ಅಪ್ಪನ ಹೆಗಲ್ಮೇಲೆ ಕುಳಿತ ಬಿಗ್‌ಬಾಸ್‌ನ ಸ್ಟೈಲಿಶ್ ಸ್ಪರ್ಧಿಯ ಬಾಲ್ಯದ ಫೋಟೋ ವೈರಲ್
ಬಿಗ್‌ಬಾಸ್ ಸ್ಪರ್ಧಿಯ ಬಾಲ್ಯದ ಫೋಟೋವೊಂದು ವೈರಲ್ ಆಗಿದೆ. ಈ ಫೋಟೋದಲ್ಲಿ, ಅವರು ತಮ್ಮ ತಂದೆಯ ಹೆಗಲ ಮೇಲೆ ಕುಳಿತಿರುವುದು ಕಂಡುಬಂದಿದೆ. ಈ ಲೇಖನವು ಅವರ ಬಿಗ್‌ಬಾಸ್ ಪಯಣ ಮತ್ತು ವೈರಲ್ ಆದ ಫೋಟೋದ ಕುರಿತು ವಿವರಿಸುತ್ತದೆ.

ಬಿಗ್‌ಬಾಸ್ ಸ್ಪರ್ಧಿ
ಬಿಗ್‌ಬಾಸ್ ಸ್ಪರ್ಧಿಯಾಗಿ ತಮ್ಮ ಆಟದ ಮೂಲಕ ಇಡೀ ಕರುನಾಡಿನ ಗಮನ ಸೆಳೆದಿದ್ದ, ಕಿರುತೆರೆಯ ನಟಿ ಅವರ ಬಾಲ್ಯದ ಫೋಟೋ ವೈರಲ್ ಆಗುತ್ತಿದೆ. ಮಕ್ಕಳ ದಿನಾಚರಣೆಯಂದು ತಮ್ಮ ಬಾಲ್ಯದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಸೀಸನ್ 7ರಲ್ಲಿ ಸ್ಪರ್ಧಿ
ಈ ಫೋಟೋದಲ್ಲಿರುವ ನಟಿ ಸೀಸನ್ 7ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ನಾಗಿಣಿ ಸೀರಿಯಲ್‌ನಲ್ಲಿಯೂ ಮುಖ್ಯ ಪಾತ್ರಧಾರಿಯಾಗಿ ನಟಿಸಿದ್ದರು. ಇದೀಗ ಕಿರುತೆರೆಯಿಂದ ಕೊಂಚ ದೂರವಾಗಿದ್ರೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಸ್ಟಾರ್ ನಟನ ತಾಯಿ ಮತ್ತು ಸಂಬಂಧಿಯೂ ಆಗಿರುವ ನಿರ್ಮಾಪಕಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ದೀಪಿಕಾ ದಾಸ್
ಅಪ್ಪನ ಹೆಗಲ್ಮೇಲೆ ಕುಳಿತ ನಟಿ ಹೆಸರು ದೀಪಿಕಾ ದಾಸ್. ಮಕ್ಕಳ ದಿನಾಚರಣೆ ಪ್ರಯುಕ್ತ ತಂದೆಯ ಹೆಗಲ್ಮೇಲೆ ಕುಳಿತ ಪೇಂಟಿಂಗ್ ಚಿತ್ರ ಮತ್ತು ಬರ್ತ್ ಡೇ ಆಚರಿಸುತ್ತಿರುವ ಸುಂದರವಾದ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಎರಡು ಫೋಟೋಗಳಿಗೆ ಸುಂದರ ಕಮೆಂಟ್‌ಗಳ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಡ್ಯಾನ್ಸರ್
ದೀಪಿಕಾ ದಾಸ್ ಕಲಾವಿದೆ ಜೊತೆ ಒಳ್ಳೆಯ ಡ್ಯಾನ್ಸರ್ ಸಹ ಆಗಿದ್ದು, ರಿಯಾಲಿಟಿ ಶೋಗಳಲ್ಲಿ ಇದನ್ನು ಸಾಬೀತು ಮಾಡಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 7ರ ಸ್ಪರ್ಧಿಯಾಗಿದ್ದರು. ಸೀಸನ್ 7ರ ಸಖತ್ ಸ್ಟೈಲಿಶ್ ಸ್ಪರ್ಧಿಯಂತಾನೇ ಗುರುತಿಸಿಕೊಳ್ಳೋದರ ಜೊತೆ ಟಾಸ್ಕ್‌ಗಳಲ್ಲಿಯೂ ಪುರುಷ ಸ್ಪರ್ಧಿಗಳಿಗೆ ಟಕ್ಕರ್ ಕೊಡುತ್ತಿದ್ದರು.
ಇದನ್ನೂ ಓದಿ: Bigg Boss ಗೆ ಯಾರೇ ಬಂದ್ರೂ ಈ ಇಬ್ರು ಬ್ಯೂಟಿನಾ ಬೀಟ್ ಮಾಡೋಕೆ ಸಾಧ್ಯ ಇಲ್ಲ ಅಂತೆ..!
ಮೂರನೇ ರನ್ನರ್ ಅಪ್
ಬಿಗ್‌ಬಾಸ್ ಕನ್ನಡ ಸೀಸನ್ 7ರಲ್ಲಿ ದೀಪಿಕಾ ದಾಸ್, ಮೂರನೇ ರನ್ನರ್ ಅಪ್ ಆಗಿದ್ದರು. ಕುರಿ ಪ್ರತಾಪ್ ಮೊದಲ ಮತ್ತು ವಾಸುಕಿ ವೈಭರ್ ಎರಡನೇ ರನ್ನರ್ ಅಪ್ ಆಗಿದ್ದರು. ನಟ ಶೈನ್ ಶೆಟ್ಟಿ ಸೀಸನ್ 7ರ ಬಿಗ್‌ಬಾಸ್ ಟ್ರೋಫಿಗೆ ಮುತ್ತಿಟ್ಟಿದ್ದರು.
ಇದನ್ನೂ ಓದಿ: ಬಿಗ್‌ಬಾಸ್ 7ರಲ್ಲಿ ದೀಪಿಕಾ ದಾಸ್ ತುಟಿಗೆ ಕಿಸ್ ಕೊಟ್ಟಿದ್ಯಾರು? ಅಚ್ಚರಿಯ ದೃಶ್ಯ ವೈರಲ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

