- Home
- Entertainment
- Sandalwood
- Sudeep with Suvarna: ಕೂದ್ಲಲ್ಲ ಸರ್, ಏನ್ ಬೇಕಾದ್ರೂ ತಗೀತಿನಿ ಅಂದೆ, ಎಲ್ಲ ರಿಜೆಕ್ಟ್ ಮಾಡಿದ ಚಿತ್ರ ಒಪ್ಪಿದೆ!
Sudeep with Suvarna: ಕೂದ್ಲಲ್ಲ ಸರ್, ಏನ್ ಬೇಕಾದ್ರೂ ತಗೀತಿನಿ ಅಂದೆ, ಎಲ್ಲ ರಿಜೆಕ್ಟ್ ಮಾಡಿದ ಚಿತ್ರ ಒಪ್ಪಿದೆ!
ಕಿಚ್ಚ ಸುದೀಪ್ ತಮ್ಮ ಸಿನಿ ಪಯಣದ ಯಶಸ್ಸಿನ ಗುಟ್ಟನ್ನು ಹಂಚಿಕೊಂಡಿದ್ದಾರೆ. ಹಲವು ನಟರು ತಿರಸ್ಕರಿಸಿದ್ದ 'ಹುಚ್ಚ' ಚಿತ್ರದ ಪಾತ್ರ ತಮಗೆ ಹೇಗೆ ಸಿಕ್ಕಿತು ಮತ್ತು ಆ ಚಿತ್ರ ತಮ್ಮ ಬದುಕನ್ನು ಹೇಗೆ ಬದಲಾಯಿಸಿತು ಎಂಬುದನ್ನು ವಿವರಿಸಿದ್ದಾರೆ.

ಯಶಸ್ಸಿನ ಹಾದಿ ತಿಳಿಸಿದ ಸುದೀಪ್
ಅದೃಷ್ಟ ಎನ್ನೋದು ಹಾಗೆನೇ. ಎಲ್ಲಿಂದ, ಯಾವಾಗ, ಯಾವ ರೂಪದಲ್ಲಿ ಬರುತ್ತದೆ ಎನ್ನುವುದು ತಿಳಿಯುವುದೇ ಇಲ್ಲ. ಇನ್ನು ಸಿನಿಮಾ ಸೆಲೆಬ್ರಿಟಿಗಳ ವಿಷ್ಯದಲ್ಲಂತೂ ಇದು 100ಕ್ಕೆ 100 ಸತ್ಯ. ಯಾವ ಚಿತ್ರ ಹೇಗೆ ಒಲಿಯುತ್ತದೆ, ಯಾವ ಚಿತ್ರ ಹೇಗೆ ಯಶಸ್ಸಿನ ಉತ್ತುಂಗಗಕ್ಕೆ ಕರೆದುಕೊಂಡು ಹೋಗುತ್ತದೆ ಎನ್ನುವುದು ತಿಳಿಯುವುದೇ ಕಷ್ಟ. ಅಂಥದ್ದೇ ಒಂದು ಕುತೂಹಲದ ಸ್ಟೋರಿಯನ್ನು Asianet Suvarna TV ಜೊತೆ ಹಂಚಿಕೊಂಡಿದ್ದಾರೆ ಕಿಚ್ಚ ಸುದೀಪ್.
ಸುದೀಪ್ ಸಿನಿ ಪಯಣ
ಕಿಚ್ಚ ಸುದೀಪ್ ಅವರ 'ಸ್ಪರ್ಶ' (2000) ಅವರ ನಾಯಕ ನಟನಾಗಿ ಪದಾರ್ಪಣೆ ಮಾಡಿದ ಚಿತ್ರ. ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಆದರೆ, ಅವರ ಮೊದಲ ಚಿತ್ರ 'ಬ್ರಹ್ಮ'. ಆದರೆ ಇದು ಬಿಡುಗಡೆಯಾಗಲಿಲ್ಲ. '1997ರಲ್ಲಿ ತಾಯವ್ವ' ಮತ್ತು 1999ರಲ್ಲಿ 'ಪ್ರತ್ಯರ್ಥ' (1999) ಚಿತ್ರಗಳಲ್ಲಿ supporing ಪಾತ್ರಗಳಲ್ಲಿ ಇವರು ನಟಿಸಿದ್ದರು.
ಸೇತು ರೀಮೇಕ್ ಹುಚ್ಚ
ಆದರೆ, ಇವರಿಗೆ ದೊಡ್ಡಮಟ್ಟದ ಕೀರ್ತಿ ತಂದುಕೊಟ್ಟ ಚಿತ್ರ ಹುಚ್ಚ. ಇದು ಸೇತು (Sethu) 1999ರ ತಮಿಳು ಚಿತ್ರವಾಗಿದ್ದು, ಇದರ ಕಥೆಯನ್ನು ಆಧರಿಸಿ ಕನ್ನಡದಲ್ಲಿ "ಹುಚ್ಚ" ಚಿತ್ರವನ್ನು ರೀಮೇಕ್ ಮಾಡಲಾಯಿತು. ಹುಚ್ಚ (Huchcha) ಚಿತ್ರ ಓಂ ಪ್ರಕಾಶ್ ನಿರ್ದೇಶನದಲ್ಲಿ 2001ರಲ್ಲಿ ಬಿಡುಗಡೆಯಾಯಿತು. ಸುದೀಪ್ (Kiccha Sudeep) ಈ ಚಿತ್ರದಲ್ಲಿ ಕಾಲೇಜಿನ ರೌಡಿ ವಿದ್ಯಾರ್ಥಿಯಾಗಿ ನಟಿಸಿದ್ದರು.
ರಿಜೆಕ್ಟ್ ಮಾಡಿದ ಹುಚ್ಚ ಚಿತ್ರ
ಆದರೆ, ಓರ್ವ ಪ್ರಸಿದ್ಧ ನಟನಾಗಿ ಗುರುತಿಸಿಕೊಳ್ಳದ ಕಾಲದಲ್ಲಿ ಎಲ್ಲರೂ ರಿಜೆಕ್ಟ್ ಮಾಡಿದ ಹುಚ್ಚ ಚಿತ್ರವು ತಮಗೆ ಹೇಗೆ ಸಿಕ್ಕಿತ್ತು ಎನ್ನುವ ಬಗ್ಗೆ ಸುದೀಪ್ ಸುವರ್ಣ ಟಿವಿಯ ಜೊತೆ ಮಾತನಾಡಿದ್ದಾರೆ.
ನನಗೆ ರೋಲ್ ಸಿಕ್ಕಿತು
ಅವರು ಬಿಟ್ಟು, ಇವರು ಬಿಟ್ಟು ಎಲ್ಲರೂ ಬಿಟ್ಟ ಮೇಲೆ ಈ ರೋಲ್ ನನಗೆ ಸಿಕ್ಕಿತು. ನೀವು ಮಾಡಿ, ನೀವು ಮಾಡಿ ಎಂದು ಅಂದಿನ ಹೆಸರಾಂತ ನಟರಿಗೆಲ್ಲಾ ಕೇಳಿದಾಗ, ಅವರು ರಿಜೆಕ್ಟ್ ಮಾಡಿದ್ದರು. ಅದಕ್ಕೆ ಕಾರಣ, ಆ ರೋಲ್ಗೆ ಕೂದಲನ್ನು ತೆಗೆಯಬೇಕಿತ್ತು. ಯಾರೂ ಒಪ್ಪಿರಲಿಲ್ಲ ಎಂದು ಸುದೀಪ್ ಹೇಳಿದ್ದಾರೆ.
ನನ್ನಂಥವರು ಚಾಯ್ಸೇ ಆಗಿರಲಿಲ್ಲ
ಆ ಸಂದರ್ಭದಲ್ಲಿ ಅಂಥ ಟ್ಯಾಲೆಂಟೆಡ್ ರೋಲ್ನ ನನ್ನಂಥವರು ಚಾಯ್ಸೇ ಆಗಿರಲಿಲ್ಲ. ಆದರೆ ಯಾರೂ ಬೇಡ ಎಂದಾಗ ನಿರ್ದೇಶಕರು ಅದ್ಯಾವುದೋ ಸೈಕಲ್ ಗ್ಯಾಪ್ನಲ್ಲಿ ನನ್ನನ್ನು ನೋಡಿದರು. ಚಿತ್ರಕ್ಕೆ ಬರ್ತಿಯಾ, ಕೂದಲು ತೆಗೆಯಬೇಕು ಎಂದರು. ಆಗ ಕೆಲ್ಸನೇ ಇರಲಿಲ್ಲ. ಕೂದಲು ಏನು, ಏನ್ ಬೇಕಾದ್ರೂ ತೆಗಿತೀನಿ ಸರ್ ಎಂದು ಒಪ್ಪಿಕೊಂಡೆ ಎಂದು ಸುದೀಪ್ ಆ ದಿನಗಳನ್ನು ನೆನೆದಿದ್ದಾರೆ.
ಸಿಕ್ಕಾಪಟ್ಟೆ ಹೆಸರು
ಆದರೆ, ಅದು ಸಿಕ್ಕಾಪಟ್ಟೆ ಹೆಸರು ತಂದುಕೊಟ್ಟಿತು. ನಿರ್ದೇಶಕರಿಗೆ ನನ್ನ ಟ್ಯಾಲೆಂಟ್ ಗೊತ್ತಿರಲಿಲ್ಲ. ನನ್ನ ನಟನೆ ಬಗ್ಗೆ ತಿಳಿದಿರಲಿಲ್ಲ. ಆದರೂ ಈ ಸಿನಿಮಾ ನನ್ನ ಕೈಸೇರಿದ್ದು ಅದೃಷ್ಟ ಎಂದು ಕಿಚ್ಚ ಹೇಳಿಕೊಂಡಿದ್ದಾರೆ. ಸ್ಪರ್ಶ ಚಿತ್ರ ಹಿಟ್ ಆಗಿರುವುದಕ್ಕೆ ಬೇರೆಯದ್ದೇ ಹಲವು ಕಾರಣಗಳು ಇವೆ. ಅಲ್ಲಿ ನನ್ನ ಟ್ಯಾಲೆಂಟ್ ಅಷ್ಟೇನೂ ಇರಲಿಲ್ಲ. ನಾನು ದೊಡ್ಡ ಅಭಿಮಾನಿ ಬಳಗವನ್ನು ಪಡೆಯುವಂಥ ಕ್ಯಾರೆಕ್ಟರ್ ಆ ಚಿತ್ರದಲ್ಲಿ ನನಗೆ ಇರಲಿಲ್ಲ ಎಂದಿದ್ದಾರೆ ಸುದೀಪ್.
ರೌಡಿ ಪಾತ್ರ
ಆದರೆ ಎಲ್ಲರೂ ರಿಜೆಕ್ಟ್ ಮಾಡಿದ ಹುಚ್ಚ ಚಿತ್ರದಿಂದ ನನ್ನ ಜೀವನವೇ ಬದಲಾಯಿತು. ಅದು ಒಳ್ಳೆಯ ರೀತಿಯಲ್ಲಿ ವರ್ಕ್ಔಟ್ ಆಯಿತು. ಅಲ್ಲಿ ರೌಡಿ ಪಾತ್ರ ಆಗಿದ್ದರಿಂದ ಸಿಗರೆಟ್ ಸೇದಬೇಕಿತ್ತು. ನನಗೆ ಆ ಅಭ್ಯಾಸ ಇಲ್ಲ. ದಾಡಿ ಮೀಸೆ ಬೇಕಿತ್ತು. ಅದೂ ಇರಲಿಲ್ಲ. ಒಟ್ಟಿನಲ್ಲಿ ಎಲ್ಲರೂ ರಿಜೆಕ್ಟ್ ಮಾಡಿದ್ದಕ್ಕೆ ನನಗೆ ಛಾನ್ಸ್ ಸಿಕ್ಕು ಒಳ್ಳೆಯ ಚಿತ್ರಗಳು ಹುಡುಕಿ ಬಂದವು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

