- Home
- Entertainment
- TV Talk
- 'ಸತ್ಯವನ್ನು ತಲೆಮೇಲೆ ಹೊಡೆದಂತೆ ಹೇಳ್ತೀರಿ, ಯಾರೂ ಎಲ್ಲೂ ಹೋಗಿಲ್ಲ': ಪುಷ್ಪರಿಗೆ ದೀಪಿಕಾ ದಾಸ್ ಕೌಂಟರ್
'ಸತ್ಯವನ್ನು ತಲೆಮೇಲೆ ಹೊಡೆದಂತೆ ಹೇಳ್ತೀರಿ, ಯಾರೂ ಎಲ್ಲೂ ಹೋಗಿಲ್ಲ': ಪುಷ್ಪರಿಗೆ ದೀಪಿಕಾ ದಾಸ್ ಕೌಂಟರ್
ದೊಡ್ಡಮ್ಮ ಹಾಗೂ ಮಗಳ ನಡುವಿನ ಮನಸ್ತಾಪ ಜಾಸ್ತಿ ಆಗಿದೆ. ಹೌದು, ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ ಹಾಗೂ ನಟಿ ದೀಪಿಕಾ ದಾಸ್ ನಡುವಿನ ಮನಸ್ತಾಪ ಈಗ ಬೀದಿಗೆ ಬಂದಿದೆ.

ಕೊತ್ತಲವಾಡಿ ಸಿನಿಮಾ ಪ್ರಚಾರದ ವೇಳೆ ಪುಷ್ಪ ಅವರು, “ದೀಪಿಕಾ ದಾಸ್‌ಗೆ ನನ್ನ ಕಂಡರೆ ಭಯ. ಅಷ್ಟು ಮಾತಾಡಲ್ಲ, ಫೋನ್ ಮಾಡಿದ್ರೂ ಜಾಸ್ತಿ ಹೊತ್ತು ಮಾತಾಡಲ್ಲ” ಎಂದು ಒಮ್ಮೆ ಹೇಳಿದ್ದರು.
ಇತ್ತೀಚೆಗೆ ಇನ್ನೊಂದು ಸಂದರ್ಶನದಲ್ಲಿ “ದೀಪಿಕಾ ದಾಸ್ ಯಾವ ದೊಡ್ಡ ಹೀರೋಯಿನ್ ಅಂತ ಅವಳ ಜೊತೆ ಸಿನಿಮಾ ಮಾಡಬೇಕು? ಅವಳು ಯಾವ ಸಿನಿಮಾ ಮಾಡಿದ್ದಾಳೆ? ನಮಗೂ, ಅವಳ ಕುಟುಂಬಕ್ಕೆ ಆಗಿ ಬರೋದಿಲ್ಲ” ಎಂದು ಹೇಳಿದ್ದರು.
ದೊಡ್ಡಮ್ಮ ಹೇಳಿದ ಮಾತುಗಳು ದೀಪಿಕಾ ದಾಸ್‌ಗೆ ನಾಟಿವೆ. ಹೀಗಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ “ಹೊಸ ಕಲಾವಿದರನ್ನು ಬೆಳೆಸುವ ಜನರು ಕಲಾವಿದರಿಗೆ ಮೊದಲು ಬೆಲೆಯನ್ನು ಕೊಡೋದನ್ನು ಕಲಿತಿರಬೇಕು. ಇಲ್ಲಿಯವರೆಗೆ ನಾನು ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ, ಮುಂದೆ ಕೂಡ ಬರೋದಿಲ್ಲ. ಕೆಲವರಿಗೆ ಬೆಲೆಯನ್ನು ಕೊಡ್ತೀವಿ ಎಂದಮಾತ್ರಕ್ಕೆ, ಯಾರನ್ನು ಕಂಡು ಯಾರಿಗೂ ಭಯ ಇರೋದಿಲ್ಲ. ಅದು ಅಮ್ಮ ಆದರೂ ಸರಿ, ದೊಡ್ಡಮ್ಮ ಅಥವಾ ಪುಷ್ಪಮ್ಮ ಆದರೂ ಸರಿ. ನಮ್ಮ ಚಿತ್ರರಂಗದ ಸ್ಟಾರ್ ಅವರಿಗೆ ಗೌರವ ಕೊಡ್ತೀನಿ. ನಾನು ದೊಡ್ಡ ನಟಿ ಅಲ್ಲ, ಏನೂ ಸಾಧನೆ ಮಾಡಿಲ್ಲ, ಆದರೆ ನನ್ನ ಬಗ್ಗೆ ಹೀನಾಯವಾಗಿ ಮಾತನಾಡೋ ಹಕ್ಕು ಯಾರಿಗೂ ಇಲ್ಲ” ಎಂದು ಅವರು ಹೇಳಿದ್ದಾರೆ.
“ಸತ್ಯವನ್ನು ತಲೆಮೇಲೆ ಹೊಡೆದ ಹಾಗೆ ಹೇಳುವಂತ ಬುದ್ಧಿ, ಯಾರೂ ಎಲ್ಲಿಯೂ ಹೋಗಿಲ್ಲ. ಯಾರೂ ನಮ್ಮ ಹತ್ರ ಬರುವ ಅವಶ್ಯಕತೆಯೂ ಇಲ್ಲ. ಅನಾವಶ್ಯಕವಾಗಿ ಇಲ್ಲದನ್ನು ಮಾತಾಡಿ, ನನ್ನ ಹಾಗೂ ನನ್ನ ಕುಟುಂಬವನ್ನು ತರಬೇಡಿ. ದೊಡ್ಡವರ ಅತಿರೇಕದ ಸಣ್ಣತನ ಇನ್ನಾದರೂ ಬೇಡ. ಇನ್ನು ಇದರ ಮೇಲೆ ನನಗೆ ಮಾತಾಡೋಕೆ ಇಷ್ಟ ಇಲ್ಲ” ಎಂದು ದೀಪಿಕಾ ದಾಸ್ ಹೇಳಿದ್ದಾರೆ.
ಅಂದಹಾಗೆ ಯಶ್ ತಾಯಿಯೂ ಆಗಿರುವ ಪುಷ್ಪ ಅರುಣ್ ಕುಮಾರ್ ಹಾಗೂ ದೀಪಿಕಾ ದಾಸ್ ತಾಯಿ ಸ್ವಂತ ಅಕ್ಕ-ತಂಗಿ. ಆದರೆ ಈ ಕುಟುಂಬದ ಮಧ್ಯೆ ಬಾಂಧವ್ಯ ಅಷ್ಟು ಚೆನ್ನಾಗಿಲ್ಲ.