ಅಮೃತಧಾರೆ ಧಾರಾವಾಹಿಯಲ್ಲಿ ಆಸ್ತಿ ಕಬಳಿಸಲು ಸಂಚು ರೂಪಿಸಿರುವ ಶಕುಂತಲಾ ಮತ್ತು ಜೈದೇವ್‌ನನ್ನು ಹಿಡಿಯಲು ಗೌತಮ್ ಮತ್ತು ಭೂಮಿಕಾ ಹೊಸ ಪ್ಲ್ಯಾನ್ ಮಾಡಿದ್ದಾರೆ. ಭೂಮಿಕಾಳ ಪವರ್ ಆಫ್ ಅಟಾರ್ನಿ ರದ್ದು ಮಾಡುವ ಬಗ್ಗೆ ಗೌತಮ್ ಫೇಕ್ ಕಾಲ್ ಮಾಡಿ ಶಕುಂತಲಾಳನ್ನು ನಂಬಿಸಿದ್ದಾನೆ. ಈ ರಹಸ್ಯ ಬಲೆಯಲ್ಲಿ ಸಿಲುಕಿರುವ ಶಕುಂತಲಾ ಮತ್ತು ಜೈದೇವ್ ಮುಖವಾಡ ಶೀಘ್ರದಲ್ಲೇ ಕಳಚಲಿದೆ.

ಅಮೃತಧಾರೆಯಲ್ಲಿ (Amruthadhaare Serial) ಸೀರಿಯಲ್​ ಇನ್ನೇನು ಮುಗಿಯುವ ಹಂತದಲ್ಲಿದೆ. ಈ ಸಂದರ್ಭದಲ್ಲಿ ಗೌತಮ್​ ಮತ್ತು ಭೂಮಿಕಾ ಸೇರಿ ಹೊಸ ಪ್ಲ್ಯಾನ್​ ಮಾಡಿದ್ದಾರೆ. ಎಲ್ಲಾ ಆಸ್ತಿಗಳನ್ನೂ ಕಬಳಿಸಲು ಶಕುಂತಲಾ ಮತ್ತು ಜೈದೇವ್​ ಸೇರಿ ಪ್ಲ್ಯಾನ್​ ಮಾಡ್ತಿರೋದು ತಿಳಿದಿದೆ. ಅದೇ ಇನ್ನೊಂದೆಡೆ ಜೈದೇವ್​ನನ್ನು ಗೌತಮ್​ ಹೊರಕ್ಕೆ ಹಾಕಿದ್ದರಿಂದ ಅವನು ಯಾರ ಕಣ್ಣಿಗೂ ಬೀಳದೇ ಕೂತಿದ್ದಾನೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದುಕೊಂಡ ಗೌತಮ್​ ಒಂದು ಸ್ಕೆಚ್​ ಹಾಕಿದ್ದಾನೆ.

ಎಲ್ಲವನ್ನೂ ಆಸ್ತಿಗಾಗಿ ಮಾಡ್ತಿರೋ ಹಿನ್ನೆಲೆಯಲ್ಲಿ, ಭೂಮಿಕಾ ಹೆಸರಿಗೆ ಮಾಡಿರುವ ಆಸ್ತಿಯನ್ನು ಆಕೆಯ ಹೆಸರಿನಿಂದ ತೆಗೆಯುವ ಸಂಬಂಧ ಒಂದು ಫೇಕ್​ ಕಾಲ್​ ಮಾಡಿದ್ದಾನೆ. ಶಕುಂತಲಾಗೆ ಕೇಳಿಸುವಂತೆ, ಇನ್ನುಮುಂದೆ ಆಸ್ತಿಯ ಪವರ್ ಅಫ್​ ಅಟಾರ್ನಿ ಭೂಮಿಕಾ ಹೆಸರಿಗೆ ಬೇಡ. ಅದನ್ನು ತೆಗೆಯಬೇಕು ಎಂದಿದ್ದಾನೆ ಗೌತಮ್​. ಅಷ್ಟಕ್ಕೂ ಭೂಮಿಕಾಳಿಂದ ಪವರ್​ ಕಿತ್ತುಕೊಳ್ಳುವ ಯೋಚನೆ ಇದಲ್ಲ. ಬದಲಿಗೆ ಅಡಗಿ ಹೊಸ ಸ್ಕೆಚ್​ ಹಾಕ್ತಿರೋ ಜೈದೇವನನ್ನು ಬಿಲದಿಂದ ಹೊರಕ್ಕೆ ಬರುವಂತೆ ಮಾಡುವುದು ಹಾಗೂ ಶಕುಂತಲಾಳ ಮುಖವಾಡ ಕಳಚುವುದು ಈ ಪ್ಲ್ಯಾನ್​.

ಗೌತಮ್​ ಪ್ಲ್ಯಾನ್​​ ಸಕ್ಸಸ್​

ಅದೀಗ ಸಕ್ಸಸ್​ ಆಗಿದೆ. ಗೌತಮ್​ ಮಾತನ್ನು ಕೇಳಿಸಿಕೊಂಡಿರುವ ಶಕುಂತಲಾಗೆ ತಲೆ ತಿರುಗಿದಂತಾಗಿದೆ. ಅಸಲಿಗೆ ನಕಲಿ ಭೂಮಿಕಾಳನ್ನು ಕರೆದು ತಂದಿದ್ದೇ ಆಸ್ತಿ ಲಪಟಾಯಿಸಲು. ಆಕೆಯ ಕೈಯಿಂದ ಭೂಮಿಕಾಳ ರೀತಿಯಲ್ಲಿ ಸಹಿ ಹಾಕಿಸಿಕೊಂಡು ಎಲ್ಲಾ ಆಸ್ತಿ ಲಪಟಾಯಿಸಿ ಪಲಾಯನ ಮಾಡುವ ಪ್ಲ್ಯಾನ್​ ಆಗಿತ್ತು. ಇದೀಗ ಭೂಮಿಕಾ ಹೆಸರಿನಲ್ಲಿ ಆಸ್ತಿಯೇ ಇಲ್ಲದಿದ್ದರೆ ಕಥೆ ಏನು ಎಂದು ಕೂಡಲೇ ಜೈದೇವ್​ಗೆ ಕಾಲ್​ಮಾಡಿದ್ದಾಳೆ.

ಶಕು-ಜೈ ಕಥೆ ಕಥಮ್​

ಅಲ್ಲಿಗೆ ಗೌತಮ್​ ಪ್ಲ್ಯಾನ್​ ವರ್ಕ್​ಔಟ್​ ಆಗಿದೆ. ಗೌತಮ್​ ಈ ರೀತಿ ಆಸ್ತಿ ಹಕ್ಕನ್ನು ಭೂಮಿಕಾಳಿಂದ ವಾಪಸ್​ ತೆಗೆಯಲು ಗೌತಮ್​ ಪ್ಲ್ಯಾನ್​ ಮಾಡ್ತಾ ಇದ್ದಾನೆ. ಕೂಡಲೇ ಬಾ. ಅವನು ಈ ರೀತಿ ಮಾಡುವುದರ ಒಳಗೆ ಎಲ್ಲಾ ಆಸ್ತಿ ಲಪಟಾಯಿಸಬೇಕು ಎನ್ನುತ್ತಾಳೆ. ಮುಂದೆ ಗೌತಮ್​ ಇಬ್ಬರನ್ನೂ ಹೊರಕ್ಕೆ ಹಾಕಲು ಮುಹೂರ್ತ ಫಿಕ್ಸ್​ ಮಾಡಿದ್ದಾನೆ. ಗೌತಮ್​ ಬಲೆಯಲ್ಲಿ ಶಕುಂತಲಾ ಮತ್ತು ಜೈದೇವ್​ ಬಿದ್ದಾಗಿದೆ. ಇನ್ನು ಅವರನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ (ಖುದ್ದು ನಿರ್ದೇಶಕರಿಂದಲೂ!!)