- Home
- Entertainment
- TV Talk
- ಅಬ್ಬರವಿಲ್ಲ, ಹೈಪ್ ಇಲ್ಲ, ಮನಸ್ಸಿನಲ್ಲಿ ಕ್ರಾಂತಿ ಮಾಡ್ತವೆ, ಮೋಡಿ ಮಾಡಿ, ಕಾಡ್ತವೆ ಕನ್ನಡದ ಈ Serials!
ಅಬ್ಬರವಿಲ್ಲ, ಹೈಪ್ ಇಲ್ಲ, ಮನಸ್ಸಿನಲ್ಲಿ ಕ್ರಾಂತಿ ಮಾಡ್ತವೆ, ಮೋಡಿ ಮಾಡಿ, ಕಾಡ್ತವೆ ಕನ್ನಡದ ಈ Serials!
ಕೆಲ ಧಾರಾವಾಹಿಗಳು TRP ಲೆಕ್ಕಾಚಾರಕ್ಕೂ ಮೀರಿದ ಕಥೆಗಳಾಗಿರುತ್ತವೆ. ಎಷ್ಟೋ ಸೂಕ್ಷ್ಮ ಕತೆಗಳು ಬಂದಿದ್ದು, ಅವೆಲ್ಲವೂ TRP ಲೆಕ್ಕಾಚಾರದಲ್ಲಿ ಗೆದ್ದಿಲ್ಲ, ಕಥೆ ನಿರೂಪಣೆ, ಸಂಭಾಷಣೆ, ಚಿತ್ರಕಥೆಯಲ್ಲಿ ಜನರ ಮನಸ್ಸಿನಲ್ಲಿ ಹಾಗೆ ಉಳಿದುಕೊಂಡಿವೆ. ಕಂಟೆಂಟ್ ವಿಚಾರದಲ್ಲಿ ಭೇಷ್ ಎನಿಸಿಕೊಂಡ ಸೀರಿಯಲ್‌ಗಳಿವು

ಅಮೃತಧಾರೆ ಧಾರಾವಾಹಿ
ಅಮೃತಧಾರೆ ಧಾರಾವಾಹಿ TRP ಓಟದಲ್ಲಿ ಕಮಾಲ್ ಮಾಡುತ್ತಿರೋದು ಸತ್ಯ. 45 ವರ್ಷದ ಗೌತಮ್ ಹಾಗೂ 35 ವರ್ಷದ ಭೂಮಿಯನ್ನು ಮನೆಯವರಿಗೋಸ್ಕರ ಮದುವೆಯಾಗಿ, ಆಮೇಲೆ ಲವ್ ಮಾಡುತ್ತಾನೆ. ದಾಂಪತ್ಯ ಅಂದರೆ ಏನು? ಪ್ರೀತಿ ಅಂದರೆ ಏನು ಎಂದು ತೋರಿಸಿಕೊಡಬೇಕುವಷ್ಟರ ಮಟ್ಟಿಗೆ ಇವರು ಅನ್ಯೋನ್ಯವಾಗಿ ಬದುಕುತ್ತಾರೆ. ಪರಿಸ್ಥಿತಿಗೆ ಕಟ್ಟುಬಿದ್ದು ಬೇರೆ ಬೇರೆ ಆಗಿರುವ ಇವರು, ಎಂದಿಗೂ ಪರಸ್ಪರರ ಮೇಲೆ ಗೌರವ, ಪ್ರೀತಿಯನ್ನು ಕಳೆದುಕೊಳ್ಳೋದಿಲ್ಲ. ಅಂದಹಾಗೆ ತಂದೆ ಹಾಗೂ ಮಕ್ಕಳ ನಡುವಿನ ಬಾಂಧವ್ಯ, ಮಕ್ಕಳಿಗೆ ಕೊಡಬೇಕಾದ ಸಂಸ್ಕಾರ, ನಿಜವಾದ ಪಾಠ ಏನು ಎನ್ನೋದನ್ನು ಅದ್ಭುತವಾಗಿ ತೋರಿಸಲಾಗುತ್ತಿದೆ.
ಆಸೆ ಧಾರಾವಾಹಿ
ಮೂವರು ಗಂಡು ಮಕ್ಕಳಿರುವ ಮನೆ, ಮೂವರಿಗೆ ಮದುವೆಯಾಗಿದೆ. ತಾಯಿ ಮಾತ್ರ ಒಬ್ಬ ಮಗನನ್ನು ತನ್ನ ಮಗ ಎನಿಸುವಂತೆ ಮೆರೆಸುತ್ತಾಳೆ. ಎರಡನೇ ಮಗನಿಗೆ ತಾಯಿ ಪ್ರೀತಿಯೇ ಸಿಗೋದಿಲ್ಲ. ತಾಯಿ ಪ್ರೀತಿ ಬೇಕು ಎಂದು ಬಯಸುವ ಮಗನಿಗೆ ತಾಯಿ ಪ್ರೀತಿ ಸಿಗೋದಿಲ್ಲ, ತಾಯಿ ಪ್ರೀತಿ ಸಿಕ್ಕಿದ ಮಗನಿಗೆ ಅದನ್ನು ಉಳಿಸಿಕೊಳ್ಳುವ ಯೋಗ್ಯತೆಯಿಲ್ಲ. ಬಡವರ ಮನೆಯಿಂದ ಬಂದ ಸೊಸೆ ಇಡೀ ಮನೆಯ ಚಾಕರಿ ಮಾಡಿ, ಹೊರಗಡೆ ದುಡಿದರೂ ಕೂಡ ಅತ್ತೆ ಕಣ್ಣಿನಲ್ಲಿ ಬೆಲೆಯಿಲ್ಲ. ಶ್ರೀಮಂತರ ಮನೆಯಿಂದ ಬಂದ ಸೊಸೆ ಏನೂ ಮಾಡದಿದ್ದರೂ ಕೂಡ ಅತ್ತೆ ಮಾತ್ರ ಕೇಳೋದಿಲ್ಲ. ಗಂಡನ ಮನೆಯಲ್ಲಿ ಇಬ್ಬರು-ಮೂವರು ಮಕ್ಕಳಿದ್ದಾಗ ಅತ್ತೆ ಹೇಗೆ ಬೇಧ-ಭಾವ ಮಾಡುತ್ತಾಳೆ, ಗಂಡನ ಪ್ರೀತಿ ಎಷ್ಟು ಮುಖ್ಯ? ಗಂಡ ಹಾಗೂ ಹೆಂಡತಿ ಪರಸ್ಪರ ಸಹಕಾರದಿಂದ ಇದ್ದಾಗ ಹೇಗೆ ಜೀವನದಲ್ಲಿ ಯಶಸ್ಸು ಗಳಿಸಬಹುದು ಎನ್ನೋದನ್ನು ಅದ್ಭುತವಾಗಿ ತೆರೆಯ ಮೇಲೆ ತರುವ ಪ್ರಯತ್ನವಾಗಿದೆ.
ಪ್ರೇಮ ಕಾವ್ಯ ಧಾರಾವಾಹಿ
ಹೊಸದಾಗಿ ಆರಂಭ ಆಗಿರುವ ಪ್ರೇಮಕಾವ್ಯ ಧಾರಾವಾಹಿಯಲ್ಲಿ ಅಕ್ಕ-ತಂಗಿ ಒಂದೇ ಮನೆಗೆ ಸೊಸೆಯಾಗಿ ಹೋಗಿರುವ ಕಥೆಯಿದೆ.
ರಾಮ್‌ನನ್ನು ಉಪಾಯ ಮಾಡಿ ಮದುವೆಯಾಗಿರುವ ಪ್ರೇಮ ಅವನನ್ನು ತುಂಬ ಪ್ರೀತಿ ಮಾಡುತ್ತಾಳೆ. ಆದರೆ ರಾಮ್‌ಗೆ ಅವಳ ಪ್ರೀತಿಗಿಂತ ಜಾಸ್ತಿ, ಮಾಡಿದ ಮೋಸ ಎದ್ದು ಕಾಣುತ್ತಿದೆ. ಇನ್ನೊಂದು ಕಡೆ ಪರಿಸ್ಥಿತಿಗೆ ಕಟ್ಟುಬಿದ್ದು ಮಹದೇವ್-ಕಾವ್ಯ ಮದುವೆ ಆಗ್ತಾರೆ. ಕಾವ್ಯಳನ್ನು ಪ್ರೀತಿ ಮಾಡ್ತಿರೋ ಮಹದೇವ್‌ಗೆ ಅಕ್ಷರ ಗೊತ್ತಿಲ್ಲ. ಮಹದೇವ್‌ನನ್ನು ಕಂಡರೆ ಕಾವ್ಯಗೆ ಆಗೋದಿಲ್ಲ. ಇವರು ಹೇಗೆ ಪ್ರೀತಿಯಲ್ಲಿ ಬೀಳ್ತಾರೆ? ನಿಜಕ್ಕೂ ಎರಡು ಜೋಡಿಗಳು ಒಂದಾಗುತ್ತವೆಯೇ? ಈ ಜೋಡಿಗಳನ್ನು ದೂರ ಮಾಡಲು ಇರುವ ದುಷ್ಟಶಕ್ತಿಗಳು ಯಶಸ್ಸು ಹೊಂದುತ್ತಾರಾ ಎಂದು ಕಾದು ನೋಡಬೇಕಿದೆ.
ಗೌರಿಶಂಕರ ಧಾರಾವಾಹಿ
ಪರಿಸ್ಥಿತಿಗೆ ಕಟ್ಟುಬಿದ್ದು ಗೌರಿ ಹಾಗೂ ಶಂಕರ ಮದುವೆ ಆಗುತ್ತಾರೆ. ಶಂಕರ ಅವಿದ್ಯಾವಂತ, ಆದರೆ ಗೌರಿ ಶಿಕ್ಷಣವಂತೆ, ಬುದ್ಧಿವಂತೆ. ಇನ್ನೊಂದು ಕಡೆ ಗೌರಿಯ ಪ್ರೀತಿಯಲ್ಲಿ ಬಿದ್ದ ರೌಡಿ ಶಂಕರ, ಸಭ್ಯಸ್ಥನಾಗಿ ಬದಲಾಗುತ್ತಾನೆ. ಆಮೇಲೆ ತಾಯಿ ಮಾಡಿರುವ ಕೊಲೆಯನ್ನು ತನ್ನ ಮೇಲೆ ಹಾಕಿಕೊಂಡು ಜೈಲು ಸೇರುತ್ತಾನೆ. ಹೆಂಡ್ತಿ ಗರ್ಭಿಣಿಯಾಗಿದ್ದರೂ ಕೂಡ, ಅವಳನ್ನು ನೋಡಿಕೊಳ್ಳದೆ ಜೈಲಿಗೆ ಹೋದ ಎಂದು ಶಂಕರನ ಮೇಲೆ ಅವಳು ದ್ವೇಷ ಸಾಧಿಸುತ್ತಾಳೆ. ಜೈಲಿನಿಂದ ಹೊರಬಂದ ಶಂಕರನನ್ನು ಮದುವೆ ಆಗಬೇಕು ಎಂದು ದುಷ್ಟೆ ಗಂಗಾ ತುಂಬ ಪ್ರಯತ್ನ ಮಾಡುತ್ತಾಳೆ. ಗೌರಿ ಗರ್ಭಪಾತ ಮಾಡಿಸಿಕೊಂಡಿದ್ದಾಳೆ ಎಂದು ಸುಳ್ಳು ಹೇಳಿ, ಶಂಕರ ಹಾಗೂ ಅವನ ಮಗಳು ಭುವಿಯನ್ನು ದೂರ ಮಾಡಲು ನೋಡುತ್ತಾಳೆ. ಎಲ್ಲ ಅಡೆತಡೆ ಮೀರಿ ಭುವಿ ತನ್ನ ಮಗಳು ಎನ್ನೋದು ಶಂಕರನಿಗೆ ಗೊತ್ತಾಗುವುದು. ತಂದೆ-ಮಗಳ ಸಂಬಂಧವನ್ನು ಅದ್ಭುತವಾಗಿ ತೋರಿಸಲಾಗಿದೆ.
ನಿನ್ನ ಜೊತೆ ನನ್ನ ಕಥೆ ಧಾರಾವಾಹಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಂ 1 ಆಗಿರುವ ಈ ಸೀರಿಯಲ್ ಸ್ವಮೇಕ್ ಕಥೆಯಾಗಿದೆ.
ಅಜಿತ್ ರಾಮ್‌ನಾರಾಯಣ್ ಎನ್ನುವ ಪೊಲೀಸ್ ಆಫೀಸರ್‌ಗೆ ಅತ್ತೆ ಮಗಳನ್ನು ಮದುವೆ ಆಗೋಕೆ ಇಷ್ಟವಿರೋದಿಲ್ಲ. ಹೀಗಾಗಿ ಅವನು ಭೂಮಿ ಎನ್ನುವ ಹುಡುಗಿಯನ್ನು ಒಂದು ವರ್ಷದ ಮಟ್ಟಿಗೆ ಮದುವೆ ಆಗುತ್ತಾನೆ. ಕಾಂಟ್ರ್ಯಾಕ್ಟ್ ಮದುವೆ, ಡಿವೋರ್ಸ್ ಕಂಡರೆ ಭೂಮಿಗೆ ಆಗೋದಿಲ್ಲ. ಆದರೆ ತನ್ನ ತಂದೆಯ ಕೊಲೆಯ ಆರೋಪ ತಾಯಿ ಮೇಲಿದೆ, ತಾಯಿಯನ್ನು ಬಿಡಿಸಲು ಹಣ ಬೇಕು ಎನ್ನುವ ಕಾರಣಕ್ಕೆ ಅವಳು ಅಜಿತ್‌ನನ್ನು ಮದುವೆ ಆಗುತ್ತಾಳೆ. ಅಜಿತ್ ಮನೆಯಲ್ಲಿ ಸಾಕಷ್ಟು ನೋವು, ಅವಮಾನ ಅನುಭವಿಸುವ ಅವಳು ತನ್ನ ಸ್ವಂತ ಗಂಡನ ಮನೆ, ಮನೆಯವರು ಎಂದು ಪ್ರೀತಿಸುತ್ತಾಳೆ. ಈಗ ಅಜಿತ್‌ಗೆ ಭೂಮಿ ಮೇಲೆ ಲವ್ ಆಗಿದೆ. ಇವರಿಬ್ಬರು ಒಂದಾಗ್ತಾರಾ ಎನ್ನೋದು ಈ ಸೀರಿಯಲ್ ಕಥೆ.
ಇದು ಸರಳ ಕಥೆಯಾದರೂ ಕೂಡ ಅಜಿತ್ ಹಾಗೂ ಭೂಮಿ ಕಾಂಬಿನೇಶನ್ ವೀಕ್ಷಕರ ಮನಸ್ಸನ್ನು ಗೆಲ್ಲುವುದು. ನನಗೂ ಕೂಡ ಇದೇ ಥರ ಗಂಡ, ಹೆಂಡತಿ ಇರಬೇಕು ಇರಬೇಕು ಎನಿಸುವ ಪಾತ್ರವಾಗಿದೆ. ಅಜಿತ್, ಭೂಮಿ ಡೈಲಾಗ್‌ಗಳು, ಜಗಳಗಳು, ಪ್ರೀತಿ, ಮುದ್ದಾಟ ಎಲ್ಲವೂ ವೀಕ್ಷಕರಿಗೆ ಇಷ್ಟ ಆಗುತ್ತವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

