾಯಗೊಂಡ ಹಾವಿನಂತಾಗಿದ್ದ ರಮೇಶ್, ಕೊಂಕು ಮಾತುಗಳನ್ನಾಡುವ ಲೇಡಿ ಗ್ಯಾಂಗ್‌ನ್ನು ಮನೆಗೆ ಕರೆಸಿಕೊಂಡು ಮತ್ತೊಮ್ಮೆ ಕರ್ಣನ ಮುಂದೆ ಸೋತಿದ್ದಾನೆ.
ಲೇಡಿ ಗ್ಯಾಂಗ್
ಮನೆಗೆ ಬಂದ ಲೇಡಿ ಗ್ಯಾಂಗ್, ಕ್ಷಣ ಕ್ಷಣಕ್ಕೂ ತಮ್ಮ ಕೊಂಕು ಮಾತುಗಳಿಂದ ನಿತ್ಯಾ ಮತ್ತು ಶಾಂತಿ ಮನಸ್ಸು ನೋಯಿಸುತ್ತಿದ್ದರು. ಅಡುಗೆ ಮಾಡಲು ಬರದ ನಿತ್ಯಾ ಕೈರುಚಿ ನೋಡಲು ಬಯಸುತ್ತೇವೆ ಅಂತಾ ಹೇಳುತ್ತಾರೆ. ಕರ್ಣನ ಸಹಾಯದಿಂದ ನಿತ್ಯಾ ಸಿಹಿ ಅಡುಗೆ ಮಾಡಿ ಗೆಲ್ಲುತ್ತಾಳೆ. ಸಿಹಿ ತಿನ್ನುತ್ತಲೇ ವಿಷ ಉಗುಳುತ್ತಿದ್ದ ಆಂಟಿಯರಿಗೆ ಕರ್ಣ ತರಾಟೆ ತೆಗೆದುಕೊಂಡಿದ್ದಾನೆ.
ಇದನ್ನೂ ಓದಿ: Karna Serial: ಕರ್ಣನ ಮುಂದಿದೆ 'ಪಂಚ' ಸವಾಲುಗಳ ಚಕ್ರವ್ಯೂಹ: ಬಯಲಾಗುವುದೇ 'ಮೂರು' ಸತ್ಯ?
ಕರ್ಣ ಸೀರಿಯಲ್
ಕೊಂಕು ಮಾತುಗಳನ್ನಾಡುತ್ತಿದ್ದ ಮಹಿಳಾಮಣಿಳಿಗೆ ಕರ್ಣ ತಿರುಗೇಟು ನೀಡಿದ್ದನ್ನು ನೋಡಿ ಇಬ್ಬರು ಅಜ್ಜಿಯರು ಮತ್ತು ಅಮ್ಮ ಮಾಲತಿ ಖುಷಿಯಾಗಿದ್ದಾರೆ. ಇಲ್ಲಿಯೂ ತನ್ನ ಪ್ಲಾನ್ ಫೇಲ್ ಆಗಿದ್ದಕ್ಕೆ ರಮೇಶ್ ಗಾಯಗೊಂಡ ಹಾವಿನಂತಾಗಿದ್ದಾನೆ.
ಮತ್ತೊಂದೆಡೆ ಕರ್ಣನ ಮನೆಯಿಂದ ದೂರ ಹೋಗಲು ಅಜ್ಜಿ ಮತ್ತು ನಿಧಿ ಪ್ಲಾನ್ ಮಾಡಿದ್ದಾರೆ. ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತೇನೆಂದು ಅಜ್ಜಿಗೆ ನಿಧಿ ಭರವಸೆ ನೀಡಿದ್ದಾಳೆ. ಕೆಲಸ ಮಾಡಿ ಒಂದಿಷ್ಟು ಹಣ ಕೊಡುತ್ತೇನೆ ಅಂತ ನಿತ್ಯಾ ಸಹ ಹೇಳಿದ್ದಾನೆ. ಮದುವೆಯಾದ ಮಗಳಿಗೆ ತವರಿನ ಭಾರ ಹಾಕಬಾರದು ಎಂಬ ಶಾಂತಿ ಮಾತಿಗೆ ನಿಧಿ ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ: Actor Kiran Raj: ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ ಕಿರುತೆರೆಯ ಕರ್ಣ ಕಿರಣ್ ರಾಜ್