- Home
- Entertainment
- TV Talk
- ಈಗಲೂ ಸೋಷಿಯಲ್ ಮೀಡಿಯಾ ವಾರ್.. ಗಿಲ್ಲಿ ಬದಲು ರಕ್ಷಿತಾ ಗೆಲ್ಬೇಕಿತ್ತು ಅಂತ..! ಯಾಕೆ ಗೊತ್ತಾ?
ಈಗಲೂ ಸೋಷಿಯಲ್ ಮೀಡಿಯಾ ವಾರ್.. ಗಿಲ್ಲಿ ಬದಲು ರಕ್ಷಿತಾ ಗೆಲ್ಬೇಕಿತ್ತು ಅಂತ..! ಯಾಕೆ ಗೊತ್ತಾ?
ಬಿಗ್ ಬಾಸ್ ಕನ್ನಡ 12 ವಿನ್ನರ್ ಗಿಲ್ಲಿ ನಟ ಅವರೇ ಎಂಬುದು ಇಡೀ ಕರ್ನಾಟದ ತುಂಬೆಲ್ಲಾ ಸುದ್ದಿಯಾಗುತ್ತಿದ್ದಂತೆ, ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಗಿಲ್ಲಿ ಬದಲು ರಕ್ಷಿತಾ ಶೆಟ್ಟಿ ಗೆಲ್ಲಬೇಕಿತ್ತು ಎಂದು ವಾದವನ್ನು ಶುರುಮಾಡಿಕೊಂಡಿದ್ದಾರೆ.

ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ, ಬಿಗ್ ಬಾಸ್ ಕನ್ನಡ ಸೀಸನ್ 123ರ ವಿನ್ನರ್ ಗಿಲ್ಲಿ ನಟ ನಟರಾಜ್. ಈ ಬಗ್ಗೆ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ಕಡೆ ನ್ಯೂಸ್ ಹರಡುತ್ತಿದೆ. ಇದು ಬಹುತೇಕರಿಗೆ ಗೊತ್ತು.
ಆದರೆ, ಸೋಷಿಯಲ್ ಮೀಡಿಯಾಗಳಲ್ಲಿ ಇದೀಗ ಗಿಲ್ಲಿ ಬದಲು ರಕ್ಷಿತಾ ಶೆಟ್ಟಿ ಅವರೇ ವಿನ್ನರ್ ಆಗಬೇಕಿತ್ತು ಎಂದು ಹಲವರು ಹೇಳಿಕೆ ನೀಡುತ್ತಿದ್ದಾರೆ. ಆದರೆ, ಅದಕ್ಕೆ ಅವರು ಕೊಡುವ ಕಾರಣವೇನು?
ನೆಟ್ಟಿಗರಲ್ಲಿ ಹಲವರ ಪ್ರಕಾರ, ರಕ್ಷಿತಾ ಶೆಟ್ಟಿಯವರು ಕೇವಲ ಯೂಟ್ಯೂಬ್ ಕಟೆಂಟ್ ಕ್ರಿಯೇಟರ್. ಆದರೆ ಗಿಲ್ಲಿ ನಟ ನಟರಾಗಿದ್ದಾರೆ. ಯೂಟ್ಯೂಬ್ ಒಂದರಿಂದಲೇ ರಕ್ಷಿತಾ ಇಷ್ಟೊಂದು ಫೇಮಸ್ ಆಗಿ ಬಿಗ್ ಬಾಸ್ ಶೋಗೆ ಸ್ಥಾನ ಪಡೆದಿದ್ದಾರೆ. ಅದಕ್ಕಾಗಿ ಅವರೇ ಗಿಲ್ಲಿಗಿಂತಲೂ ಗ್ರೇಟ್ ಅಂತಿದ್ದಾರೆ ಕೆಲವರು.
ಆದರೆ, ಸಾಕಷ್ಟು ಜನ ಗಿಲ್ಲಿ ಪರವಾಗಿ ಇರೋದು ಕೂಡ ಹೌದು. ಅದೇ ಕಾರಣಕ್ಕೆ ಅವರಿಗೆ ಬಹಳಷ್ಟು ವೋಟ್ ಬಂದಿವೆ. ಆದರೆ, ಕೆಲವರಿಗೆ ರಕ್ಷಿತಾ ಶೆಟ್ಟಿ ಗೆಲ್ಲಬೇಕಿತ್ತು ಎಂಬ ಬಯಕೆ ಇದೆ ಎಂಬುದು ಈಗ ಜಗತ್ತಿಗೆ ಗೊತ್ತಾಗುತ್ತಿದೆ.
ಆದರೆ, ಸಿಕ್ಕ ಮಾಹಿತಿ ಪ್ರಕಾರ, ರಕ್ಷಿತಾ ಶೆಟ್ಟಿಗೆ ರನ್ನರ್ ಅಪ್ ಸ್ಥಾನ ಸಿಕ್ಕಿರೋದು ಕೂಡ ಡೌಟ್. ಗಿಲ್ಲಿ ವಿನ್ನರ್, ಅಶ್ವಿನಿ ಗೌಡ ರನ್ನರ್ ಅಪ್ ಅಂತ ಹೇಳ್ತಾ ಇರೋರು ಕೂಡ ತುಂಬಾ ಜನ ಇದಾರೆ.
ಗಿಲ್ಲಿ ವಿನ್ನರ್ ಅನ್ನೋದು ಕನ್ಫರ್ಮ್ ಎನ್ನುತ್ತಿವೆ ಸುದ್ದಿ ಮೂಲಗಳು. ಆದರೆ ರಕ್ಷಿತಾಗೆ ರನ್ನರ್ ಅಪ್ ಟ್ರೋಪಿ ಕೂಡ ಸಿಗೋದು ಡೌಟ್ ಎಂಬುದು ಇತ್ತೀಚಿನ ಗಾಸಿಪ್.
ಏನೇ ಆದರೂ, ಇನ್ನೇನು ಕೆಲವೇ ಸಮಯದಲ್ಲಿ ಬಿಗ್ ಬಾಸ್ ಕನ್ನಡ 12 ಸೀಸನ್ ವಿನ್ನರ್ ಯಾರು, ರನ್ನರ್ ಅಪ್ ಯಾರು ಹಾಗೂ 3 ಸ್ಥಾನ ಯಾರ ಪಾಲಾಗಲಿದೆ ಎಂಬುದು ತಿಳಿಯಲಿದೆ. ಇದನ್ನು ಕಲರ್ಸ್ ಕನ್ನಡ ಅಧಿಕೃತವಾಗಿ ಪ್ರಕಟಿಸಲಿದೆ. ಅಲ್ಲಿಯವರೆಗೆ ಕಾಯುವುದು ಒಳ್ಳೆಯದು.. ಆದರೂ ಕೂಡ ಮತ್ತೆ ವಿವಾದ ಮುಂದುವರಿಯುವುದಂತೂ ಪಕ್ಕಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

