ದೀಪಿಕಾ ದಾಸ್ ಹೊಸ ಲುಕ್ ನೋಡಿ ರೌಡಿ ಬೇಬಿ ಎಂದ ಪಡ್ಡೆ ಹುಡುಗ್ರು
ತಮ್ಮ ಬೋಲ್ಡ್ ನೆಸ್ ನಿಂದಲೇ ಗುರುತಿಸಿಕೊಳ್ಳುವ ಕಿರುತೆರೆಯ ಬೆಡಗಿ ದೀಪಿಕಾ ದಾಸ್, ಇದೀಗ ಮಾಡರ್ನ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಮಿಂಚಿ, ಬಿಗ್ ಬಾಸ್ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದ ಕನ್ನಡ ಕಿರುತೆರೆ ವೀಕ್ಷಕರ ಅಷ್ಟೇ ಯಾಕೆ ಯುವಕರ ಫೇವರಿಟ್ ನಟಿ ಅಂದ್ರೆ ದೀಪಿಕಾ ದಾಸ್ (Deepika Das).
ದೀಪಿಕಾ ದಾಸ್ ತಮ್ಮ ಸ್ಟೈಲ್ ಗೆ ಸಖತ್ ಫೇಮಸ್. ಬಿಗ್ ಬಾಸ್ (Bigg Boss Season 11) ನಲ್ಲಿ ಇದ್ದಾಗ ಹುಡುಗಿಯರೇ ಇವರ ಸ್ಟೈಲ್, ಬೋಲ್ಡ್ ನೆಸ್ ನೋಡಿ ಫಿದಾ ಆಗುತ್ತಿದ್ದರು.
ಸೋಶಿಯಲ್ ಮೀಡೀಯಾದಲ್ಲಿ ಆಕ್ಟಿವ್ ಆಗಿರುವ ದೀಪಿಕಾ ದಾಸ್, ಒಮ್ಮೆ ಮಾಡರ್ನ್ ಲುಕ್, ಮತ್ತೊಮ್ಮೆ ಟ್ರೆಡಿಶನಲ್ ಲುಕ್ ನಲ್ಲಿ ಮಿಂಚುತ್ತಿರುತ್ತಾರೆ. ಎಲ್ಲಾ ಲುಕ್ ನಲ್ಲೂ ಸೂಪರ್ ಆಗಿ ಕಾಣಿಸ್ತಾರೆ ದೀಪಿಕಾ ದಾಸ್.
ಇದೀಗ ಹೊಸದಾಗಿ ಫೋಟೋ ಶೂಟ್ (photoshoot) ಮಾಡಿಸಿರುವ ದೀಪಿಕಾ ದಾಸ್ ಡೆನಿಮ್ ಡ್ರೆಸ್ ಧರಿಸಿ, ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರೆ.
ಡೆನಿಮ್ ಕ್ರಾಪ್ ಟಾಪ್ ಡ್ರೆಸ್ ಧರಿಸಿರುವ ದೀಪಿಕಾ ದಾಸ್ Pause ….. ,a while there’s a big gap between To jump ಎಂದು ಕ್ಯಾಪ್ಶನ್ ಕೊಟ್ಟು ವಿವಿಧ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ.
ದೀಪಿಕಾ ದಾಸ್ ಇಂಥಹ ಲುಕ್ ನೋಡಿನೇ ಜನ ಇವರಿಗೆ ಲೇಡಿ ಬಾಸ್ ಅಂತಿದ್ದರು, ಈವಾಗ ಈ ಬೋಲ್ಡ್ ಲುಕ್ ನೋಡಿ ಫೈರ್ ಕಾಮೆಂಟ್ ಮಾಡ್ತಿದ್ದಾರೆ ಫ್ಯಾನ್ಸ್.
ಫ್ಯಾನ್ಸ್ ಕಾಮೆಂಟ್ ಮಾಡಿ, ಡಾಲ್, ಕ್ವೀನ್, ರೌಡಿ ಬೇಬಿ (Rowdy baby), ನನ್ ಮುದ್ದು ದೇವತೆ, ನಿಮ್ಮ ಫಿಟ್ನೆಸ್ ಚೆನ್ನಾಗಿದೆ, ಎಂದು ನೂರಾರು ಜನರು ಕಾಮೆಂಟ್ ಮಾಡಿದ್ದಾರೆ.
ದೀಪಿಕಾ ದಾಸ್ ಫೋಟೊ ಅಪ್ ಲೋಡ್ ಆದ ಸ್ವಲ್ಪ ಹೊತ್ತಲ್ಲೇ 35ಸಾವಿರಕ್ಕೂ ಅಧಿಕ ಜನರು ಫೋಟೊ ಲೈಕ್ ಮಾಡಿದ್ದಾರೆ. ಸದ್ಯಕ್ಕಂತೂ ನಟಿಯ ಫೋಟೊ ವೈರಲ್ ಆಗ್ತಿದೆ.