Wedding Time: ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟ ಕುನಾಲ್ ವರ್ಮಾ!
ಸರಳವಾಗಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡ ನಟ ಕುನಾಲ್ ವರ್ಮಾ ಮತ್ತು ಪೂಜಾ ಬ್ಯಾನರ್ಜಿ. ಎಷ್ಟು ಸರಳವಾಗಿದೆ ನೋಡಿ ಗೋವಾ ಮದುವೆ ಫೋಟೋ

ನಟಿ ಪೂಜಾ ಬ್ಯಾನರ್ಜಿ ಮತ್ತು ನಟ ಕುನಾಲ್ ವರ್ಮಾ (Kunal Verma) ನವೆಂಬರ್ 15ರಂದು ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆ ಫೋಟೋ ಮತ್ತು ವಿಡಿಯೋ ನೋಡಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೋಸ್ಕರ ಇನ್‌ಸ್ಟಾಗ್ರಾಂನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
'Newly Married again' ಎಂದು ಪೂಜಾ ಬರೆದುಕೊಂಡಿದ್ದಾರೆ, 'ನನ್ನ ರಾಣಿ ಆಗಮಿಸಿದ್ದಾರೆ' ಎಂದು ಕುನಾಲ್ ಬರೆದುಕೊಂಡಿದ್ದಾರೆ.
ಮನೆಯಲ್ಲಿ ಸರಳವಾಗಿ ನಡೆದ ಅರಿಶಿಣ ಶಾಸ್ತ್ರದ ಪೋಟೋಗಳನ್ನು ಪೂಜಾ ಹಂಚಿಕೊಂಡಿದ್ದರು. ಕುಟುಂಬಸ್ಥರು ಹಾಗೂ ಸಿನಿ ಸ್ನೇಹಿತರು ಭಾಗಿಯಾಗಿದ್ದರು.
ಗೋವಾದಲ್ಲೇ ನಡೆದಿರುವ ಸಂಗೀತ್ ಕಾರ್ಯಕ್ರಮದಲ್ಲಿ ಇಬ್ಬರು ಮಾಡ್ರನ್ ಡ್ರೆಸ್‌ನಲ್ಲಿ ಮಿಂಚಿಸ್ದಾರೆ. 'ಕೊನೆಗೂ ನನ್ನ ಮದುವೆ ಆಯ್ತು ಅನ್ನೋ ಹಾಡು ಹಾಡಬಹುದು' ಎಂದು ಬರೆದುಕೊಂಡಿದ್ದಾರೆ.
ಮಾರ್ಚ್ 2020ರಲ್ಲಿ ಈ ಜೋಡಿ ರಿಜಿಸ್ಟರ್ ಮದುವೆಯಾಗಿದ್ದರು. ಗುರು ಹಿರಿಯರು ಹಾಗೂ ಕುಟುಂಬಸ್ಥರ ಸಮ್ಮುಕದಲ್ಲಿ ಸಂಪ್ರದಾಯದಂತೆ ದಾಂಪತ್ಯಕ್ಕೆ ಕಾಲಿಡಬೇಕೆಂದು ಇದೀಗ ಗೋವಾದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.