- Home
- Entertainment
- TV Talk
- ಗಂಡ ಚೆನ್ನಾಗಿದ್ರೆ, ಮನೇಲಿ ಖುಷಿಯಿದ್ರೆ ದೇವರು ಸುಮ್ಮನಿರಲ್ಲ, ನಾಶ ಮಾಡ್ತಾನೆ: Dileep Raj ಪತ್ನಿ ಶ್ರೀವಿದ್ಯಾ
ಗಂಡ ಚೆನ್ನಾಗಿದ್ರೆ, ಮನೇಲಿ ಖುಷಿಯಿದ್ರೆ ದೇವರು ಸುಮ್ಮನಿರಲ್ಲ, ನಾಶ ಮಾಡ್ತಾನೆ: Dileep Raj ಪತ್ನಿ ಶ್ರೀವಿದ್ಯಾ
Actor Dileep Raj Wife Srividya: ಕೆಲವೇ ದಿನಗಳ ಹಿಂದೆ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ಅವರು ಹೃದಯಾಘಾತದಿಂದ ನಿಧನರಾದರು. ಈಗ ಪತ್ನಿ ಶ್ರೀವಿದ್ಯಾ ರಾಜ್ ಅವರು ಮನಸ್ಸಿನ ದುಃಖವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ದಿಲೀಪ್ ಸಾವು ಎಲ್ಲರಿಗೂ ಶಾಕ್
ಆರೋಗ್ಯ, ಫಿಟ್‌ನೆಸ್ ಎಂದು ವರ್ಕೌಟ್ ಮಾಡುತ್ತ, ಮನೆ ಊಟವನ್ನೇ ತಿನ್ನುತ್ತಿದ್ದ ದಿಲೀಪ್ ರಾಜ್ ಅವರು 48ನೇ ವಯಸ್ಸಿಗೆ ನಿಧನರಾಗಿರೋದು ಅನೇಕರಿಗೆ ಶಾಕ್ ಕೊಟ್ಟಿದೆ. ಇಡೀ ಚಿತ್ರರಂಗ ಶಾಕ್‌ನಲ್ಲಿದೆ. ಈಗ ಪತ್ನಿ ಶ್ರೀವಿದ್ಯಾ ರಾಜ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.

ದಿಲೀಪ್ ರಾಜ್ ಪತ್ನಿ ಏನಂದ್ರು?
“ನನಗೆ ಈಗ ಸದ್ಯದ ಪರಿಸ್ಥಿತಿಯಲ್ಲಿ ಏನನ್ನಿಸುತ್ತಿದೆಯೆಂದರೆ - ಒಂದು ಸಂಸಾರ ಹೇಗಿರಬೇಕು ಅಂದ್ರೆ, ಒಬ್ಬ ಗಂಡ ಹೆಂಡತಿಯನ್ನು ಯಾವಾಗಲೂ ಹೊಡೀತಾ ಇರಬೇಕು, ಕುಡಿದು ಬಂದು ಗಲಾಟೆ ಮಾಡ್ತಾ ಇರಬೇಕು. ಒಬ್ಬ ಹೆಂಡತಿ ಯಾವಾಗಲೂ ಗಂಡನನ್ನೇ ದೂಷಿಸುತ್ತಾ ಇರಬೇಕು.
ಮಕ್ಕಳು ತಂದೆ-ತಾಯಿಯನ್ನು ಗೌರವಿಸಬಾರದು. ತಂದೆ-ತಾಯಿಯೂ ಅಷ್ಟೇ, ಮಕ್ಕಳನ್ನು ಯಾವಾಗಲೂ ದೂಷಿಸುತ್ತಾ ಇರಬೇಕು.ಒಂದು ಮನೆಯಲ್ಲಿ ಶಾಂತಿ, ನೆಮ್ಮದಿ ಅನ್ನೋದೇ ಇರಬಾರದು. ಒಬ್ಬರಲ್ಲ ಒಬ್ಬರು ಕಿತ್ತಾಡ್ಕೊಂಡೇ ಇರಬೇಕು” ಎಂದು ಪೋಸ್ಟ್ ಮಾಡಿದ್ದಾರೆ.
ದೇವರಿದ್ದಾನೆ, ಹುಷಾರಾಗಿರಿ
“ಯಾಕೆಂದರೆ ದೇವರಿದ್ದಾನೆ, ಹುಷಾರಾಗಿರಿ. ಯಾರಮನೆ ಚೆನ್ನಾಗಿದೆ, ಯಾರ ಮನೆಯಲ್ಲಿ ಯಾವಾಗಲೂ ನಗು ಇರುತ್ತದೆ, ಯಾರು ತುಂಬ ಖುಷಿಯಿಂದ ಬದುಕುತ್ತಿರ್ತಾರೋ ಅಂಥವರಮನೆಯ ಮೇಲೆ ಅವನಿಗೆ ಯಾವಾಗಲೂ ಕಣ್ಣು ಇರುತ್ತದೆ. ದೇವರಿದ್ದಾನೆ, ಹುಷಾರಾಗಿರಿ” ಎಂದು ಹೇಳಿದ್ದಾರೆ.
ಸಂಸಾರ ನಾಶ ಮಾಡ್ತಾನೆ
“ಅವನು ನಿಮ್ಮ ಸಂಸಾರವನ್ನು ಖಂಡಿತವಾಗಿಯೂ ಬಿಡುವುದಿಲ್ಲ. ಖಂಡಿತ ನಾಶ ಮಾಡದೆ ಬಿಡುವುದಿಲ್ಲ. ದೇವರಿದ್ದಾನೆ, ಹುಷಾರಾಗಿರಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

