- Home
- Entertainment
- TV Talk
- Karna Serial: ಹನಿಮೂನ್‌ಗೆ ರೆಡಿಯಾದ ನಿತ್ಯಾ, ಕರ್ಣ; ಲೀಕ್ ಆದ ಫೋಟೋದ ಹಿಂದಿದೆ ಬೇರೆಯದೇ ಸತ್ಯ! ಏನದು?
Karna Serial: ಹನಿಮೂನ್‌ಗೆ ರೆಡಿಯಾದ ನಿತ್ಯಾ, ಕರ್ಣ; ಲೀಕ್ ಆದ ಫೋಟೋದ ಹಿಂದಿದೆ ಬೇರೆಯದೇ ಸತ್ಯ! ಏನದು?
Karna Kannada Serial Actress Bhavya Gowda: ಕರ್ಣ ಧಾರಾವಾಹಿಯಲ್ಲಿ ನಿತ್ಯಾ, ಕರ್ಣ ತಾವು ಮದುವೆ ಆಗಿರೋದಾಗಿ ನಾಟಕ ಮಾಡಿದ್ದಾರೆ. ಇದು ಮಾಲತಿ ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ. ಇನ್ನೊಂದು ಕಡೆ ತೇಜಸ್ ಚಿಕ್ಕಮಗಳೂರಿನಲ್ಲಿರೋದು ವೀಕ್ಷಕರಿಗೆ ಗೊತ್ತಾಗಿದೆ. ಮುಂದೆ ಏನಾಗುವುದು?

ಮಾಲತಿಗೆ ಮೊದಲು ವಿಷಯ ಗೊತ್ತಾಯ್ತು
ರಮೇಶ್ ಫೋನ್‌ನಲ್ಲಿ ತೇಜಸ್ ಬಗ್ಗೆ ಮಾತನಾಡಿರೋದು, ತೇಜಸ್ ಚಿಕ್ಕಮಗಳೂರಿನಲ್ಲಿರೋದು ಮಾಲತಿಗೆ ಗೊತ್ತಾಯ್ತು, ಅವಳು ಈ ವಿಷಯವನ್ನು ಕರ್ಣನಿಗೆ ಹೇಳಿದ್ದಾಳೆ. ಆಮೇಲೆ ಕರ್ಣ ಇದನ್ನು ನಿತ್ಯಾಗೆ ಹೇಳಿದ್ದಾನೆ.
ಹನಿಮೂನ್‌ಗೆ ಹೊರಟರಾ?
ನಿತ್ಯಾಗೆ ತೇಜಸ್ ಸುಳಿವು ಸಿಕ್ಕಿರೋದು ಖುಷಿ ಕೊಟ್ಟಿದೆ. ಚಿಕ್ಕಮಗಳೂರಿಗೆ ಹೋಗೋಣ ಎಂದು ನಿತ್ಯಾ ಹೇಳಿದ್ದಾಳೆ. ಆಗ ರಮೇಶ್ ಕೂಡ ಬಂದಿದ್ದು, ಹನಿಮೂನ್‌ಗೆ ಹೊರಟರಾ? ಎಂದು ಪ್ರಶ್ನೆ ಮಾಡಿದ್ದಾನೆ. ಆಗ ಅವರಿಬ್ಬರು ಖುಷಿಯಿಂದ ತಲೆ ಅಲ್ಲಾಡಿಸಿದ್ದಾರೆ.
ಹನಿಮೂನ್‌ಗೆ ನಿಧಿಯೂ ಬಂದ್ರಾ?
ಕರ್ಣ ಹಾಗೂ ನಿತ್ಯಾ ಚಿಕ್ಕಮಗಳೂರಿಗೆ ಹೋಗಬಹುದು, ಅಲ್ಲಿಗೆ ನಿಧಿ ಕೂಡ ಬರ್ತಾಳಾ ಎಂಬ ಪ್ರಶ್ನೆ ಶುರುವಾಗಿದೆ, ಅಂದಹಾಗೆ ಭವ್ಯಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಭವ್ಯಾ ಗೌಡ ಭರ್ಜರಿ ಟ್ರಿಪ್
ಚಿಕ್ಕಮಗಳೂರಿನಲ್ಲಿ ಎಲ್ಲೆಲ್ಲೂ ಬೆಟ್ಟ ಗುಡ್ಡಗಳಿವೆ. ಮಲೆನಾಡು ಎಂಬ ಹ್ಯಾಶ್‌ಟ್ಯಾಗ್ ಕೊಟ್ಟು ಭವ್ಯಾ ಗೌಡ ಅವರು ಸುಂದರವಾದ ಪರಿಸರದ ಮಧ್ಯೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇವುಗಳನ್ನು ನೋಡಿದರೆ ಭವ್ಯಾ ಗೌಡ ಕೂಡ ಚಿಕ್ಕಮಗಳೂರಿಗೆ ಹೋದಂತಿದೆ.
ಹನಿಮೂನ್‌ಗೆ ಹೋಗ್ತಿದ್ದಾರೆ
ನಿಧಿ ಪ್ರಕಾರ ಕರ್ಣ, ನಿತ್ಯಾ ಮದುವೆ ಆಗಿದೆ. ಇವರಿಬ್ಬರು ಖುಷಿಯಿಂದ ಹನಿಮೂನ್‌ಗೆ ಹೋಗ್ತಿದ್ದಾರೆ ಎಂದು ತಿಳಿದು ಅವಳಿಗೆ ಬೇಸರ ಆಗಿರಬಹುದು. ಇನ್ನೊಂದು ಕಡೆ ಭವ್ಯಾ ಗೌಡ ಚಿಕ್ಕಮಗಳೂರಿಗೆ ಹೋಗಿದ್ದು ನಿಜವೇ? ಅಥವಾ ಇದು ಅವರ ವೈಯಕ್ತಿಕ ಟ್ರಿಪ್ ಫೋಟೋನಾ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.