- Home
- Entertainment
- TV Talk
- ‘ತ್ರಿಪುರಸುಂದರಿ’ ನಟಿ ಹರ್ಷಿತಾ ಮಗುವಿನ ನಾಮಕರಣ ಸಂಭ್ರಮದಲ್ಲಿ ಮಿಂಚಿದ ಕಿರುತೆರೆ ತಾರೆಯರು
‘ತ್ರಿಪುರಸುಂದರಿ’ ನಟಿ ಹರ್ಷಿತಾ ಮಗುವಿನ ನಾಮಕರಣ ಸಂಭ್ರಮದಲ್ಲಿ ಮಿಂಚಿದ ಕಿರುತೆರೆ ತಾರೆಯರು
‘ತ್ರಿಪುರಸುಂದರಿ’ ಸೇರಿ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಹರ್ಷಿಕಾ ವೆಂಕಟೇಶ್ ತಾಯಿಯಾಗಿರುವ ಸಂಭ್ರಮದಲ್ಲಿದ್ದು, ಇತ್ತೀಚೆಗೆ ಮಗುವಿನ ನಾಮಕರಣ ಸಮಾರಂಭ ಕೂಡ ನಡೆದಿದ್ದು, ಕನ್ನಡ ಕಿರುತೆರೆಯ ಜನಪ್ರಿಯ ನಟ-ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ಧಾರೆ.

ಹರ್ಷಿತಾ ವೆಂಕಟೇಶ್
ಕನ್ನಡ ಕಿರುತೆರೆಯಲ್ಲಿ ಹಲವಾರು ಸೀರಿಯಲ್ ಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಜನಿಸಿ ಜನಪ್ರಿಯತೆಯನ್ನು ಪಡೆದಿರುವ ನಟಿ ಹರ್ಷಿತ ವೆಂಕಟೇಶ್ ಕೆಲವು ತಿಂಗಳ ಹಿಂದೆ ತಾಯಿಯಾಗಿದ್ದು, ಸದ್ಯ ತಾಯ್ತನದ ಸಂಭ್ರಮವನ್ನು ಸಂಭ್ರಮಿಸುತ್ತಿದ್ದಾರೆ. ಇತ್ತೀಚೆಗೆ ಮಗುವಿನ ನಾಮಕರಣ ಸಮಾರಂಭ ಕೂಡ ಅಷ್ಟೇ ಅದ್ದೂರಿಯಾಗಿ ನಡೆದಿತ್ತು.
ಹರ್ಷಿತ ವಿನಯ್ ಜೋಡಿಯ ಮುದ್ದು ಮಗಳು
ಕನ್ನಡ ಮತ್ತು ತೆಲುಗು ಕಿರುತೆರೆಯ ನಟಿಯಾಗಿರುವ ಹರ್ಷಿತ ಹಾಗೂ ವಿನಯ್ ಜೋಡಿ ಕೆಲವು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಪೋಷಕರಾಗಿದ್ದು, ವಾರಗಳ ಹಿಂದೆ ಮಗಳಿಗೆ ಅದ್ದೂರಿಯಾಗಿ ನಾಮಕರಣ ಮಾಡಿ ಮುದ್ದಾದ ಹೆಸರನ್ನು ಇಟ್ಟು, ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು, ನಾಮಕರಣ ಸಮಾರಂಭಕ್ಕೆ ಕನ್ನಡ ಕಿರುತೆರೆಯ ನಟ ನಟಿಯರು ಆಗಮಿಸಿ ಶುಭ ಕೋರಿದ್ದರು.
ಹರ್ಷಿತ ಮಗಳ ಹೆಸರೇನು
ಕೆಲವು ದಿನಗಳ ಹಿಂದೆ ಹರ್ಷಿತ ವಿಡಿಯೋ ಹಂಚಿಕೊಂಡು ತಮ್ಮ ಮಗಳ ಹೆಸರು ಹಾಗೂ ಮಗಳನ್ನು ಪಡೆದ ಸಂಭ್ರಮವನ್ನು ಹಂಚಿಕೊಂಡಿದ್ದರು. ಹರ್ಷಿತ ವಿನಯ್ ಜೋಡಿ ತಮ್ಮ ಮಗಳಿಗೆ ಶ್ರೀಯಾಂಶಿ ಎಂದು ಹೆಸರಿಟ್ಟಿದ್ದಾರೆ. ಆ ಕುರಿತು ಸೋಶಿಯಲ್ ಮೀಡಿಯಾ ಪೋಸ್ಟ್ ಮಾಡಿರುವ ಹರ್ಷಿತ “ ಶ್ರಿಯಾಂಶಿ..ನಮ್ಮ ಪುಟ್ಟ ಮಗಳಿಗೆ ಅವಳ ಹೆಸರಿಡಲಾಗಿದೆ. ನಮ್ಮ ಹೃದಯಗಳು ತುಂಬಿ ಬಂದಿವೆ . ನಮ್ಮ ಅದ್ಭುತ ಕುಟುಂಬ, ಸೃಜನಶೀಲ ಕಾರ್ಯಕ್ರಮ ತಂಡ ಮತ್ತು ಕ್ಷಣಗಳನ್ನು ನೆನಪುಗಳಾಗಿ ಪರಿವರ್ತಿಸಿದ ಛಾಯಾಗ್ರಾಹಕರಿಗೆ ಧನ್ಯವಾದಗಳು. ನಮ್ಮ ಪುಟ್ಟ ಮಗುವಿಗೆ ಒಂದು ಸುಂದರ ಆರಂಭ” ಎಂದು ಬರೆದುಕೊಂಡಿದ್ದಾರೆ.
ಕಿರುತೆರೆ ನಟ ನಟಿಯರ ಸಂಭ್ರಮ
ಹರ್ಷಿತ ಕಳೆದ 15 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದು, ಹಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಹಾಗಾಗಿ ತಮ್ಮ ಜೀವನದ ಅತ್ಯಂತ ಮಧುರವಾದ ಭಾಗವಾಗಿರುವ ಮುದ್ದು ಮಗಳ ನಾಮಕರಣ ಸಮಾರಂಭಕ್ಕೆ ತಮ್ಮ ಎಲ್ಲಾ ಸಹ ನಟ ನಟಿಯರನ್ನು ಆಹ್ವಾನಿಸಿದ್ದರು. ಹಲವಾರು ನಟ ನಟಿಯರು ಆಗಮಿಸಿ ಮಗುವಿಗೆ ಆಶೀರ್ವದಿಸಿದ್ದಾರೆ.
ಯಾರೆಲ್ಲ ಬಂದಿದ್ರು?
ಶ್ರೀಯಾಂಶಿ ನಾಮಕರಣ ಸಮಾರಂಭಕ್ಕೆ ನೇಹ ಗೌಡ, ಅನುಪಮಾ ಗೌಡ, ಸುಪ್ರೀತಾ ಸತ್ಯನಾರಾಯಣ್, ಚೈತ್ರ ರೈ, ರಶ್ಮಿ ಪ್ರಭಾಕರ್, ಜ್ಯೋತಿ ರೈ, ಸುಷ್ಮಾ ನಾಣಯ್ಯ, ಪದ್ಮಿನಿ ದೇವನಹಳ್ಳಿ, ಅಜಯ್ ರಾಜ್, ಮಾನ್ಸಿ ಜೋಶಿ -ಇಂಚರ ಜೋಶಿ ಹಾಗೂ ಕುಟುಂಬ, ಪ್ರಿಯಾಂಕ ನಾಯಕ್ ಹಾಗೂ ಕುಟುಂಬ, ಮಧು ಸಾಗರ್, ಸಂಜಯ್, ಅರ್ಜುನ್ ಯೋಗಿ ಹಾಗೂ ಕುಟುಂಬ, ಅಮೃತರಾಮ್ ಮೂರ್ತಿ- ರಘು ಹಾಗೂ ಅವರ ಕುಟುಂಬ ಆಗಮಿಸಿ ನಾಮಕರಣ ಸಂಭ್ರಮವನ್ನು ದುಪ್ಪಟ್ಟುಗೊಳಿಸಿದರು.
ಹರ್ಷಿತಾ ವೆಂಕಟೇಶ್ ನಟನಾ ಜರ್ನಿ
ಹರ್ಷಿತ ‘ಅಮ್ನೋರ್’ ಧಾರವಾಹಿ ಮೂಲಕ ತಮ್ಮ ನಟನಾ ಜರ್ನಿಯನ್ನು ಶುರು ಮಾಡಿದರು. ಬಳಿಕ ‘ಮೇಘ ಮಯೂರಿ’ ಧಾರವಾಹಿಯಲ್ಲೂ ನಾಯಕಿಯಾಗಿ ನಟಿಸಿದ್ದರು. ಇವರ ಜೊತೆ ಅಮೃತ ರಾಮಮೂರ್ತಿ ಕೂಡ ಈ ಸೀರಿಯಲ್ನಲ್ಲಿ ನಟಿಸಿದ್ದಾರೆ ಇದರ ಜೊತೆ ಜೊತೆಗೆ ತೆಲುಗು ದಾರವಾಹಿಗಳಲ್ಲೂ ಹರ್ಷಿತ ನಟಿಸಿದ್ದಾರೆ. ಕನ್ನಡದಲ್ಲಿ ಕೊನೆಯದಾಗಿ ‘ತ್ರಿಪುರಸುಂದರಿ’ ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸಿದ್ದರು.
ಹರ್ಷಿತಾ ವಿನಯ್ ಜೋಡಿ
ನಟಿ ಹರ್ಷಿತ 2020ರ ಆಗಸ್ಟ್ ತಿಂಗಳಲ್ಲಿ ವಿನಯ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮುದ್ದು ಮಗಳ ಪೋಷಕರಾಗಿರುವ ಈ ಜೋಡಿ, ಜೋಡಿ ನಂಬರ್ 1 ಕಾರ್ಯಕ್ರಮದಲ್ಲಿ ಭಾಗವಹಿಸಿ ಟಾಪ್ ಫೈವ್ ಸ್ಪರ್ದಿಗಳಾಗಿ ಹೊರಹೊಮ್ಮಿದ್ದರು. ಅಲ್ಲದೆ ಇವರು ಇಸ್ಮಾರ್ಟ್ ಜೋಡಿ ಕಾರ್ಯಕ್ರಮದ ವಿನ್ನರ್ ಕೂಡ ಹೌದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

