ಒಳ್ಳೇದು ಮಾಡೋ ಭರದಲ್ಲಿ ತೇಜಸ್ ಬಳಿ ಆ ಸತ್ಯ ಹೇಳಿ ಆಪತ್ತನ್ನ ಮೈಮೇಲೆ ಎಳೆದುಕೊಂಡ ಕರ್ಣ
Karna in trouble episode: ಈ ತರಹ ಏಕಾಏಕಿ ನಿರ್ಧಾರ ತೆಗೆದುಕೊಳ್ಳುತ್ತಿರುವ ಕರ್ಣನ ನೋಡಿ ಈಗಾಗಲೇ ರಮೇಶ್‌ಗೆ ಅನುಮಾನ ಬಂದಿದೆ. ಆದರೆ ತೇಜಸ್ ಬಳಿ ಆ ಸತ್ಯ ಹೇಳಿ, ಒಳ್ಳೇದು ಮಾಡುವ ಭರದಲ್ಲಿ ತನಗೆ ತಾನೇ ಆಪತ್ತು ತಂದುಕೊಂಡಿದ್ದಾನೆ ಕರ್ಣ.

ಕರ್ಣನ ಫ್ಯಾನ್ಸ್ ಫುಲ್ ಖುಷ್
ಸದ್ಯ 'ಕರ್ಣ' ಧಾರಾವಾಹಿ ವೀಕ್ಷಕರಿಗೆ ಬ್ಯಾಕ್ ಟು ಬ್ಯಾಕ್ ಖುಷಿಯಾಗ್ತಾ ಇದೆ. ಯಾಕಂದ್ರೆ ಕರ್ಣನಿಗೆ ರಮೇಶ್ ಕುತಂತ್ರ ತಿಳಿದಿದೆ. ಹಾಗಾಗಿ ಸರಿಯಾಗಿ ಬೆಂಡೆತ್ತುತ್ತಿದ್ದಾನೆ. ಈ ಗಳಿಗೆಗೋಸ್ಕರ ಕಾಯುತ್ತಿದ್ದ ಕರ್ಣನ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಮೊದಲ ಡೋಸ್ ಕೊಟ್ಟಿದಾಯ್ತು ಕರ್ಣ
ತನ್ನನ್ನು ನಂಬಿರುವ ನಿತ್ಯಾ-ನಿಧಿ ಹಾಗೂ ಅಜ್ಜಿ ಜೀವನ ಹಾಳಾಗಬಾರದೆಂದು ಒಂದೊಂದೆ ಸರಿ ಮಾಡುತ್ತಾ ಬರುತ್ತಿದ್ದಾನೆ ಕರ್ಣ. ಹೆಣ್ಮಕ್ಕಳು ಮಾಡುವ ಮನೆಯ ಕೆಲಸವನ್ನು ತಮ್ಮ ಮನೆಯ ಗಂಡುಮಕ್ಕಳ ಕೈಲಿ ಮಾಡಿಸಿ ಮೊದಲ ಡೋಸ್ ಕೊಟ್ಟಿದಾಯ್ತು ಕರ್ಣ.
ಕರ್ಣನಿಗೂ ಬಯ್ದು ಕಳುಹಿಸಿದ ತೇಜಸ್
ಜೊತೆಗೆ ನಿತ್ಯಾ ಜೀವನ ಸರಿ ಮಾಡಬೇಕೆಂದು ತೇಜಸ್ ಹುಡುಕಿಕೊಂಡು ಬಾರ್‌ಗೆ ಹೋಗಿದ್ದ ಕರ್ಣ, ಆತನಿಗೆ ಬುದ್ಧಿ ಮಾತುಗಳನ್ನು ಹೇಳಿದ್ದಾನೆ. ಆದರೆ ಇದನ್ನೆಲ್ಲಾ ಕೇಳಿಸಿಕೊಳ್ಳದ ಪರಿಸ್ಥಿಯಲ್ಲಿ ಇಲ್ಲ ತೇಜಸ್. ಹಾಗಾಗಿ ನಿತ್ಯಾ ಜೊತೆಗೆ ಕರ್ಣನಿಗೂ ಬಯ್ದು ಕಳುಹಿಸಿದ್ದಾನೆ.
ಪಿತ್ತ ನೆತ್ತಿಗೇರಿಸಿಕೊಂಡ ರಮೇಶ್ ತಂಗಿ
ಅಷ್ಟೇ ಅಲ್ಲ, ನಿತ್ಯಾಳನ್ನು ಆಸ್ಪತ್ರೆಗೆ ಕರೆತಂದು ಬೋರ್ಡ್ ಮೆಂಬರ್ ಮಾಡಿದ್ದಾನೆ. ಇದರಿಂದ ಕರ್ಣನ ಅಜ್ಜಿಗೆ ಬಹಳ ಖುಷಿಯಾಗಿದೆ. ಹಾಗಾಗಿ ಆಸ್ಪತ್ರೆಯನ್ನು ಚೆನ್ನಾಗಿ ನೋಡಿಕೊಂಡು ಹೋಗುವಂತೆ ಹೇಳುತ್ತಿದ್ದಾರೆ. ಆದರೆ ಇದರಿಂದ ರಮೇಶ್ ತಂಗಿ ಪಿತ್ತ ನೆತ್ತಿಗೇರಿದೆ.
ಆ ಸತ್ಯವನ್ನ ಹೇಳಿದ ಕರ್ಣ
ಈ ತರಹ ಏಕಾಏಕಿ ನಿರ್ಧಾರ ತೆಗೆದುಕೊಳ್ಳುತ್ತಿರುವ ಕರ್ಣನ ನೋಡಿ ಈಗಾಗಲೇ ರಮೇಶ್‌ಗೆ ಅನುಮಾನ ಬಂದಿದೆ. ಹಾಗಾಗಿ ಕರ್ಣನ ತಾಯಿಗೆ ಕರೆದು ಕೇಳಿದ್ದಾನೆ. ಆದರೆ ಪಾಪ ಆಕೆಗೆ ಏನೂ ಗೊತ್ತಿಲ್ಲದ ಕಾರಣ ಸುಮ್ಮನಿದ್ದಾಳೆ. ಆದರೆ ತೇಜಸ್ ಬಳಿ ಕರ್ಣ ಒಂದು ಸತ್ಯವನ್ನ ಹೇಳಿ ತನಗೆ ತಾನೇ ಆಪತ್ತು ತಂದುಕೊಂಡಿದ್ದಾನೆ.
ಷಡ್ಯಂತ್ರ ಹೂಡುವುದು ಖಚಿತ
ಅದೇನಪ್ಪಾ ಅಂದ್ರೆ ತೇಜಸ್ ಬಳಿ ನಮ್ಮೆಲ್ಲರ ಈ ಸ್ಥಿತಿಗೆ ಕಾರಣ ನಮ್ಮ ಮನೆಯಲ್ಲಿರುವ ಕೆಲವರು ಎಂದಿದ್ದಾನೆ. ಆದರೆ ಈ ಮಾತನ್ನು ತೇಜಸ್ ಕೇಳಿಸಿಕೊಳ್ಳದಿದ್ದರೂ ಇದು ರಮೇಶ್ ಕಿವಿಗೆ ಬಿದ್ದಾಗ ಮತ್ತೆ ಕರ್ಣನ ಮೇಲೆ ಷಡ್ಯಂತ್ರ ಹೂಡುವುದು ಖಚಿತ.
ಆಪತ್ತು ತಂದುಕೊಂಡಿದ್ದಾನೆ ಕರ್ಣ
ಹಿತ್ತಾಳೆ ಕಿವಿಯ ತೇಜಸ್ ರಮೇಶ್ ಬಳಿ ಅಪ್ಪಿತಪ್ಪಿ ಕರ್ಣ ಹೇಳಿದ್ದನ್ನ ಬಾಯಿಬಿಟ್ಟರೆ, ರಮೇಶ್‌ಗೆ ಕರ್ಣ ಈ ರೀತಿ ಧಿಢೀರ್ ಬದಲಾಗಿರುವುದು ಏಕೆಂಬುದು ತಿಳಿಯುತ್ತದೆ. ಹಾಗಾಗಿ ತೇಜಸ್ ಬಳಿ ಸತ್ಯ ಹೇಳಿ, ಒಳ್ಳೇದು ಮಾಡುವ ಭರದಲ್ಲಿ ತನಗೆ ತಾನೇ ಆಪತ್ತು ತಂದುಕೊಂಡಿದ್ದಾನೆ ಕರ್ಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

