Breathtaking Photo: ಗ್ಲಾಮರಸ್ ಲುಕ್‌ನಲ್ಲಿ ದೀಪಿಕಾ ದಾಸ್!
ನಾಗಿಣಿ ಅಲಿಯಾಸ್ ದೀಪಿಕಾ ದಾಸ್ ಹೊಸ ಫೋಟೋಶೂಟ್ ಮೂಲಕ ಪಡ್ಡೆ ಹುಡುಗ ನಿದ್ದೆ ಗೆಡಿಸಿದ್ದಾರೆ. ನೋಡಿ ಹೇಗಿದೆ ಹೊಸ ಲುಕ್.

'ನಾಗಿಣಿ' (Nagini) ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ದೀಪಿಕಾ ದಾಸ್ ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ ಮೂಲಕ ಮನೆಮಗಳಾಗಿ ಬಿಟ್ಟರು.
ಇನ್‌ಸ್ಟಾಗ್ರಾಂ (Instagram) ಮತ್ತು ಯುಟ್ಯೂಬ್‌ನಲ್ಲಿ (Youtube) ಸಿಕ್ಕಾಪಟ್ಟೆ ಆ್ಯಕ್ವಿವ್ ಆಗಿರುವ ದೀಪಿಕಾ ದಾಸ್ (Deepika Das) ಇತ್ತೀಚಿಗೆ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
ಆರೇಂಜ್ (Orange) ಬಣ್ಣದ ಲೇಹಂಗಾ ಮತ್ತು ಕ್ರೀಮ್ ವಿತ್ ಬ್ರೌನ್ ಕಾಂಬಿನೇಷನ್ ಬ್ಲೌಸ್ (Blouse) ಧರಿಸಿ ಲೂಸ್ ಹೇರ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಎರಡೂ ಔಟ್‌ಫಿಟ್‌ಗಳು ನೆಟೆಡ್ ಮಟೀರಿಯಲ್ (Net Material)ನಿಂದ ಸಿದ್ಧಗೊಂಡಿವೆ.
ಸ್ಬಟಲ್ ಮೇಕಪ್ (Subtel Makeup Look) ಮತ್ತು ಕಡಿಮೆ ಆಭರಣದಲ್ಲಿ ಕಾಣಿಸಿಕೊಂಡಿರುವ ದೀಪಿಕಾಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸುಚಿ ಗೌಡ್ರು ಫೋಟೋ ಸೆರೆ ಹಿಡಿದಿರುವುದು.
ಸದ್ಯ ಕಿರುತೆರೆ ಮತ್ತು ಬೆಳ್ಳಿ ತೆರೆಯಿಂದ ದೂರ ಇರುವ ದೀಪಿಕಾ ದಾಸ್ ತಮ್ಮದೇ ಹೆಸರಿನ ಬ್ರ್ಯಾಂಡ್‌ವೊಂದನ್ನು ಆರಂಭಿಸಿ ವಸ್ತ್ರ ವಿನ್ಯಾಸ ಮಾಡುತ್ತಿದ್ದಾರೆ.
ದೀಪಿಕಾ ದಾಸ್ ಯುಟ್ಯೂಬ್ ಚಾನೆಲ್‌ನಲ್ಲಿ ಸಿಂಪಲ್ ಅಡುಗೆ ರೆಸಿಪಿ, ಬ್ಯಾಗ್‌ನಲ್ಲಿ ಏನಿವೆ, ಕಾರಲ್ಲಿ ಏನೆಲ್ಲಾ ಇಟ್ಟಿದ್ದಾರೆ, ಮೇಕಪ್ ಮಾಡಿಕೊಳ್ಳುವುದು ಹೇಗೆ ಎಂದು ತಮ್ಮ ಫಾಲೋವರ್ಸ್‌ಗೆ ತೋರಿಸಿಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.