- Home
- Entertainment
- TV Talk
- Kannada Serial TRP: ಧಾರಾವಾಹಿಗಳ ಮಧ್ಯೆ ಪೈಪೋಟಿ; ನಂ 1 ಸ್ಥಾನ ಪಡೆದ ಸೀರಿಯಲ್ ಯಾವುದು?
Kannada Serial TRP: ಧಾರಾವಾಹಿಗಳ ಮಧ್ಯೆ ಪೈಪೋಟಿ; ನಂ 1 ಸ್ಥಾನ ಪಡೆದ ಸೀರಿಯಲ್ ಯಾವುದು?
Kannada Serial TRP: ಧಾರಾವಾಹಿಗಳ ಟಿಆರ್‌ಪಿ ಲಿಸ್ಟ್ ಹೊರಬಿದ್ದಿದೆ. ವಾರದಿಂದ ವಾರಕ್ಕೆ ಧಾರಾವಾಹಿಗಳಲ್ಲಿರುವ ಟ್ವಿಸ್ಟ್‌ಗಳಿಂದ ಟಿಆರ್‌ಪಿ ಬದಲಾಗುವುದು. ಹಾಗೆಯೇ ಈ ವಾರ ಕೂಡ ಹಾಗೆ ಆಗಿದೆ. ಹಾಗಿದ್ದರೆ ಏನಾಗಿದೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಕರ್ಣ ಧಾರಾವಾಹಿ 8.8 Trp ಸಿಕ್ಕಿದೆ
ಕಿರಣ್ ರಾಜ್, ಭವ್ಯಾ ಗೌಡ, ನಮ್ರತಾ ಗೌಡ ನಟನೆಯ ಕರಣ ಧಾರಾವಾಹಿಗೆ 8.8 TRP ಸಿಕ್ಕಿದೆ. ತೇಜಸ್ ಹಾಗೂ ನಿತ್ಯಾ ಮದುವೆಯ ಎಪಿಸೋಡ್ ಪ್ರಸಾರ ಆಗಿತ್ತು. ಈ ಬಗ್ಗೆ ನಿಧಿ-ಕರ್ಣ ಒದ್ದಾಡಿದ್ದರ ಬಗ್ಗೆ ಎಪಿಸೋಡ್ ಪ್ರಸಾರ ಮಾಡಲಾಗಿತ್ತು.
ಅಣ್ಣಯ್ಯ ಧಾರಾವಾಹಿ 8.3 TRP
ಅಣ್ಣಯ್ಯ ಧಾರಾವಾಹಿಯಲ್ಲಿ ಶಾರದಾ ಹಾಗೂ ಅವಳ ಗಂಡ ಒಂದಾಗುವ ಎಪಿಸೋಡ್ ಪ್ರಸಾರ ಆಗಿತ್ತು. ಆದರೆ ಶಾರದಾ ಕಂಡರೆ ಅವಳ ಮಗ ಶಿವುಗೆ ಆಗೋದಿಲ್ಲ. ಹೀಗಾಗಿ ಅವನ ಕಣ್ಣು ತಪ್ಪಿಸಿ ಪಾರು ತನ್ನ ಅತ್ತೆ-ಮಾವನನ್ನು ಒಂದು ಮಾಡಬೇಕಿತ್ತು.
ಅಮೃತಧಾರೆ ಧಾರಾವಾಹಿ 7.5 TRP
ಅಮೃತಧಾರೆ ಧಾರಾವಾಹಿ 7.5 ಸಿಕ್ಕಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಹಾಗೂ ಗೌತಮ್ ತಮ್ಮ ಮಗಳನ್ನು ಹುಡುಕುತ್ತಿದ್ದಾರೆ. ಇನ್ನೊಂದು ಕಡೆ ಆಕಾಶ್‌ಗೆ ತನಗೆ ಅವಳಿ ಸಹೋದರಿ ಇರೋದು, ಗೌತಮ್ ತನ್ನ ತಂದೆ ಎನ್ನೋದು ಕೂಡ ಗೊತ್ತಾಗಿದೆ. ಈ ಕುರಿತು ಎಪಿಸೋಡ್ ಪ್ರಸಾರ ಆಗ್ತಿದೆ.
ಆದಿಲಕ್ಷ್ಮೀ ಪುರಾಣ 5.9
ಆದಿಲಕ್ಷ್ಮೀ ಪುರಾಣ ಧಾರಾವಾಹಿಯಲ್ಲಿ ಅಮೃತಾ ಸಂಜಯ್ ಮದುವೆ ಆಗಿದೆ. ಅಮೃತಾ ತನ್ನ ಗಂಡನ ಮನೆಯಲ್ಲಿ ಒದ್ದಾಡುತ್ತಿದ್ದಾಳೆ. ಇನ್ನು ಆದಿ ಹಾಗೂ ಲಕ್ಷ್ಮೀ ಭೇಟಿ ಆಗುತ್ತಲೇ ಇದೆ, ಈ ಕುರಿತು ಸೀರಿಯಲ್ ಪ್ರಸಾರ ಆಗ್ತಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ
ಲಕ್ಷ್ಮೀ ನಿವಾಸ ಧಾರಾವಾಹಿ 8.6 TRP ಸಿಕ್ಕಿದೆ. ಲಲಿತಾಳನ್ನು ಜಯಂತ್ ಕೊಲೆ ಮಾಡಿದ್ದಾನೆ. ಇನ್ನೊಂದು ಕಡೆ ಲಕ್ಷ್ಮೀ ಹಾಗೂ ಜಾಹ್ನವಿ ಭೇಟಿ ಆಗುತ್ತಾರಾ? ಜಯಂತ್‌ಗೆ ಜಾನು ಸಿಗುತ್ತಾಳಾ ಎಂಬ ಪ್ರಶ್ನೆ ಇತ್ತು. ಈ ಕುತೂಹಲದ ಸುತ್ತವೇ ಸೀರಿಯಲ್ ಎಪಿಸೋಡ್ ಪ್ರಸಾರ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

