- Home
- Entertainment
- TV Talk
- Karimani Serial Climax Episode: 'ಕರಿಮಣಿ' ಧಾರಾವಾಹಿ ಕೊನೇ ಎಪಿಸೋಡ್‌ನಲ್ಲಿ ಏನಾಗುತ್ತೆ? ಸುಳಿವು ಕೊಟ್ಟ ವಾಹಿನಿ!
Karimani Serial Climax Episode: 'ಕರಿಮಣಿ' ಧಾರಾವಾಹಿ ಕೊನೇ ಎಪಿಸೋಡ್‌ನಲ್ಲಿ ಏನಾಗುತ್ತೆ? ಸುಳಿವು ಕೊಟ್ಟ ವಾಹಿನಿ!
'ಕರಿಮಣಿ' ಧಾರಾವಾಹಿ ಅಂತ್ಯ ಆಗೋದು ಪಕ್ಕಾ ಆಗಿದೆ. ಈಗಾಗಲೇ ವಾಹಿನಿ ಕೂಡ ಅಂತಿಮ ಸಂಚಿಕೆಗಳು ಪ್ರಸಾರವಾಗಲಿದೆ ಎಂದು ಹೇಳಿಕೊಂಡಿದೆ. ಶನಿವಾರ ಹಾಗೂ ಭಾನುವಾರ ಸಂಜೆ ಆರು ಗಂಟೆಗೆ ಈ ಧಾರಾವಾಹಿಯ ಕ್ಲೈಮ್ಯಾಕ್ಸ್ ಎಪಿಸೋಡ್‌ಗಳು ಪ್ರಸಾರ ಆಗಲಿವೆಯಂತೆ.

ಸದ್ಯ ಏನಾಗಿದೆ?
ಬ್ಲ್ಯಾಕ್‌ರೋಸ್ ವೇಷ ಹಾಕಿದ್ದು ಅರುಂಧತಿ ಎನ್ನೋದು ಇಡೀ ಮನೆಯವರಿಗೆ ಗೊತ್ತಾಗಿದೆ. ಯಾರು ಎಷ್ಟೇ ಹೇಳಿದರೂ ಕೂಡ ಕರ್ಣ ಮಾತ್ರ ತನ್ನ ಮಲತಾಯಿ ಅರುಂಧತಿ ವಿಲನ್ ಅಲ್ಲ ಎಂದು ನಂಬಿದ್ದನು. ಅರುಂಧತಿಯ ಹೆತ್ತ ಮಗ ಭರತ್ ಕೂಡ ತಾಯಿಯನ್ನು ವಿರೋಧಿಸಿದ್ದನು. ಇನ್ನು ಅರುಂಧತಿ ಮನೆಯವರು ಕೂಡ ಅವಳ ನಿಜವಾದ ಮುಖವಾಡ ನೋಡಿ ಹೆದರಿದ್ದಾರೆ. ನಾವು ಪುಣ್ಯಕೋಟಿ ಗೋವು, ದೇವರು ಎಂದಕೊಂಡವಳು ದೆವ್ವ ಎನ್ನೋದು ಅವರಿಗೆ ಅರ್ಥ ಆಗಿದೆ.
ಸವಾಲು ಹಾಕಿದ ಅರುಂಧತಿ ಮಗ ಭರತ್
ಕರ್ಣನನ್ನು ಅರುಂಧತಿಯೇ ಕಾಲಿನಲ್ಲಿ ಒದ್ದು, ತಲೆಗೆ ಹೊಡೆದು ಸಾಯಿಸಿದ್ದಾಳೆ. ಕರ್ಣ ಸತ್ತು ಹೋಗಿದ್ದಾನೆ, ಮನೆಯಲ್ಲಿ ಇರೋರೆಲ್ಲರೂ ತಾವು ಹೇಳಿದ ಮಾತನ್ನು ಕೇಳಬೇಕು ಅಂತ ಅವಳು ತಾಕೀತು ಮಾಡಿದ್ದಳು. ಆದರೆ ಭರತ್ ಮಾತ್ರ ಕರ್ಣ ಬಂದು ನಿನಗೆ ಅಂತ್ಯ ಹಾಡ್ತಾನೆ ಎಂದು ಸವಾಲು ಹಾಕಿದ್ದಾನೆ.
ಕರ್ಣನಿಲ್ಲದೆ ಬದುಕೋಲ್ಲ ಎಂದ ಸಾಹಿತ್ಯ
ಆಯುರ್ವೇದ ಪಂಡಿತರೊಬ್ಬರು ಕರ್ಣನಿಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಇನ್ನೊಂದು ಕಡೆ ಕರ್ಣ ಏಳಬೇಕು ಅಂತ ತಾಯಿ ಅನುರಾಧಾ ದೇವರ ಮೊರೆ ಹೋಗಿದ್ದಾಳೆ, ಇನ್ನು ಕರ್ಣ ಬದುಕಿ ಬರಬೇಕು, ಕರ್ಣನಿಲ್ಲದೆ ನಾನಿಲ್ಲ, ಕರ್ಣನನ್ನು ಪ್ರೀತಿ ಮಾಡ್ತೀನಿ ಎಂದು ಸಾಹಿತ್ಯ ಹೇಳಿದ್ದಾಳೆ.
ಸಾಹಿತ್ಯಾ ಪ್ರೀತಿಗೋಸ್ಕರ ಕರ್ಣ ಬದುಕಿ ಬರ್ತಾನಾ?
ಸಾಹಿತ್ಯ ಮೇಲೆ ಕರ್ಣನಿಗೆ ಲವ್ ಆಗಿತ್ತು. ಅವನು ಈ ಪ್ರೀತಿಯನ್ನು ಹೇಳಿಕೊಂಡರೂ ಕೂಡ ಅವಳು ಮಾತ್ರ ಒಪ್ಪಲಿಲ್ಲ. ಈಗ ಕರ್ಣನ ಮೇಲೆ ಸಾಹಿತ್ಯಗೆ ಲವ್ ಆಗಿದೆ. ಅವಳೀಗ ಅವನ ಮುಂದೆ ಕೂತು ನೀವಿಲ್ಲದೆ ನನಗೆ ಬದುಕಿಲ್ಲ, ನೀವು ನನಗೆ ಬೇಕು ಎಂದು ಕಣ್ಣೀರು ಹಾಕಿದ್ದಾಳೆ. ಸಾಹಿತ್ಯಳ ಪ್ರೀತಿಗೋಸ್ಕರ ಅವನು ಎದ್ದು ಬರುತ್ತಾನಾ ಎಂದು ಕಾದು ನೋಡಬೇಕಿದೆ.
ದೊಡ್ಡ ಆಕ್ಷನ್ ಸೀನ್
ಹೊಸದಾಗಿ ಪ್ರೋಮೋ ರಿಲೀಸ್ ಆಗಿದ್ದು, ಕರ್ಣ ಎದ್ದು ಬಂದು ಅರುಂಧತಿಗೆ ಠಕ್ಕರ್ ಕೊಡ್ತಾನೆ. ಕರ್ಣ ಎದ್ದು ಅರುಂಧತಿ ಹಾಗೂ ಪ್ರಸನ್ನನ ಅಂತ್ಯಸಂಸ್ಕಾರ ಮಾಡೋದು ಪಕ್ಕಾ ಎನ್ನಲಾಗ್ತಿದೆ. ಅರುಂಧತಿ ಹಾಗೂ ಕರ್ಣ ನಡುವೆ ದೊಡ್ಡ ಮಟ್ಟದಲ್ಲಿ ಆಕ್ಷನ್ ದೃಶ್ಯಗಳು ನಡೆಯಲಿವೆ.
ಪ್ರೇಮ ನಿವೇದನೆ
ಆನಂತರ ಸಾಹಿತ್ಯ ಕರ್ಣನಿಗೆ ಪ್ರೇಮ ನಿವೇದನೆ ಮಾಡ್ತಾಳೆ. ಆರಂಭದಲ್ಲಿ ಪ್ರೀತಿಯನ್ನು ಒಪ್ಪಿಕೊಳ್ಳದ ಕರ್ಣ ಸ್ವಲ್ಪ ಆಟ ಆಡಿಸುತ್ತಾನೆ. ಇಡೀ ಕುಟುಂಬ ಖುಷಿಯಿಂದ ಇರಲಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿವೆ. ಈ ಟ್ವಿಸ್ಟ್‌ನಿಂದಲೇ ಈ ಧಾರಾವಾಹಿ ಅಂತ್ಯ ಆಗಲಿದೆ.