- Home
- Entertainment
- TV Talk
- ಮನೆಗೆ ಮಹಾಲಕ್ಷ್ಮಿಯ ಆಗಮನ! ಹೆಣ್ಣು ಮಗುವಿಗೆ ತಾಯಿಯಾದ ‘ದೃಷ್ಟಿಬೊಟ್ಟು’ ಖ್ಯಾತಿಯ ಗೌತಮಿ ಉದಯ್
ಮನೆಗೆ ಮಹಾಲಕ್ಷ್ಮಿಯ ಆಗಮನ! ಹೆಣ್ಣು ಮಗುವಿಗೆ ತಾಯಿಯಾದ ‘ದೃಷ್ಟಿಬೊಟ್ಟು’ ಖ್ಯಾತಿಯ ಗೌತಮಿ ಉದಯ್
Gauthami Uday: ಕಲರ್ಸ್ ಕನ್ನಡದ ‘ದೃಷ್ಟಿಬೊಟ್ಟು’ ಧಾರಾವಾಹಿಯಲ್ಲಿ ಇಂಪನಾ ಎಂಬ ನೆಗೆಟಿವ್ ಶೇಡ್ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ಗೌತಮಿ ಉದಯ್ ಇದೀಗ ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ.

ದೃಷ್ಟಿ ಬೊಟ್ಟು ನಟಿ ಗೌತಮಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ದೃಷ್ಟಿಬೊಟ್ಟು’ವಿನಲ್ಲಿ ನಾಯಕನನ್ನು ಮದುವೆಯಾಗಲು ಬರುವ ಇಂಪನಾ ಎನ್ನುವ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದ ನಟಿ ಗೌತಮಿ ಉದಯ್ ಇದೀಗ ಚೊಚ್ಚಲ ಮಗುವಿಗೆ ತಾಯಿಯಾದ ಸಂಭ್ರಮದಲ್ಲಿದ್ದಾರೆ.
ಹೆಣ್ಣು ಮಗುವಿಗೆ ತಾಯಿಯಾದ ನಟಿ
ಇತ್ತೀಚೆಗಷ್ಟೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದ ನಟಿ ಗೌತಮಿ, ಇದೀಗ ಹೆಣ್ಣು ಮಗುವಿಗೆ ತಾಯಿಯಾಗಿದ್ದು, ಈ ಸಂಭ್ರಮದ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ‘A little girl , a big blessing . God knew our hearts needed her’ ಎಂದು ಬರೆದುಕೊಂಡಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ವಿವಾಹ
ಗೌತಮಿಯವರಿಗೆ ‘ದೃಷ್ಟಿಬೊಟ್ಟು’ ಧಾರಾವಾಹಿಯ ಇಂಪನಾ ಪಾತ್ರ ಜನಪ್ರಿಯತೆ ತಂದುಕೊಟ್ಟಿತ್ತು. ಈ ಧಾರಾವಾಹಿ ಮುಕ್ತಾಯದ ನಂತರ ಉದಯ್ ಶಂಕರ್ ರಾಜು ಎನ್ನುವವರ ಜೊತೆ ಗೌತಮಿ ಜಯರಾಮ್ ಕಳೆದ ಡಿಸೆಂಬರ್ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಗೌತಮಿ ಉದಯ್ ಎಂದು ಹೆಸರು ಬದಲಾಯಿಸಿಕೊಂಡರು.
ಸ್ವಂತ ಕಂಪನಿ ಕಟ್ಟಿದ್ದ ಗೌತಮಿ
ಬೆಂಗಳೂರಿನವರಾದ ಗೌತಮಿ ಉದಯ್ ಅವರು ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದು, ನಟನೆ ಜೊತೆಗೆ ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಾರೆ. ಗೌತಮಿ ಅವರದ್ದೇ ಆದ ಸ್ವಂತ ಕಂಪೆನಿಯಾದ 'ಡಿಸೈನ್ ಡಿಕ್ಷನ್' ಸ್ಥಾಪನೆ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಮನೆ, ಆಫೀಸ್ ಇಂಟಿರಿಯರ್ ಡಿಸೈನ್ ಮಾಡಿದ್ದಾರೆ. “
ಗೌತಮಿ ನಟಿಸಿದ ಧಾರಾವಾಹಿಗಳು
ಗೌತಮಿ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಪಂಚರಂಗಿ ಪಾಂಪಾಂ' ಹಾಸ್ಯ ಧಾರಾವಾಹಿಯಿಂದ ನಟನೆ ಆರಂಭಿಸಿದ ಗೌತಮಿ, ಬಳಿಕ ‘ಮಹಾಕಾಳಿ’, ‘ಅಕ್ಕ’, ‘ನಾಗಿಣಿ-1’, ‘ದೃಷ್ಟಿಬೊಟ್ಟು’ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಮದುವೆ ಬಳಿಕ ನಟನೆಯಿಂದ ದೂರ ಇದ್ದರು. ಇದೀಗ ತಾಯಿಯಾದ ಸಂಭ್ರಮದಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

