- Home
- Entertainment
- TV Talk
- ಬಿಗ್ ಬಾಸ್ ಮನೆ ಮುಂದೆಯೇ ಗಿಲ್ಲಿನಟ-ಕಾವ್ಯಾಗೆ ಮದುವೆ ಮಾಡಿಸಿದ ಅಭಿಮಾನಿಗಳು; ಹನಿಮೂನ್ ಕಳಿಸೋದಷ್ಟೇ ಬಾಕಿಯಂತೆ!
ಬಿಗ್ ಬಾಸ್ ಮನೆ ಮುಂದೆಯೇ ಗಿಲ್ಲಿನಟ-ಕಾವ್ಯಾಗೆ ಮದುವೆ ಮಾಡಿಸಿದ ಅಭಿಮಾನಿಗಳು; ಹನಿಮೂನ್ ಕಳಿಸೋದಷ್ಟೇ ಬಾಕಿಯಂತೆ!
ಬಿಗ್ ಬಾಸ್ ಮನೆಯಿಂದ ಹೊರಬಂದ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರಿಗೆ ಅಭಿಮಾನಿಗಳು ಹಾರ ಹಾಕಿ ಮದುವೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳ ಈ ಅತಿರೇಕದ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಗಿಲ್ಲಿನಟ-ಕಾವ್ಯಾಗೆ ಮದುವೆ ಮಾಡಿಸಿದ ಅಭಿಮಾನಿಗಳು
ಬಿಗ್ ಬಾಸ್ ಮನೆಯಿಂದ ಹೊರಗೆ ಬರುತ್ತಿದ್ದಂತೆಯೇ ಜಾಲಿವುಡ್ ಸ್ಟೂಡಿಯೋ ಮುಂದೆ ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಅವರಿಗೆ ಅಭಿಮಾನಿಗಳೇ ಮದುವೆ ಮಾಡಿಸಿದ್ದಾರೆ. ಇನ್ನೇನಿದ್ದರೂ ಅವರಿಬ್ಬರನ್ನು ಹನಿಮೂನ್ ಕಳಿಸುವುದಷ್ಟೇ ಬಾಕಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಇನ್ನೇನು ಹನಿಮೂನ್ ಕಳಿಸೋದಷ್ಟೇ ಬಾಕಿ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಟ್ರೋಫಿ ಗೆದ್ದು ಭಾರೀ ಪ್ರಸಿದ್ಧಿ ಗಳಿಸಿದ್ದಾರೆ. ಆದರೆ, ಗಿಲ್ಲಿ ನಟ ಬಿಗ್ ಬಾಸ್ ಮನೆಯಲ್ಲಿ ಕಾವ್ಯಾಗೆ ಹಲವು ಬಾರಿ ಲವ್ ಪ್ರಪೋಸ್ ಮತ್ತು ಮದುವೆ ಪ್ರಪೋಸ್ ಮಾಡಿದ್ದರೂ ಇದೆಲ್ಲವನ್ನೂ ಕಾವ್ಯಾ ತಮಾಷೆಯಾಗಿಯೇ ತೆಗೆದುಕೊಂಡು ಅಲ್ಲಿಯೇ ಕೈಬಿಟ್ಟಿದ್ದರು. ಆದರೆ, ಇದೀಗ ಬಿಗ್ ಬಾಸ್ ರಿಯಾಲಿಟಿ ಶೋ ಮುಗಿದ ಕೂಡಲೇ ಅಭಿಮಾನಿಗಳೇ ಸೇರಿಕೊಂಡು ಗಿಲ್ಲಿನಟ ಮತ್ತು ಕಾವ್ಯಾ ಶೈವ ಇಬ್ಬರೂ ಮದುವೆ ಮಾಡಿಸಿದ್ದಾರೆ. ಇದೀಗ ಹನಿಮೂನ್ ಕಳಿಸೋದಷ್ಟೇ ಬಾಕಿ ಎಂದು ಸ್ವತಃ ಅಭಿಮಾನಿಗಳೇ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ಹಂಚಿಕೊಂಡ ನೆಟ್ಟಿಗರೊಬ್ಬರು, ಬಿಗ್ ಬಾಸ್ ಕನ್ನಡ ಸೀಸನ್ 12ನಲ್ಲಿ ನಟಿ ಕಾವ್ಯಾ ಅವರ ಪರಿಸ್ಥಿತಿ ನೆನೆಸಿಕೊಂಡರೆ ಬೇಜಾರ್ ಆಗುತ್ತದೆ. ಇವರೆಂತಹ ಜನರು ಇರಬೇಡ, ಗಿಲ್ಲಿ-ಕಾವ್ಯಾಗೆ ಮದುವೆ ಆಗಿದ್ಯಂತೆ ಹನಿಮೂನ್ ಕಳಿಸುತ್ತಾರಂತೆ, ಇದೆಂತಹಾ ಹುಚ್ಚರ ಸಂತೆ ಎಂದು ಟೀಕೆ ಮಾಡಿದ್ದಾರೆ.
ಇಂತಹ ಅಭಿಮಾನಿಗಳು ಇವರು ಅಕ್ಕ-ತಂಗಿ ಇದ್ದರೆ ಹೋಗಿ ಗಿಲ್ಲಿಗೆ ಮದುವೆ ಮಾಡಿಸಲಿ ನೋಡೋಣ. ಕಾವ್ಯ ಬೇರೆಯವರ ಹೆಣ್ಣು ಮಗು ಅವಳಿಗೆ ಏನು ಆದ್ರೂ ಇವರಿಗೆ ಏನಾಗಬೇಕು. ಇದು ಗಿಲ್ಲಿನಟ ಮತ್ತು ಕಾವ್ಯಾ ಅವರ ಅಭಿಮಾನಿಗಳ ಅತ್ಯಂತ ಕೆಟ್ಟ ವರ್ತನೆಯಾಗಿದೆ ಎಂದು ಬರೆದುಕೊಂಡಿದ್ದಾರೆ.
#BBK12 Seriously ಕಾವ್ಯ ಪರಿಸ್ಥಿತಿ ನೆನೆಸಿಕೊಂಡ್ರೆ ಬೇಜಾರ್ ಆಗುತ್ತೆ ಎಂತ ಜನರು ಇವರು ಮದುವೆ ಆಗಿದ್ಯಂತೆ ಹನಿಮೂನ್ ಕಳ್ಸ್ತಾರಂತೆ ಹುಚ್ಚರ ಸಂತೆ ಇವರು ಅಕ್ಕ ತಂಗಿ ಇದ್ರೆ ಹೋಗಿ ಗಿಲ್ಲಿಗೆ ಮದುವೆ ಮಾಡಿಸಲಿ ನೋಡೋಣ
ಕಾವ್ಯ ಬೇರೆಯವರ ಹೆಣ್ಣು ಮಗು ಅವಳಿಗೆ ಏನು ಆದ್ರೂ ಇವರಿಗೆ ಏನಾಗಬೇಕು worst behaviour from mutual fans pic.twitter.com/OUzJZIyKTB— Srinidhi (@srinidhi92) January 19, 2026
ಗಿಲ್ಲಿ-ಕಾವ್ಯಾ ಜೋಡಿ ಕಟೌಟ್‌ಗಳಿಗೆ ಹೂವಿನ ಹಾರ
ಆದರೆ, ಇವರು ಅಸಲಿಯಾಗಿ ಗಿಲ್ಲಿನಟ ಹಾಗೂ ಕಾವ್ಯಾ ಅವರಿಗೆ ಮದುವೆ ಮಾಡಿಸಿಲ್ಲ. ಇವರು ಬಿಗ್ ಬಾಸ್ ಮನೆ ನಿರ್ಮಾಣ ಮಾಡಿದ್ದ ಜಾಲಿವುಡ್ ಸ್ಟೂಡಿಯೋ ಮುಂದೆ ಬೃಹತ್ ಮಟ್ಟದಲ್ಲಿ ನಿರ್ಮಿಸಲಾಗಿದ್ದ ಗಿಲ್ಲಿನಟ ಮತ್ತು ಕಾವ್ಯಾ ಅವರ ಜೋಡಿ ಕಟೌಟ್‌ಗಳಿಗೆ ಹೂವಿನ ಹಾರಗಳನ್ನು ಹಾಕಿ, ಇದರ ಮುಂದೆ ವಾದ್ಯಮೇಳವನ್ನು ಬಾರಿಸಿ ಮದುವೆ ಮದುವೆ ಮಾಡಿಸಿದ್ದಾರೆ. ಗಿಲ್ಲಿ-ಕಾವ್ಯಾ ಅವರ ಕಟೌಟ್‌ಗಳಿಗೆ ಮದುವೆ ಮಾಡಿಸಿದ್ದನ್ನೇ ನಿಜ ಮದುವೆ ಎಂದು ಬಿಂಬಿಸಲು ಮುಂದಾಗಿದ್ದಾರೆ.
ಕಾವ್ಯಾಳ ಜಾಗದಲ್ಲಿ ನಿಂತು ನೋಡಿದರೆ ತಪ್ಪು
ಇದೀಗ ಬಿಗ್ ಬಾಸ್ ಕಾರ್ಯಕ್ರಮ ಮುಕ್ತಾಯಗೊಂಡು ಮನೆಯಿಂದ ಹೊರಗೆ ಬಂದಿದ್ದಾರೆ. ಈಗ ಇಬ್ಬರನ್ನೂ ಹನಿಮೂನ್‌ಗೆ ಕಳಿಸಬೇಕು ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಆದರೆ, ಇದು ಅಭಿಮಾನಿಗಳ ಅತಿರೇಕದ ವರ್ತನೆ ಎಂದೇ ಹೇಳಬಹುದು. ಆದರೆ, ಗಿಲ್ಲಿ ನಟ ಅವರ ಅಭಿಮಾನಿಗಳು ತಮ್ಮ ನಾಯಕ ಪ್ರೀತಿ ಮಾಡುವ ಹುಡುಗಿಯೊಂದಿಗೆ ಮದುವೆ ಮಾಡಿಸಿದ್ದೇವೆ ಎಂದು ಸಂತಸಪಟ್ಟಿದ್ದಾರೆ.
ಆದರೆ, ಒಂದು ಹೆಣ್ಣು ಮಗು ಎಂದು ಕಾವ್ಯಾಳ ಜಾಗದಲ್ಲಿ ನಿಂತು ನೋಡಿದರೆ ತಾವು ಮಾಡಿರುವುದು ತಪ್ಪು ಎಂಬುದಂತೂ ಅರಿವಾಗದೇ ಇರದು. ಈ ಬಗ್ಗೆ ವಿಡಿಯೋ ವೈರಲ್ ಆಗುತ್ತಿದ್ದು, ಪರ ವಿರೋಧ ಚರ್ಚೆಗಳು ಕೂಡ ಆರಂಭವಾಗಿವೆ.
ಅತಿರೇಕಕ್ಕೆ ಹೋದ ಅಭಿಮಾನ
ಯಾವುದೇ ನಟ ಅಥವಾ ಸ್ಪರ್ಧಿಯನ್ನು ಇಷ್ಟಪಡುವುದು ತಪ್ಪಲ್ಲ, ಆದರೆ ಅವರ ವೈಯಕ್ತಿಕ ಜೀವನದ ನಿರ್ಧಾರಗಳನ್ನು ಅಭಿಮಾನಿಗಳೇ ತೆಗೆದುಕೊಳ್ಳಲು ಮುಂದಾಗುವುದು ಅಕ್ಷಮ್ಯ. ಗಿಲ್ಲಿ ನಟ ಹಾಗೂ ಕಾವ್ಯಾ ನಡುವೆ ನಿಜವಾಗಿಯೂ ಪ್ರೀತಿ ಇದೆಯೇ ಅಥವಾ ಇಲ್ಲವೇ ಎಂಬುದು ಅವರಿಗೆ ಬಿಟ್ಟ ವಿಚಾರ. ಆದರೆ ಅಭಿಮಾನಿಗಳು ಕಟೌಟ್‌ಗಳಿಗೆ ಮದುವೆ ಮಾಡಿಸಿ ಹನಿಮೂನ್ ಬಗ್ಗೆ ಮಾತನಾಡುವುದು ಸಮಾಜದ ಕೆಟ್ಟ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

