ಬಿಗ್ ಬಾಸ್ ಮನೆಯಲ್ಲಿ ಶ್ವೇತಾ?; ಹಾಗಿದ್ರೆ 'ಲಕ್ಷಣ'ಗೆ ಬೈ ಬೈ!
ದೊಡ್ಡ ಮನೆಗೆ ಎಂಟ್ರಿ ಕೊಡಲಿದ್ದಾರೆ ಶ್ವೇತಾ. ಮಾಯಾಂಗಿನಿ ಆಟ ಆಡಲು ಯಾರೂ ಇಲ್ವಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿಯಲ್ಲಿ ಸಖತ್ ಕಲರ್ ಫುಲ್ ಆಗಿ ಮಿಂಚುತ್ತಿರುವ ಶ್ವೇತಾ ಉರ್ಫ್ ಸುಕೃತಾ ನಾಗ್.
ಕೆಲವು ದಿನಗಳಿಂದ ಲಕ್ಷಣ ಸೀರಿಯಲ್ ಮುಗಿಯಲಿದೆ ಅದೇ ಸಮಯಕ್ಕೆ ಬಿಗ್ ಬಾಸ್ ಶುರುವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು.
ಈಗ ನೋಡಿದರೆ ಬಿಗ್ ಬಾಸ್ ಸೀಸನ್ 10ಕ್ಕೆ ಶ್ವೇತಾ ಉರ್ಫ್ ಸುಕೃತಾ ನಾಗ್ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಶ್ವೇತಾ ಪಾತ್ರದ ಮೂಲಕ ಸುಕೃತಾ ಸಖತ್ ಬೋಲ್ಡ್ ಆಂಡ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಆದರೆ ರಿಯಲ್ ಲೈಫ್‌ನಲ್ಲಿ ಹೇಗೆಂದೂ ಜನರಿಗೆ ಕ್ಯೂರಿಯಾಸಿಟಿ ಹೆಚ್ಚಿದೆ.
ಇನ್ನು ಸುಕೃತಾ ಕೆಲವು ದಿನಗಳ ಹಿಂದೆ ಯುಟ್ಯೂಬ್ ಚಾನೆಲ್ ಆರಂಭಿಸಿದ್ದರು. ಶೂಟಿಂಗ್, ಶಾಪಿಂಗ್, ಬ್ಯಾಕ್, ಲೈಫ್‌ಸ್ಟೈಲ್ ಹೇಗೆ ಡಿಫರೆಂಟ್ ವಿಚಾರಗಳ ಬಗ್ಗೆ ವಿಡಿಯೋ ಮಾಡುತ್ತಿದ್ದರು.
ಶಕುಂತಲಾ ದೇವಿಯನ್ನು ಹೇಗೆ ಗೊಂಬೆ ರೀತಿ ಆಟ ಆಡಿಸಿದ್ದಾಳೆ ಹಾಗೆ ಬಿಬಿ ಮನೆಯಲ್ಲೂ ಮಾಡುತ್ತಾಳೆ ಅಂತಾರೆ ನೆಟ್ಟಿಗರು. ಆದರೆ ಶ್ವೇತಾ ವಿರುದ್ಧ ಯಾರೆಲ್ಲಾ ಇರುತ್ತಾರೆ ಅನ್ನೋ ಪ್ರಶ್ನೆಯಾಗಿ ಉಳಿದಿದೆ.