ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಕಾಕ್ರೋಚ್ ಸುಧಿಗೆ ಚಿಂತೆಯೊಂದು ಕಾಡ್ತಿದೆ. ಬಿಗ್ ಬಾಸ್ ಮನೆಯಲ್ಲಿ ನಡೆದ ಘಟನೆಯನ್ನು ಎಷ್ಟೇ ನೆನಪಿಸಿಕೊಂಡ್ರೂ ನೆನಪಾಗ್ತಿಲ್ಲ. ಹೆಂಡ್ತಿ ಬೇರೆ ಕಣ್ಣು ಕೆಂಪು ಮಾಡಿದ್ದಾರೆ.

ಬಿಗ್ ಬಾಸ್ 12 (Bigg Boss 12)ರ ಸ್ಪರ್ಧಿ ಕಾಕ್ರೋಚ್ ಸುಧಿ (Cockroach Sudhi) ಹಿಂದಿನ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಗೆ ಬರ್ತಿದ್ದಂತೆ ಮಾಧ್ಯಮಗಳ ಜೊತೆ ಮಾತನಾಡುವ ಸ್ಪರ್ಧಿಗಳು ಒಂದೊಂದೇ ವಿಷ್ಯವನ್ನು ಹೊರಗೆ ಹಾಕ್ತಾರೆ. ಮನೆಯೊಳಗೆ ಏನು ಮಾಡಿದ್ವಿ ಅನ್ನೋದನ್ನು ಮರೆಯೋ ಕೆಲ ಸ್ಪರ್ಧಿಗಳಿಗೆ ಅವರ ಮನೆಯವರು ಎಚ್ಚರಿಸಿದಾಗ್ಲೇ ನೆನಪಾಗೋದು. ಬಿಗ್ ಬಾಸ್ ಮನೆಯಲ್ಲಿ ಇವರಾಡುವ ಆಟ, ಮಾತುಗಳನ್ನು ಹೊರಗಿನವರು ಅದ್ರಲ್ಲೂ ಹೆಂಡ್ತಿ, ಮಕ್ಕಳು ಕಿವಿಯಲ್ಲಿ ಕಿವಿಯಿಟ್ಟು ಕೇಳಿಸಿಕೊಂಡಿರ್ತಾರೆ, ನೋಡಿರ್ತಾರೆ. ಸುಧಿಗೂ ಬಿಗ್ ಬಾಸ್ ಮನೆಯಲ್ಲಿ ನಡೆದ ಒಂದು ಘಟನೆ ಮರೆತು ಹೋಗಿದೆ. ಆದ್ರೆ ಹೊರಗೆ ಬರ್ತಿದ್ದಂತೆ ಹೆಂಡ್ತಿ ತರಾಟೆಗೆ ತೆಗೆದುಕೊಂಡಿದ್ದಾರೆ.

ರಿಷಾ ಕೈ ಹಿಡಿದಿದ್ದಕ್ಕೆ ಸುಧಿಗೆ ಕ್ಲಾಸ್ :

ಸಂದರ್ಶನವೊಂದರಲ್ಲಿ ಕಾಕ್ರೋಚ್ ಸುಧಿ, ರಿಷಾ ಕೈ ಹಿಡಿದ ವಿಷ್ಯವನ್ನು ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಆಟದ ವೇಳೆ ಸುಧಿ ಬೆಂಚ್ ಮೇಲೆ ಕುಳಿತಿರ್ತಾರೆ. ಪಕ್ಕದಲ್ಲಿದ್ದ ರಿಷಾ ಅವರ ಕೈ ಹಿಡಿದಿದ್ದಾರೆ. ಇದನ್ನು ಸುಧಿ ಪತ್ನಿ ಸರಿಯಾಗಿ ನೋಡ್ಕೊಂಡಿದ್ದಾರೆ. ಪತಿ ಬಿಗ್ ಬಾಸ್ ಮನೆಯಿಂದ ಹೊರಗೆ ಬರ್ತಿದ್ದಂತೆ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ವಿಡಿಯೋ ತೋರಿಸಿದ್ದಾರೆ. ನನಗೆ ನಿಜವಾಗ್ಲೂ ನೆನಪಿಲ್ಲ. ಯಾವಾಗ ರಿಷಾ ಕೈ ಹಿಡಿದಿದ್ದಾರೆ ಅನ್ನೋದು. ಕೈ ಹಿಡಿಯುವಾಗ ತೊಡೆ ಟಚ್ ಆಗಿದೆ. ಆ ದಿನ ನಾನು ಶಾರ್ಟ್ ಬೇರೆ ಹಾಕಿದ್ದೆ. ನನಗೆ ಈಗ್ಲೂ ನೆನಪಿಲ್ಲ. ರಿಷಾ ಯಾವಾಗ ಕೈ ಹಿಡಿದಿದ್ದು ಅಂತ. ನಿನ್ನೆಯಿಂದ ನೆನಪು ಮಾಡ್ಕೊಳ್ತಿದ್ದೇನೆ ಅಂತ ಸುಧಿ ಹೇಳಿದ್ದಾರೆ.

Bigg Boss ರಘು ಪತ್ನಿ ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲ! ಅವರ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ!

ಸುಧಿ ಪತ್ನಿ ಇದೇನು ಅಂತ ಕೇಳಿದ್ದಾರೆ. ದೇವರ ಮೇಲೆ ಆಣೆ ಮಾಡಿರೋ ಸುಧಿ, ನನಗೆ ಇದು ಯಾವಾಗ ನಡೆದಿದ್ದು ನೆನಪಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆ ಒಳಗೆ ನಡೆದ ಟಚ್ಚಿಂಗ್ ಮನೆ ಹೊರಗೆ ಸುಧಿ ನಿದ್ರೆ ಹಾಳು ಮಾಡಿದೆ. ಹೆಂಡ್ತಿ ಮನವೊಲಿಸೋದೇ ಈಗ ಕೆಲ್ಸ ಆದಂಗಿದೆ.

ಹೆಂಡ್ತಿ ಭಯಕ್ಕೆ ಜಾಣ್ಮೆಯಿಂದ ಆಟ ಆಡಿದ್ದ ಸುಧಿ ! :

ಬಿಗ್ ಬಾಸ್ ಮನೆಯಲ್ಲಿ ನಾನು ಸಭ್ಯನಾಗಿದ್ದೆ ಅನ್ನೋದು ಸುಧಿ ವಾದ. ಯಾರನ್ನೂ ಏಕವಚನದಲ್ಲಿ ಕರೆದಿಲ್ಲ. ಚಿನ್ನ ಅಂತ ಕರೆಯೋದು ನನ್ನ ಅಭ್ಯಾಸ. ನನ್ನ ಪತ್ನಿಗೆ ಚಿನ್ನ ಅಂತ ಎಲ್ಲರನ್ನೂ ಕರಿತೇನೆ ಅನ್ನೋದು ಗೊತ್ತಿತ್ತು. ಹಾಗಾಗಿ ನಾನು ಬಚಾವ್ ಎಂದಿದ್ದಾರೆ ಸುಧಿ.

Bigg Boss Kannada 12: ಕರ್ಮ ರಿಟರ್ನ್ ಎಂದ ಗಿಲ್ಲಿಗೆ ಇದು ನನಗೆ ಆಗಬೇಕಿತ್ತು ಎಂದ ರಕ್ಷಿತಾ ಶೆಟ್ಟಿ

ಬಿಗ್ ಬಾಸ್ ಮನೆ ಪ್ರವೇಶ ಮಾಡ್ತಿದ್ದಂತೆ ಅಬ್ಬರದ ಆಟ ತೋರಿದ್ದ ಸುಧಿ, ಅಶ್ವಿನಿ ಎದುರು ಹಾಕಿಕೊಂಡಿದ್ರು. ಆದ್ರೆ ಒಂದೇ ವಾರದಲ್ಲಿ ಕಾಕ್ರೋಚ್ ಸುಧಿ ತಣ್ಣಗಾಗಿದ್ರು. ವಿಚಿತ್ರ ಅಂದ್ರೆ ಅಶ್ವಿನಿ ಗೌಡ ಜೊತೆ ಒಳ್ಳೆ ಫ್ರೆಂಡ್ ಶಿಪ್ ಬೆಳೆದಿತ್ತು. ಅಶ್ವಿನಿ ಗೌಡ, ಜಾಹ್ನವಿ ಹಾಗೂ ಸುಧಿ ಬೆಸ್ಟ್ ಫ್ರೆಂಡ್ ರೀತಿಯಲ್ಲಿ ವರ್ತಿಸೋಕೆ ಶುರು ಮಾಡಿದ್ರು. ಇತ್ತೀಚಿಗೆ ಅವರ ಟೀಂ ಸೇರಿದ್ದು ರಿಷಾ ಹಾಗೂ ಧ್ರುವಂತ್. ನೇರವಾಗಿ ನಾಮಿನೇಟ್ ಆಗಿ ಮತ್ತೆ ಸೇವ್ ಆಗಿದ್ರೂ ಮತ್ತೊಮ್ಮೆ ನಾಮಿನೆಟ್ ಆಗಿ ಸುಧಿ ಹೊರಗೆ ಬಂದಿದ್ದಾರೆ. ಸುಧಿ ಹೊರಗೆ ಬರೋಕೆ ಅಶ್ವನಿ ಹಾಗೀ ಜಾಹ್ನವಿ ಟೀಂ ಕಾರಣ ಅಂತ ಅವರ ಪತ್ನಿ ಹೇಳಿದ್ದೂ ಆಗಿದೆ. ಬಿಗ್ ಬಾಸ್ ಮನೆಯಿಂದ ಹೊರಗೆ ಬರ್ತಿದ್ದಂತೆ ಸುಧಿ ಪ್ರಸಿದ್ಧಿ ಮತ್ತಷ್ಟು ಹೆಚ್ಚಾಗಿದ್ದು, ಆಫರ್ ಮೇಲೆ ಆಫರ್ ಬರುವ ನಿರೀಕ್ಷೆ ಇದೆ.