ಮನೆ ಮಂದಿಗೆ ಗಿಲ್ಲಿ ಪುಲಾವ್ ಸವಿಯೋ ಭಾಗ್ಯ, ತಿಂದವರು ಹರೋ ಹರ
Bigg Boss Kannada 12 : ಬಿಗ್ ಬಾಸ್ ಫಿನಾಲೆ ವೀಕ್ ನಲ್ಲಿ ಸ್ಪರ್ಧಿಗಳಿಗೆ ಗಿಲ್ಲಿ ಪುಲಾವ್ ತಿನ್ನುವ ಭಾಗ್ಯ ಒಲಿದು ಬಂದಿದೆ. ಗಿಲ್ಲಿ ಅಡುಗೆ ನೋಡಿಯೇ ಭಯಪಟ್ಟ ಸ್ಪರ್ಧಿಗಳು ತಿಂದ್ಮೇಲೆ ಏನಂದ್ರು ಗೊತ್ತಾ?

ಗಿಲ್ಲಿಗೆ ಕಿಚ್ಚನ ಟಾಸ್ಕ್
ಬಿಗ್ ಬಾಸ್ ಕೊನೆ ವಾರಕ್ಕೆ ಬಂದು ನಿಂತಿದೆ. ಫಿನಾಲೆ ವಾರವನ್ನು ಬಿಗ್ ಬಾಸ್ ಸ್ಪರ್ಧಿಗಳು ಎಂಜಾಯ್ ಮಾಡ್ತಿದ್ದಾರೆ. ಲಗ್ಜುರಿ ಟಾಸ್ಕ್ ಮಾಡಿ ಕೊನೆ ಬಾರಿ ಬಿಗ್ ಬಾಸ್ ಸ್ಪರ್ಧಿಗಳು ಮಟನ್, ಚಿಕನ್, ಪನ್ನೀರ್, ಕಾಫಿ ಪಡೆಯೋದ್ರಲ್ಲಿ ಸಕ್ಸಸ್ ಆಗಿದ್ದಾರೆ. ಈ ಮಧ್ಯೆ ಗಿಲ್ಲಿಗೆ ಕಿಚ್ಚನ ಟಾಸ್ಕ್ ಬಿಸಿ ತಟ್ಟಿದೆ. ಕಿಚ್ಚ ಸುದೀಪ್ ಅವರು, ವೀಕೆಂಡ್ ನಲ್ಲಿ ಗಿಲ್ಲಿ ಅವರಿಗೆ ಒಂದು ಟಾಸ್ಕ್ ನೀಡಿದ್ದರು. ಇಷ್ಟು ದಿನ ಅಡುಗೆ ಮನೆಗೆ ಹೋಗ್ದೆ, ಅಡುಗೆ ಮಾಡುವವರನ್ನು ಕಾಡುತ್ತಿದ್ದ ಗಿಲ್ಲಿಗೆ ಅಡುಗೆ ಟಾಸ್ಕ್ ನೀಡಿದ್ದರು.
ಬಿಗ್ ಬಾಸ್ ನಿಂದ ಎಚ್ಚರಿಕೆ
ವೀಕೆಂಡ್ ಮುಗಿದು ಒಂದು ದಿನ ಆಗ್ತಾ ಬಂದ್ರೂ ಗಿಲ್ಲಿ ಅಡುಗೆ ಮನೆಗೆ ಹೋಗಿರಲಿಲ್ಲ. ಈ ಬಗ್ಗೆ ಬಿಗ್ ಬಾಸ್ , ಗಿಲ್ಲಿ ಅವರಿಗೆ ಎಚ್ಚರಿಕೆ ನೀಡಿದ್ದರು. ಅಡುಗೆ ಮಾಡಿಲ್ಲ ಅಂದ್ರೆ ಇಡೀ ಮನೆಗೆ ಶಿಕ್ಷೆ ನೀಡೋದಾಗಿ ಬಿಗ್ ಬಾಸ್ ಹೇಳಿದ್ದರು. ಬಿಗ್ ಬಾಸ್ ಎಚ್ಚರಿಕೆ ನಂತ್ರ ಗಿಲ್ಲಿ ಅಡುಗೆ ಮಾಡಲು ಮುಂದಾಗಿದ್ದಾರೆ. ಬಿಗ್ ಬಾಸ್ ಹೇಳಿದಂತೆ ತಲೆ ಬಾಚಿಕೊಂಡ ಗಿಲ್ಲಿ ನಂತ್ರ ಅಡುಗೆ ಮನೆ ಪ್ರವೇಶ ಮಾಡಿದ್ದರು. ಇದನ್ನು ನೋಡಿ ರಘು ಭಯಪಟ್ಟಿದ್ದಾರೆ. ಫಿನಾಲೆ ವಾರದಲ್ಲಿ ರುಚಿಯಾದ ಅಡುಗೆ ತಿನ್ನುವ ಕನಸು ಕಂಡಿದ್ದೆ. ಆದ್ರೆ ಗಿಲ್ಲಿ ಕೈರುಚಿ ತಿನ್ನುವ ಸ್ಥಿತಿ ಬಂದಿದೆ ಅಂತ ಹೇಳಿದ್ದಾರೆ.
ಪುಲಾವ್ ಮಾಡಿದ ಗಿಲ್ಲಿ
ಗಿಲ್ಲಿಗೆ ಅನ್ನ, ಬಿಸಿ ನೀರು ಬಿಟ್ಟರೆ ಬೇರೆ ಯಾವುದೇ ಅಡುಗೆ ಬರೋದಿಲ್ಲ. ಅದನ್ನು ಗಿಲ್ಲಿ ಸ್ವತಃ ಒಪ್ಪಿಕೊಂಡಿದ್ದಾರೆ. ಗಿಲ್ಲಿಗೆ ಏನು ಅಡುಗೆ ಮಾಡ್ಬೇಕು ಅನ್ನೋದೇ ತಿಳಿದಿರಲಿಲ್ಲ. ಅಡುಗೆ ಮನೆಗೆ ಬಂದ ಕಾವ್ಯಾ, ಏನು ಅಡುಗೆ ಅಂತ ಕೇಳಿದ್ರೆ, ಬಿಗ್ ಬಾಸ್ ಅಡುಗೆ ಸ್ಟಾರ್ಟ್ ಮಾಡಿ ಎಂದಿದ್ದಾರೆ,ಅದಕ್ಕೆ ಈರುಳ್ಳಿ ಕತ್ತರಿಸುತ್ತಿದ್ದೇನೆ ಅಂತ ಗಿಲ್ಲಿ ಹೇಳಿದ್ದರು. ಎಲ್ಲ ತರಕಾರಿಯನ್ನು ಸಿಪ್ಪೆ ಸಮೇತ ಕತ್ತರಿಸಿದ್ದ ಗಿಲ್ಲಿ ಕೊನೆಗೂ ಪುಲಾವ್ ಮಾಡಿದ್ದಾರೆ.
ಗಿಲ್ಲಿ ಕಾಡಿದ ರಘು
ಗಿಲ್ಲಿ, ಎಲ್ಲ ತರಕಾರಿ ಹಾಕಿ ಪುಲಾವ್ ಮಾಡಿದ್ದಾರೆ. ಆದ್ರೆ ಪುಲಾವ್ ಮಾಡಲು ತುಂಬಾ ಸಮಯ ತೆಗೆದುಕೊಂಡಿದ್ದಾರೆ. ಯಾವದಾದ್ಮೇಲೆ ಯಾವುದನ್ನು ಹಾಕ್ಬೇಕು ಎಂಬುದು ಗಿಲ್ಲಿಗೆ ತಿಳಿದಿರಲಿಲ್ಲ. ಆದ್ರೂ ಅದು ಇದು ಹಾಕಿ ಪುಲಾವ್ ಮಾಡಿದ್ದಾರೆ. ಹಿಂದೆ ರಘು ಅಡುಗೆ ಮಾಡುವಾಗ ಗಿಲ್ಲಿ ಅವರನ್ನು ಕಾಡಿದ್ದರು. ಕೋಪಗೊಂಡ ರಘು ಅವರಿಗೆ ಹೊಡೆಯುವಷ್ಟು ಕೋಪ ಬಂದಿತ್ತು. ಗಿಲ್ಲಿ ಕಾಡಿದ್ದಕ್ಕೆ ರಘು ಸೇಡು ತೀರಿಸಿಕೊಂಡಿದ್ದಾರೆ. ಅಡುಗೆ ಆಯ್ತಾ ಆಯ್ತಾ ಅಂತ ಗಿಲ್ಲಿ ಅವರನ್ನು ಇರಿಟೇಟ್ ಮಾಡಿದ್ದಾರೆ. ಇದ್ರಿಂದ ಗಿಲ್ಲಿ ಕೋಪಗೊಂಡಿದ್ದರು.
ಪುಲಾವ್ ರುಚಿ ಹೇಗಿತ್ತು?
ಕೊನೆಗೂ ಗಿಲ್ಲಿ ಪುಲಾವ್ ಮಾಡಿ ಬಿಗ್ ಬಾಸ್ ಸ್ಪರ್ಧಿಗಳಿಗೆ ನೀಡಿದ್ದಾರೆ. ಆದ್ರೆ ಪುಲಾವ್ ತಿನ್ನುವಾಗ ಸ್ಪರ್ಧಿಗಳು ಹಿಂಸೆ ಅನುಭವಿಸಿದ್ದಾರೆ. ಪುಲಾವ್ ಗೆ ಉಪ್ಪಿಲ್ಲ, ಅನ್ನ ಬೆಂದಿಲ್ಲ, ಹಸಿ ಆಲೂಗಡ್ಡೆ, ಸಿಪ್ಪೆ ತೆಗೆಯದ ತರಕಾರಿ. ಬರೀ ಪುಲಾವ್ ವಾಸನೆ ಬಂದಿದೆಯೇ ಹೊರತು ರುಚಿಯಲ್ಲ ಅಂತ ಬಿಗ್ ಬಾಸ್ ಉಳಿದ ಸ್ಪರ್ಧಿಗಳು ಗಿಲ್ಲಿ ಪುಲಾವ್ ಬಗ್ಗೆ ಕಮೆಂಟ್ ಮಾಡಿದ್ದಾರೆ. ರಕ್ಷಿತಾ ಮಾತ್ರ ಗಿಲ್ಲಿ ಮಾಡಿದ ಅಡುಗೆಯನ್ನು ಯಾವುದೇ ಕಮೆಂಟ್ ಇಲ್ದೆ ತಿಂದು ಎಂಜಾಯ್ ಮಾಡಿದ್ದಾರೆ.
ಮುರಿದ ಸ್ಪೂನ್
ಗಿಲ್ಲಿ ಅಡುಗೆಯನ್ನು ಎಷ್ಟು ಕಷ್ಟಪಟ್ಟು ಮಾಡಿದ್ದಾರೆ ಅಂದ್ರೆ ಅವರು ಮಾಡುವಾಗ ಸ್ಪೂನ್ ಮುರಿದಿದೆ. ಇದನ್ನು ನೋಡಿ ಕಾವ್ಯಾ ತಮಾಷೆ ಮಾಡಿ ನಕ್ಕಿದ್ದಾರೆ. ಗಿಲ್ಲಿ ಪುಲಾವ್ ನೋಡಿಯೇ ಕಾವ್ಯಾ ರುಚಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

