ಮತ್ತೆ ಆರಂಭವಾಗ್ತಿದೆ ಜೋಡಿ ನಂ 1 ಸೀಸನ್ 2… ಯಾವ ಜೋಡಿ ಇದ್ದಾರೆ ನೋಡಿ
ಝೀ ಕನ್ನಡದಲ್ಲಿ ಜೋಡಿ ನಂ 1 ಮೊದಲ ಸೀಸನ್ ಯಶಸ್ವಿಯಾದ ಬಳಿಕ, ಇದೀಗ ಸೀಸನ್ 2 ಆರಂಭವಾಗಲಿದೆ. ಯಾವ್ಯಾವ ಜೋಡಿ ಈ ರಿಯಾಲಿಟಿ ಶೋದಲ್ಲಿ ಭಾಗವಹಿಸಲಿದ್ದಾರೆ, ಅನ್ನೋದನ್ನು ತಿಳಿಯಲು ಇದನ್ನ ಓದಿ…

ಸುನೇತ್ರಾ ಪಂಡಿತ್ - ರಮೇಶ್ ಪಂಡಿತ್
ಕನ್ನಡ ಕಿರುತೆರೆಯ ಜನಪ್ರಿಯ ಜೋಡಿ ಇವರು ಎಂದರೆ ತಪ್ಪಾಗಲ್ಲ. ರಮೇಶ್ ಪಂಡಿತ್ ಸದ್ಯ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಇನ್ನು ಸುನೇತ್ರಾ ಅವರು ನಟಿಯೂ ಹೌದು, ಕಂಠದಾನ (dubbing artist) ಕಲಾವಿದೆಯೂ ಹೌದು. ಇಬ್ಬರು ಜೋಡಿಯಾಗಿ ಮೊದಲ ಬಾರಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಲಾವಣ್ಯ - ಶಶಿ ಹೆಗ್ಡೆ
ಶ್ರೀರಸ್ತು ಶುಭಮಸ್ತು ನಟಿ ಲಾವಣ್ಯ ಮತ್ತು ಅಮೃತಧಾರೆ ನಟ ಶಶಿ ಹೆಗ್ಡೆ (Shashi Hegde) ರಿಯಲ್ ಲೈಫಲ್ಲಿ ಗಂಡಹೆಂಡತಿ. ಇಬ್ಬರೂ ರಾಜಾರಾಣಿ ಸೀರಿಯಲ್ ನಲ್ಲಿ ಒಟ್ಟಿಗೆ ನಟಿಸಿದ್ದು, ಅದೇ ಸೆಟ್ ನಲ್ಲಿ ಲವ್ವಲ್ಲಿ ಬಿದ್ದಿದ್ದಾರೆ. ನಂತರ ಮನೆಯವರ ಒಪ್ಪಿಗೆ ಪಡೆದು ಈ ಜೋಡಿ ಮದುವೆಯಾಗಿತ್ತು. ಇದೀಗ ಜೋಡಿ ನಂ 1 ಆಗಲು ಬಂದಿದ್ದಾರೆ.
ಮಂಜುನಾಥ್ -ಅನುಷಾ
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka Dance) ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಜನಪ್ರಿಯತೆ ಪಡೆದಿರುವ ಮಂಜುನಾಥ್, ಇದೀಗ ತಮ್ಮ ಪತ್ನಿ ಅನುಷಾ ಜೊತೆ ಮತ್ತೆ ಜೋಡಿ ನಂ 1 ರ ಮೂಲಕ ಮೋಡಿ ಮಾಡಲು ಸಜ್ಜಾಗಿದ್ದಾರೆ.
ನೇತ್ರಾವತಿ -ಸದಾನಂದ
ಕಾಮಿಡಿ ಕಿಲಾಡಿಗಳು (Comedy Kidagigalu) ಮೂಲಕ ಜನರಿಗೆ ಮನರಂಜನೆ ನೀಡುವಲ್ಲಿ ಗೆದ್ದಿದ್ದ ಸದಾನಂದ್ , ಪತ್ನಿ ನೇತ್ರಾವತಿ ಜೊತೆ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲೂ ಕಾಣಿಸಿಕೊಂಡಿದ್ದರು. ಇದೀಗ ಜೋಡಿ ನಂ 1 ರಲ್ಲಿ ಮೋಡಿ ಮಾಡಲು ಬರುತ್ತಿದ್ದಾರೆ.
ಸಂಜು ಬಸಯ್ಯ -ಪಲ್ಲವಿ
ತಮ್ಮ ಹೈಟ್ ಮೂಲಕವೇ ಸುದ್ದಿಯಾಗಿದ್ದ ಕಾಮಿಡಿ ಕಿಲಾಡಿಗಳು ವೇಡಿಕೆಯ ಸಂಜು ಬಸಯ್ಯ, (Sanju Basayya) ಬಳಿಕ ಪಲ್ಲವಿಯವರನ್ನು ಲವ್ ಮಾಡಿ ಮದುವೆಯಾಗುವ ಮೂಲಕ ಭಾರಿ ಸುದ್ದಿಯಾಗಿದ್ದರು. ಇತ್ತೀಚೆಗಷ್ಟೇ ಈ ಜೋಡಿ ಮದುವೆಯಾಗಿದ್ದು, ಅದ್ಧೂರಿ ಆರತಕ್ಷತೆ ನೀಡಿದ್ದರು. ಇವರು ನಂ 1 ಜೋಡಿಯಾಗುವರೇ ಕಾದು ನೋಡಬೇಕು.
ಆನಂದ್ - ಚೈತ್ರಾ
ಸಿಲ್ಲಿಲಲ್ಲಿ ಸೀರಿಯಲ್ ನಲ್ಲಿ ಮಿಂಚಿದ ನಟ ಆನಂದ, ಸದ್ಯ ಅಮೃತಧಾರೆ ಸೀರಿಯಲ್ ನಲ್ಲಿ ಗೌತಮ್ ಸ್ನೇಹಿತನಾಗಿ ಅತ್ಯದ್ಭುತವಾಗಿ ಅಭಿನಯಿಸುತ್ತಿದ್ದಾರೆ. ಇವರು ತಮ್ಮ ಪತ್ನಿ ಚೈತ್ರಾ ಜೊತೆ ಜೋಡಿ ನಂ 1 ಸೀಸನ್ 2ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿದಾನಂದ - ಕವಿತಾ
ಪಾಪ ಪಾಂಡು ಸೀರಿಯಲ್ ಮೂಲಕ ನಮ್ಮನ್ನು ರಂಜಿಸಿದ್ದ ನಟ ಚಿದಾನಂದ್ , ನಂತರ ಕೆಲವು ಸಿನಿಮಾಗಳಲ್ಲೂ ನಟಿಸಿದ್ದರು. ಇದೀಗ ಚಿದಾನಂದ ತಮ್ಮ ಪತ್ನಿ ಕವಿತಾ ಜೊತೆ ಜೋಡಿ ನಂ 1 (Jodi No 1) ಆಗಲು ಬರ್ತಿದ್ದಾರೆ.
ಮಾಲತಿ ಸರ್ ದೇಶಪಾಂಡೆ - ಯಶವಂತ್ ಸರ್ ದೇಶಪಾಂಡೆ
ಸತ್ಯ ಸೀರಿಯಲ್ ನ ಖಡಕ್ ಅತ್ತೆ ಮಾಲತಿ ಸರ್ ದೇಶಪಾಂಡೆ ಮತ್ತು ಸಿನಿಮಾ ನಟ ಯಶವಂತ ಸರ್ ದೇಶಪಾಂಡೆ ಯಾರಿಗೆ ತಾನೆ ಗೊತ್ತಿರದೇ ಇರಲು ಸಾಧ್ಯ? ಉತ್ತರ ಕರ್ನಾಟಕದ ಈ ಅಪ್ಪಟ ಪ್ರತಿಭೆಗಳು ಜೋಡಿಯಾಗಿ ಬರ್ತಿದ್ದಾರೆ.
ಗಣೇಶ್ ಕಾರಂತ್ - ವಿದ್ಯಾ
ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರಸಾರವಾಗಿದ್ದ ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಮಿಂಚಿದ ಗಣೇಶ್ ಕಾರಂತ್, ಹೆಚ್ಚು ಫೇಮಸ್ ಆಗಿದ್ದು, ಲಾಕ್ ಡೌನ್ ಸಮಯದಲ್ಲಿ ಮಾಡಿದ ಬಿಯರ್ಡ್ ಬಾಲಕ, ಕಾರಂತರ ವಿಡಿಯೋ ಮೂಲಕ. ಅದಾದ ಬಳಿಕ ಹೆಂಡತಿ ಶ್ರೀವಿದ್ಯಾ ಜೊತೆ ದಿನನಿತ್ಯದ ವಿಷಯದ ಮೇಲೆ ಮಾಡಿದ ಕಾಮಿಡಿ ವಿಡೀಯೋಗಳು ಭರ್ಜರಿ ವೈರಲ್ ಆಗಿದ್ದವು. ಈ ಜೋಡಿಗಳಿಗೆ ಫ್ಯಾನ್ ಫಾಲೋವಿಂಗ್ ಕೂಡ ಹೆಚ್ಚಿದೆ. ಇದೀಗ ಗಣೇಶ್ ಕಾರಂತ್ - ವಿದ್ಯಾ ಜೋಡಿ ನಂ 1 ನಲ್ಲಿ ಕಾಣಿಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.