- Home
- Entertainment
- TV Talk
- ಕರ್ಣ ಧಾರಾವಾಹಿಯಲ್ಲಿ ಮುಂದೆ ಟ್ವಿಸ್ಟ್ ಇದೆ; 200 ಖುಷೀಲಿ ಸೀಕ್ರೆಟ್ ರಿವೀಲ್ ಮಾಡಿದ ನಟಿ ಭವ್ಯಾ ಗೌಡ!
ಕರ್ಣ ಧಾರಾವಾಹಿಯಲ್ಲಿ ಮುಂದೆ ಟ್ವಿಸ್ಟ್ ಇದೆ; 200 ಖುಷೀಲಿ ಸೀಕ್ರೆಟ್ ರಿವೀಲ್ ಮಾಡಿದ ನಟಿ ಭವ್ಯಾ ಗೌಡ!
karna serial: ಕರ್ಣ ಧಾರಾವಾಹಿ ಆರಂಭವಾಗಿ 200 ಸಂಚಿಕೆಗಳು ಪ್ರಸಾರ ಆಗಿವೆ. ಕರ್ಣ, ನಿತ್ಯಾ, ನಿಧಿ ಪಾತ್ರದ ಸುತ್ತವೇ ಈ ಸೀರಿಯಲ್ ಕತೆ ಸಾಗುತ್ತಿದೆ. ನಿಧಿ ಪಾತ್ರದಲ್ಲಿ ಭವ್ಯಾ ಗೌಡ ಅವರು ನಟಿಸುತ್ತಿದ್ದಾರೆ. ಈಗ ಸೀರಿಯಲ್ ಬಗ್ಗೆ ಭವ್ಯಾ ಗೌಡ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.

200 ಸಂಚಿಕೆಗಳನ್ನು ಪೂರೈಸಿದ್ದೇವೆ
ಕರ್ಣ ಧಾರಾವಾಹಿಯ ‘ನಿಧಿ’ ಪಾತ್ರಕ್ಕೆ ನೀವು ನೀಡಿದ ಅಪಾರ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಸದಾಕಾಲ ಚಿರಋಣಿ.
ನಿಮ್ಮ ಬೆಂಬಲ, ಸಂದೇಶಗಳು ಮತ್ತು ನಿರಂತರ ಪ್ರೋತ್ಸಾಹ ನನಗೆ ತುಂಬಾನೇ ಮುಖ್ಯ! ನಾವು ಅಧಿಕೃತವಾಗಿ 200 ಸಂಚಿಕೆಗಳನ್ನು ಪೂರೈಸಿದ್ದೇವೆ. ಇದು ನಮ್ಮೆಲ್ಲರಿಗೂ ಒಂದು ಹೆಮ್ಮೆಯ ಕ್ಷಣ ಮತ್ತು ದೊಡ್ಡ ಮೈಲಿಗಲ್ಲು
ನಂಬಿಕೆ ಇಟ್ಟು ಅವಕಾಶ ಕೊಟ್ರಿ
ಈ ಸುಂದರ ಪ್ರಯಾಣಕ್ಕಾಗಿ ತೆರೆಯ ಹಿಂದೆ ಮತ್ತು ತೆರೆಯ ಮುಂದೆ ದಣಿವಿಲ್ಲದೆ ದುಡಿದ ನಮ್ಮ ಇಡೀ ತಂಡಕ್ಕೆ ಅಭಿನಂದನೆಗಳು. ನನ್ನ ಮೇಲೆ ನಂಬಿಕೆಯಿಟ್ಟು ಈ ಅದ್ಭುತ ಅವಕಾಶವನ್ನು ನೀಡಿದ ಪ್ರತಿಯೊಬ್ಬ ಕಲಾವಿದರಿಗೂ, ನಮ್ಮ ವಾಹಿನಿಗೆ ಮತ್ತು ನಿರ್ಮಾಣ ಸಂಸ್ಥೆಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.
ವಿಶೇಷತೆಗಳಿವೆ
ನಮ್ಮ ಪ್ರೀತಿಯ ವೀಕ್ಷಕರಿಗೆ, ನಮಗೆ ಅಪಾರ ಪ್ರೀತಿ, ಅಮೂಲ್ಯವಾದ ಪ್ರತಿಕ್ರಿಯೆಗಳನ್ನು ನೀಡುತ್ತಾ, ಈ ಪಯಣದ ಪ್ರತಿ ಹಂತದಲ್ಲೂ ನಮ್ಮ ಜೊತೆಗಿದ್ದಕ್ಕಾಗಿ ಧನ್ಯವಾದಗಳು. ಇದೇ ರೀತಿ ನಿಮ್ಮ ಬೆಂಬಲ ನಮ್ಮ ಮೇಲಿರಲಿ. ಮುಂದಿನ ಸಂಚಿಕೆಗಳನ್ನು ತಪ್ಪದೇ ವೀಕ್ಷಿಸಿ... ಇನ್ನೂ ಹೆಚ್ಚಿನ ವಿಶೇಷತೆಗಳು ನಿಮಗಾಗಿ ಕಾಯುತ್ತಿವೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

