ಈ ಒಂದು ಭಯದಿಂದ ದೂರ ಉಳಿದುಬಿಟ್ಟೆ; ಮದುವೆ ನಿರಾಕರಿಸಲು ಕಾರಣ ಬಿಚ್ಚಿಟ್ಟ ಸಿರಿ
ಸಿಂಗಲ್ ಸಿರಿಗೆ ಹರಿದು ಬರುತ್ತಿದೆ ಮದುವೆ ಪ್ರಪೋಸಲ್. ಒಮ್ಮೆ ಯಾವ ರೀತಿ ಹುಡುಗ ಬೇಕು ಎಂದು ಹೇಳಿದ ಮಾತುಗಳು ವೈರಲ್...
ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿರುವ ಕಿರುತೆರೆ ಜನಪ್ರಿಯ ನಟಿ ಸಿರಿ ಒಮ್ಮೆ ತಮ್ಮ ತಂದೆ, ಮದುವೆ ಮತ್ತು ಫ್ಯಾಮಿಲಿ ಬಗ್ಗೆ ಮಾತನಾಡಿದ್ದರು.
'ಎಲ್ಲರು ಹೇಳುತ್ತಾರೆ ಒಬ್ಬ ಸಕ್ಸಸ್ ಫುಲ್ ಪುರುಷನ ಹಿಂದೆ ಹೆಣ್ಣು ಇದ್ದೇ ಇರುತ್ತಾಳೆ ಅಂತ. ನಾನು ಹೇಳುತ್ತೀನಿ ಒಬ್ಬ ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಪುರುಷ ಇರುತ್ತಾನೆ ಎಂಬುದು ಅಷ್ಟೇ ನಿಜ.
ನನ್ನ ಯಶಸ್ಸಿನ ಹಿಂದೆ ಇದ್ದಿದ್ದು ನನ್ನ ತಂದೆ . ಇವತ್ತು ಅವರು ಇಲ್ಲ. ನಾವಿಬ್ಬರೂ ಒಬ್ಬರನ್ನೊಬ್ಬರು ಯಾವತ್ತೂ ಬಿಟ್ಟು ಕೊಡುತ್ತಿರಲಿಲ್ಲ. ಬಹುಶಃ ಮದುವೆ ಅನ್ನೋ ವಿಚಾರ ಬಂದಾಗ ನನಗೆ ಬೇಕಾಗಿದ್ದಿದ್ದು ನಿಜವಾಗಲೂ ನನ್ನ ತಂದೆ ಸ್ಥಾನದಲ್ಲಿ ಸಮಾನವಾಗಿ ನಿಲ್ಲುವಂಥ ಪುರುಷ, ಎಂದು ಕೊಳ್ಳುತ್ತೇನೆ.
ನನ್ನ ಗಂಡ ಅನ್ನೋದಕ್ಕಿಂತ ನನ್ನ ಕುಟುಂಬಕ್ಕೆ ಮಗ ಆಗಿರಬೇಕಿತ್ತು. ಆರ್ಥಿಕವಾಗಿ ಸಪೋರ್ಟ್ ಆಗಿರಬೇಕು ಅನ್ನೋದಿಲ್ಲ ಏಕೆಂದರೆ ಆರಂಭದ ದಿನಗಳಿಂದ ಇದುವರೆಗೂ ನಾವು ಯಾರ ಮೇಲೂ ಅಕ್ಕ ಮತ್ತು ನಾನು ಡಿಪೆಂಡ್ ಆಗಿರಲಿಲ್ಲ ಸಹಾಯ ಪಡೆದಿಲ್ಲ.
ನಮ್ಮ ಮನೆ ಬರುವ ಪುರುಷ ನಮ್ಮ ಕುಟುಂಬಕ್ಕೆ ಮಗನಾಗಿ ಬರಬೇಕಿತ್ತು. ಆ ರೀತಿ ಗುಣಗಳನ್ನು ನಾನು ಯಾರಲ್ಲೂ ನೋಡಿಲ್ಲ. ಜೀವನದಲ್ಲಿ ಮತ್ತೊಂದು ಭಯ ಇತ್ತು ಎಲ್ಲಿ ಬರುವ ಪುರುಷ ನಮ್ಮನ್ನು ದೂರ ಮಾಡುತ್ತಾರೆ ಅಂತ.
ಹಾಗಾಗಿ ನಾನು ಮದುವೆ ಮಾಡಿಕೊಳ್ಳಲು ದೈರ್ಯ ಮಾಡಲಿಲ್ಲ. ನನ್ನ ಅಕ್ಕ ಸಿಂಗಲ್ ಪೇರೆಂಟ್ ಆಗಿ ಮನೆ ನಡೆಸುತ್ತಿದ್ದಾರೆ. ನಮ್ಮ ನಿರ್ಧಾರಗಳಿಗೆ ನಮ್ಮ ತಾಯಿ ಸಪೋರ್ಟ್ ಮಾಡಿದ್ದಾರೆ. ನಾವು ಮೂವರು ಒಟ್ಟಿಗೆ ನಿಂತು ಜೀವನ ನಡೆಸುತ್ತಿದ್ದೀವಿ