- Home
- Entertainment
- TV Talk
- ಪೆಟ್ಟಿ ಅಂಗಡೀಲಿ 400 ರೂಗೆ ಸಿಗ್ತಿತ್ತು; ಮಾಲ್ಡೀವ್ಸ್‌ನಲ್ಲಿ 2400 ರೂ, ಕೊಟ್ಟು ತಗೊಂಡ್ರು; ಸೋನು ಗೌಡ ವಿರುದ್ಧ ಆಕ್ರೋಶ
ಪೆಟ್ಟಿ ಅಂಗಡೀಲಿ 400 ರೂಗೆ ಸಿಗ್ತಿತ್ತು; ಮಾಲ್ಡೀವ್ಸ್‌ನಲ್ಲಿ 2400 ರೂ, ಕೊಟ್ಟು ತಗೊಂಡ್ರು; ಸೋನು ಗೌಡ ವಿರುದ್ಧ ಆಕ್ರೋಶ
Sonu Srinivas Gowda: ಬಿಗ್ ಬಾಸ್ ಒಟಿಟಿ ಖ್ಯಾತಿಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸೋನು ಶ್ರೀನಿವಾಸ್ ಗೌಡ,ಆಗಾಗ ವಿದೇಶಿ ಪ್ರವಾಸಕ್ಕೆ ಹೋಗುತ್ತಾರೆ. ಈ ಬಾರಿ ಅವರು ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದಾರೆ. ಅಲ್ಲಿ ಐಷಾರಾಮಿ ಸಿಗರೇಟ್ ಸೇದಿ ಸುದ್ದಿಯಾಗಿದ್ದಾರೆ.

ಒಂದು ಪ್ಯಾಕ್ ಸಿಗರೇಟ್‌ಗೆ 400 ರೂಪಾಯಿ
ಸೋನು ಗೌಡ ಅವರು ಸಿಗರೇಟ್ ಸೇದುವೆ ಎಂದು ಬಿಗ್ ಬಾಸ್ ಶೋನಲ್ಲಿದ್ದಾಗಲೇ ಹೇಳಿದ್ದರು, ಭಾರತದಲ್ಲಿ ಅವರು ಕೇವಲ ಒಂದು ಪ್ಯಾಕ್ ಸಿಗರೇಟ್‌ಗೆ 400 ರೂಪಾಯಿಗಳನ್ನು ನೀಡಿದ್ದರು. ಆದರೆ ಮಲೇಷಿಯಾದಲ್ಲಿ ಭಾರೀ ಹಣವನ್ನು ತೆತ್ತಿದ್ದಾರೆ.

20 ಸಿಗರೇಟ್‌ಗಳಿರುವ ಒಂದು ಪ್ಯಾಕ್‌ಗೆ 400 ರೂ
ಬೆಂಗಳೂರಿನಿಂದ ಹೊರಡುವಾಗಲೇ ಮೂರು ದಿನಗಳ ಪ್ರವಾಸ ಎಂದು ಸೋನು ಗೌಡ ಅವರು 'ಕ್ಲಾಸಿಕ್ ಕನೆಕ್ಟ್' ಬ್ರ್ಯಾಂಡ್‌ನ 2 ಪ್ಯಾಕ್ ಸಿಗರೇಟ್‌ಗಳನ್ನು ತಂದಿದ್ದರಂತೆ. ಭಾರತದಲ್ಲಿ ಬಲ್ಕ್ ಆಗಿ ತಗೊಂಡರೆ 20 ಸಿಗರೇಟ್‌ಗಳಿರುವ ಒಂದು ಪ್ಯಾಕ್‌ಗೆ 400 ರೂಪಾಯಿ ಕೊಡಬೇಕು.
ಇಂಡಿಯನ್ ಬ್ರ್ಯಾಂಡ್ ಸಿಕ್ಕಿಲ್ಲ
ಮೂರನೇ ದಿನಕ್ಕೆ ಸಿಗರೇಟ್‌ನ ಮೊದಲ ಪ್ಯಾಕ್ ಖಾಲಿಯಾಗಿದೆ. ಇನ್ನೊಂದು ಪ್ಯಾಕ್ ಬ್ಯಾಗ್‌ನಲ್ಲಿದೆ ಎಂದು ಅವರು ಅಂದುಕೊಂಡಿದ್ದಾರೆ. ಆದರೆ ಸಿಗರೇಟ್ ಸಿಕ್ಕಿಲ್ಲ. ಭಾರತೀಯ ಬ್ರ್ಯಾಂಡ್‌ಗಳು ಮಾಲ್ಡೀವ್ಸ್‌ನಲ್ಲಿ ಸಿಗೋದಿಲ್ಲ ಎಂದು ಅವರಿಗೆ ಗೊತ್ತಿಲ್ಲ..
ಭಾರೀ ದುಡ್ಡು ಕೊಟ್ರು
ಅರೆನಾ ಬೀಚ್ ಹೋಟೆಲ್‌ನಿಂದ ಚೆಕ್‌ಔಟ್ ಮಾಡಿ , ಏರ್‌ಪೋರ್ಟ್ ಬಳಿ ಬಂದಾಗ ಸೋನು ಗೌಡ ಅವರು 'ಮಾರ್ಲ್‌ಬೋರೋ' (Marlboro) ಬ್ರ್ಯಾಂಡ್‌ನ ಸಿಗರೇಟ್ ಖರೀದಿಸಿದ್ದಾರೆ. ಒಂದು ಸಿಗರೇಟ್‌ಗೆ 200 ರೂಪಾಯಿ ಆಗಿದ್ದು, ಒಂದು ಪ್ಯಾಕ್‌ಗೆ 2400 ರೂಪಾಯಿ ಕೊಟ್ಟಿದ್ದಾರೆ.
ಸಂಸ್ಕಾರ ಅಲ್ಲ!
"ನಾನು ಪೂರ್ತಿ ಸಿಗರೇಟ್ ಸೇದುವುದಿಲ್ಲ. ಸುಮ್ಮನೆ ಸ್ಟೈಲ್‌ಗಾಗಿ ಒಂದು ಐದು ಪಫ್ ಹೊಡೆದು ಬಿಸಾಕುತ್ತಿದ್ದೆ. ಆದರೆ ಈ ದುಬಾರಿ ಸಿಗರೇಟ್ ಹಾಗೆ ಬಿಸಾಡಲು ನನ್ನ ಕೈಯಲ್ಲಿ ಆಗಲ್ಲ” ಎಂದು ನಕ್ಕಿದ್ದಾರೆ.
ಸಿಗರೇಟ್ ಸೇದಬೇಡಿ, ಇದು ಸಂಸ್ಕಾರ ಅಲ್ಲ ಎಂದು ಅನೇಕರು ಸೋನು ಗೌಡಗೆ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

