ಇನ್ಮುಂದೈತೆ ಜೈದೇವ್-ಶಕುಂತಲಾಗೆ ಮಾರಿಹಬ್ಬ; ಇನ್ನೆಂದೆರಡು ಕೊಡು ಗೌತಮ್, ಕೆಡಿ ಶಾಕ್
ವಿದೇಶದಿಂದ ಗೌತಮ್ ದಿವಾನ್ ಸುರಕ್ಷಿತವಾಗಿ ಮರಳಿದ್ದು, ಜೈದೇವ್ ಮತ್ತು ಶಕುಂತಲಾ ಅವರ ಸಂಚು ವಿಫಲವಾಗಿದೆ. ಮನೆಗೆ ಬಂದ ತಕ್ಷಣ ಗೌತಮ್, ತನ್ನ ಮೇಲಿನ ದಾಳಿಯ ಹಿಂದಿನ ಸತ್ಯ ತಿಳಿದುಕೊಂಡು ಜೈದೇವ್ಗೆ ಕಪಾಳಮೋಕ್ಷ ಮಾಡಿದ್ದಾನೆ.

ಜೈದೇವ್ ಮತ್ತು ಶಕುಂತಲಾ ಪ್ಲಾನ್ ಫೇಲ್
ಸುಮಾರು ಒಂದು ತಿಂಗಳಿನಿಂದ ಧಾರಾವಾಹಿಯಿಂದ ದೂರವಾಗಿ ಗೌತಮ್ ದಿವಾನ್ ಕಂಬ್ಯಾಕ್ ಆಗಿದೆ. ಕೆಲಸದ ಹಿನ್ನೆಲೆ ವಿದೇಶಕ್ಕೆ ತೆರಳಿದ್ದ ಗೌತಮ್ ದಿವಾನ್ ಪ್ರಾಣ ತೆಗೆಯಲು ಇಲ್ಲಿಂದಲೇ ಜೈದೇವ್ ಮತ್ತು ಶಕುಂತಲಾ ಪ್ಲಾನ್ ಮಾಡಿದ್ದರು. ದುಷ್ಟರ ಸಂಚು ವಿಫಲವಾಗಿದ್ದರಿಂದ ಗೌತಮ್ ಸುರಕ್ಷಿತವಾಗಿ ಮರಳಿದ್ದು, ಜೈದೇವ್ಗೆ ಬಿಗ್ ಶಾಕ್ ನೀಡಿದ್ದಾನೆ.
ಗೌತಮ್ ಶಾಕಿಂಗ್ ಸರ್ಪೈಸ್
ಮನೆಗೆ ಬರುತ್ತಿದ್ದಂತೆ ನೆಚ್ಚಿನ ಮಡದಿ ಭೂಮಿಕಾಗೆ ಗೌತಮ್ ಶಾಕಿಂಗ್ ಸರ್ಪೈಸ್ ನೀಡಿದ್ದನು. ಸೋದರ ಪಾರ್ಥನಿಂದ ಮನೆಗೆ ಜೈದೇವ್ ಬಂದಿರುವ ವಿಷಯ ತಿಳಿದಿದೆ. ಅಪಾಯದಲ್ಲಿದ್ದ ಅತ್ತಿಗೆಯನ್ನು ರಕ್ಷಣೆ ಮಾಡಿದ್ದಕ್ಕೆ ಅನಿವಾರ್ಯವಾಗಿ ಮನೆಯೊಳಗೆ ಕರೆದುಕೊಳ್ಳಲಾಯ್ತು ಎಂದು ಪಾರ್ಥ ಹೇಳಿದ್ದಾನೆ. ಇದರಿಂದ ಕೋಪಗೊಂಡ ಗೌತಮ್, ಭೂಮಿಕಾಳ ಜಾಗದಲ್ಲಿರುವ ದೀಪಿಕಾಳನ್ನು ಕರೆದು ಪ್ರಶ್ನೆ ಮಾಡಿದ್ದಾನೆ.
ಜೈದೇವ್ ಶಾಕ್, ಗೌತಮ್ ರಾಕ್
ನನ್ನನ್ನು ರಕ್ಷಣೆ ಮಾಡಿದ್ದರಿಂದ ಬದಲಾಗಿರಬಹುದು. ಹಾಗಾಗಿ ಒಂದು ಅವಕಾಶ ನೀಡಿದೆ ಎಂದಷ್ಟೇ ಹೇಳಿ ದೀಪಿಕಾ ನುಣುಚಿಕೊಂಡಿದ್ದಾಳೆ. ಕೂಡಲೇ ಕರೆ ಮಾಡಿ ಜೈದೇವ್ಗೆ ಮನೆಗೆ ಬರಬೇಕೆಂದು ಹೇಳುವಂತೆ ಗೌತಮ್ ಸೂಚಿಸಿದ್ದಾನೆ. ವಿದೇಶದಿಂದ ಗೌತಮ್ ಬಂದಿರೋ ವಿಷಯ ಕೇಳಿ ಜೈದೇವ್ ಶಾಕ್ ಆಗಿದ್ದನು. ರಾತ್ರಿಯಿಂದ ಮನೆಯಲ್ಲಿರದ ಜೈದೇವ್ಗೆ ಈ ವಿಷಯ ತಿಳಿಸಲು ಶಕುಂತಲಾ ಹಲವು ಬಾರಿ ಕಾಲ್ ಮಾಡಿದ್ದಳು. ಆದ್ರೆ ಜೈದೇವ್ ಕಾಲ್ ರಿಸೀವ್ ಮಾಡಿರಲಿಲ್ಲ.
ಅಮ್ಮ ಹೇಳ್ತಿದ್ದಂತೆ ಮನೆಗೆ ಓಡೋಡಿ ಬಂದ ಜೈದೇವ್
ಮನೆಗೆ ಬರುವ ಮುಂಚೆ ತಾಯಿಗೆ ಕಾಲ್ ಮಾಡಿದ ಜೈದೇವ್, ಯಾವಾಗ ಬಂದಿದ್ದು ಎಂದು ಕೇಳುತ್ತಾನೆ. ಇದಕ್ಕೆ ಭೂಮಿಕಾಳನ್ನು ರಕ್ಷಿಸಿರೋದಕ್ಕೆ ಗೌತಮ್ ಖುಷಿಯಾಗಿದ್ದಾನೆ. ಗೌತಮ್ ಒಳ್ಳೆಯ ಮೂಡ್ನಲ್ಲಿರುವಾಗಲೇ ಮನೆಗೆ ಬಂದು ಸೇರಿಕೊಳ್ಳುವಂತೆ ಮಗನಿಗೆ ಶಕುಂತಲಾ ಹೇಳುತ್ತಾಳೆ.
ಜೈದೇವ್ ಮತ್ತು ಶಕುಂತಲಾ ಶಾಕ್
ಮನೆಗೆ ಜೈದೇವ್ ಬರುತ್ತಿದ್ದಂತೆ ಆತನ ಕಪಾಳಕ್ಕೆ ಗೌತಮ್ ಹೊಡೆದಿದ್ದಾನೆ. ಅಮೆರಿಕಾದಲ್ಲಿ ನನ್ನ ಮೇಲೆ ನಡೆದ ಎಲ್ಲಾ ದಾಳಿಗಳ ಹಿಂದಿರೋದು ನೀನೇ ಎಂಬ ಸತ್ಯ ಕಂಡುಕೊಂಡಿದ್ದೇನೆ ಎಂದು ಗೌತಮ್ ಹೇಳಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಜೈದೇವ್ ಮತ್ತು ಶಕುಂತಲಾ ಶಾಕ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

