- Home
- Entertainment
- TV Talk
- Ramachari Serial ಕ್ಲೈಮ್ಯಾಕ್ಸ್ ಎಪಿಸೋಡ್‌ನಲ್ಲಿ ಏನಾಗಲಿದೆ? ಕೊನೆ ದಿನದ ಶೂಟಿಂಗ್ ಫೋಟೋಗಳಿವು!
Ramachari Serial ಕ್ಲೈಮ್ಯಾಕ್ಸ್ ಎಪಿಸೋಡ್‌ನಲ್ಲಿ ಏನಾಗಲಿದೆ? ಕೊನೆ ದಿನದ ಶೂಟಿಂಗ್ ಫೋಟೋಗಳಿವು!
Ramachari Kannada Serial Today Episode: ಮೌನ ಗುಡ್ಡೇಮನೆ, ರಿತ್ವಿಕ್ ಕೃಪಾಕರ್ ನಟನೆಯ ರಾಮಾಚಾರಿ ಧಾರಾವಾಹಿ ಆರಂಭವಾಗಿ ನಾಲ್ಕು ವರ್ಷಗಳು ಕಳೆದಿವೆ. ಈಗ ಈ ಸೀರಿಯಲ್ ಅಂತ್ಯವಾಗುವ ಸಮಯ ಬಂದಿದೆ. ಹಾಗಾದರೆ ಕೊನೆಯಲ್ಲಿ ಏನಾಯ್ತು?

ಬದಲಾಗಿರುವ ಚಾರುಲತಾ
ರಾಮಾಚಾರಿ ಹಾಗೂ ಚಾರುಲತಾ ಅನಿರೀಕ್ಷಿತವಾಗಿ ಮದುವೆಯಾದರು. ಆ ಬಳಿಕ ರಾಮಾಚಾರಿ ಕೂಡ ಚಾರುಳನ್ನು ಲವ್ ಮಾಡಲು ಆರಂಭಿಸಿದನು. ಇಷ್ಟವರ್ಷಗಳಿಂದ ದುಡ್ಡಿನ ಮದದಲ್ಲಿ ಮೆರೆಯುತ್ತಿದ್ದ ಚಾರು ಸಂಪೂರ್ಣ ಬದಲಾದಳು, ನಾರಾಯಾಣಾಚಾರ್ ಕುಟುಂಬದ ಸೊಸೆಯಾದಳು.
ಚಾರು-ಚಾರಿ ಲವ್
ಮಾನ್ಯತಾಳಿಗೆ ಮಗಳು ಚಾರುಲತಾ ದೊಡ್ಡವರ ಮನೆಯ ಸೊಸೆ ಆಗಬೇಕು, ಅವಳು ರಾಮಾಚಾರಿ ಜೀವನದಲ್ಲಿ ಇರಬಾರದು ಎಂದು ಏನೇನೋ ಪ್ರಯತ್ನಪಟ್ಟಳು. ಆದರೆ ಚಾರು ಮಾತ್ರ ರಾಮಾಚಾರಿಯನ್ನು ಬಿಟ್ಟುಕೊಡಲೇ ಇಲ್ಲ.
ಚಾರು-ಚಾರಿಗೆ ಸಮಸ್ಯೆ
ರಾಮಾಚಾರಿ ಸಹೋದರ ಕೃಷ್ಣನನ್ನು ನವದೀಪ್ ಕೊಲೆ ಮಾಡಿದ್ದನು. ಚಾರುಳನ್ನು ತನ್ನ ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳಬೇಕು, ಅವರ ಆಸ್ತಿಯನ್ನು ಪಡೆಯಬೇಕು ಎಂದು ನವದೀಪ್ ಅಂದುಕೊಂಡಿದ್ದನು. ಇದರಿಂದಲೇ ರಾಮಾಚಾರಿ ಕುಟುಂಬಕ್ಕೆ ನೂರಾರು ಸಮಸ್ಯೆ ಎದುರಾಗಿದೆ.
ಮಾನ್ಯತಾ ಜೈಲುಪಾಲು
ಚಾರು ಮಗಳನ್ನು ನವದೀಪ್ ಕಿಡ್ನ್ಯಾಪ್ ಮಾಡಿದ್ದನು. ಮಗುವನ್ನು ಕಾಪಾಡಿಕೊಳ್ಳಲು ಚಾರು-ಚಾರಿ ಒದ್ದಾಡಿದ್ದಳು. ಅದರಂತೆ ಮಾನ್ಯತಾ ಕೂಡ ಇವರ ಸಹಾಯಕ್ಕೆ ಧಾವಿಸಿದರು. ಮಾನ್ಯತಾ ತಾನಾಗಿಯೇ ಜೈಲು ಪಾಲಾಗಿದ್ದಾಳೆ. ಅಂದಹಾಗೆ ಎಲ್ಲರೂ ನವದೀಪ್ ಹಾಗೂ ಮಗನಿಗೆ ಹೊಡೆದರು.
ನವದೀಪ್ ಕೊಲೆ
ಕೃಷ್ಣನ ಫೋಟೋ ಒಡೆದು ಹೋಯ್ತು, ಆ ಫೋಟೋದ ಕೆಳಗಡೆ ನವದೀಪ್ ಮಲಗಿದ್ದನು. ಆ ಗಾಜಿನ ಚೂರು ನವದೀಪ್ ಮೈಮೇಲೆ ಬಿದ್ದಿದೆ. ಅಲ್ಲಿಗೆ ನವದೀಪ್ ತೀರಿಕೊಂಡಿದ್ದಾನೆ. ಆಮೇಲೆ ಅವನ ಮಗ ಕೂಡ ಜೈಲು ಪಾಲಾಗಿದ್ದಾನೆ.
ರುಕ್ಮಿಣಿ ಕಥೆ ಏನು?
ರುಕ್ಮಿಣಿ ಕೂಡ ಜೈಲು ಪಾಲಾಗಿದ್ದಾಳೆ. ಚಾರುಲತಾ ತಂದೆ ಅವರ ಎಲ್ಲ ಆಸ್ತಿಯನ್ನು ಟ್ರಸ್ಟ್‌ಗೆ ಬರೆದಿದ್ದಾರೆ. ಜೈಲಿನಿಂದ ಹೊರಗಡೆ ಬಂದಮೇಲೆ ಆ ಟ್ರಸ್ಟ್‌ನಲ್ಲಿ ರುಕ್ಮಿಣಿ, ಮಾನ್ಯತಾ ಸೇವೆ ಮಾಡಲಿದ್ದಾರಂತೆ.
ಚಾರು ಮಗಳಿಗೆ ನಾಮಕರಣ
ಚಾರುಲತಾ ಮಗಳಿಗೆ ಕೃಷ್ಣವೇಣಿ ಎಂದು ಹೆಸರು ಇಟ್ಟಿದ್ದಾರೆ. ಈ ನಾಮಕರಣದಲ್ಲಿ ಎಲ್ಲರೂ ಭಾಗಿ ಆಗಿದ್ದಾರೆ. ಕೃಷ್ಣ ಈಗ ಕೃಷ್ಣವೇಣಿಯಾಗಿ ಬಂದಿದ್ದಾನೆ ಎಂದು ಎಲ್ಲರೂ ನಂಬಿದ್ದಾರೆ.
ಪಾತ್ರಧಾರಿಗಳು
ಚಾರುಲತಾ-ಮೌನ ಗುಡ್ಡೇಮನೆ
ರಾಮಾಚಾರಿ- ರಿತ್ವಿಕ್ ಕೃಪಾಕರ್
ಅಂದಹಾಗೆ ಗುರು ದತ್, ಝಾನ್ಸಿ ಕಾವೇರಪ್ಪ, ಗುರುದತ್, ಅಂಜಲಿ, ಶಂಕರ್ ಅಶ್ವತ್ಥ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

