'ನಿನಗಾಗಿ' ಸೀರಿಯಲ್‌ನಲ್ಲಿ ಮಳೆ ಹುಡುಗಿ ಪೂಜಾ ಗಾಂಧಿ; ಕೂದಲ ಕಲರ್ ನೋಡಿ ನೆಟ್ಟಿಗರು ಶಾಕ್
ಕಿರುತೆರೆಗೆ ಕಾಲಿಟ್ಟ ಮಳೆ ಹುಡುಗಿ. ಬದಲಾದ ಲುಕ್ ನೋಡಿ ನೆಟ್ಟಿಗರು ಶಾಕ್.....
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಿನಗಾಗಿ ಸೀರಿಯಲ್‌ನಲ್ಲಿ ವಿಶೇಷ ಅತಿಥಿಯಾಗಿ ಮಳೆ ಹುಡುಗಿ ಪೂಜಾ ಗಾಂಧಿ ಎಂಟ್ರಿ ಕೊಡಲಿದ್ದಾರೆ.
ಸೂಪರ್ ಸ್ಟಾರ್ ರಚನಾ ಪಾತ್ರದಲ್ಲಿ ದಿವ್ಯಾ ಉರುಡುಗ ಮಿಂಚುತ್ತಿದ್ದಾರೆ. ಆಕೆಗೆ ಮದುವೆ ಮಾಡಿಸಲು ತಾಯಿ ವಜ್ರೇಶ್ವರಿ ಮುಂದಾಗಿದ್ದು ಆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ಕೆಂಪು ಬಣ್ಣದ ಫ್ಯಾನ್ಸಿ ಸೀರಿಯಲ್ಲಿ ಪೂಜಾ ಗಾಂಧಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಮೊದಲ ಸಲ ಕಾಣಿಸಿಕೊಳ್ಳುತ್ತಿರುವ ಕಾರಣ ಕೊಂಚ ಲುಕ್ ಬದಲಾಯಿಸಿಕೊಂಡಿದ್ದಾರೆ.
ಇಷ್ಟು ದಿನ ಸಣ್ಣ ಪುಟ್ಟದಾಗಿ ಹೇರ್ ಕಲರ್ಸ್ ಹೇರ್ ಸ್ಟೈಲ್ ಬದಲಾಯಿಸಿಕೊಳ್ಳುತ್ತಿದ್ದ ಪೂಜಾ ಗಾಂಧಿ ಈಗ ಇಡೀ ಕೂದಲು ಬೋಲ್ಡ್ ಗೋಲ್ಡ್ ಮಾಡಿಸಿಕೊಂಡಿದ್ದಾರೆ.
ಪೂಜಾ ಗಾಂಧಿ ಎಂಟ್ರಿಯಿಂದ ಸ್ಟೋರಿಯಲ್ಲಿ ಏನಾದರೂ ವಿಭಿನ್ನತೆ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ವೀಕ್ಷಕರು. ಇದುವರೆಗೂ ಯಾವ ರೀತಿಯ ಕ್ಲೂ ನೀಡಿಲ್ಲ.
ಮುದ್ದು ಕನ್ನಡತಿ ಎಂದು ಪೂಜಾ ಗಾಂಧಿ ಜೊತೆಗಿರುವ ಫೋಟೋಗಳನ್ನು ದಿವ್ಯಾ ಹಂಚಿಕೊಂಡಿದ್ದಾರೆ. 'ಶ್ರೀಮತಿ ತಶ್ವಿನಿ ಪ್ರಕಾಶ್' ಎಂದು ಪೂಜಾ ಗಾಂಧಿ ಬರೆದುಕೊಂಡಿದ್ದಾರೆ.