ನಾನು ಸಂಪಾದನೆ ಮಾಡಿದ ಹಣದಲ್ಲಿ ಕೇವಲ 10 ರೂ. ಇಡ್ಲಿ ತಿನ್ನುತ್ತಿದ್ದೆ, ಅಷ್ಟೂ ಹಣ ಉಳಿಸುತ್ತಿದ್ದೆ: ಬಿಗ್ ಬಾಸ್ ಸಂಗೀತಾ ಶೃಂಗೇರಿ
ಕಾಲೇಜ್ ದಿನಗಳಲ್ಲಿ ಹತ್ತು ಹಲವಾರು ಕೆಲಸಗಳನ್ನು ಮಾಡುತ್ತಿದ್ದ ಸಂಗೀತಾ. 777 ಚಾರ್ಲಿ ನಟಿ ವಯಸ್ಸಿನಲ್ಲಿ ದುಡಿಯಬೇಕು ಅನ್ನೋದಷ್ಟೆ ಯೋಚನೆ ಅಂತೆ....
ಕಾಲೇಜ್ ದಿನಗಳಲ್ಲಿ ನಾನು ಸ್ಯಾಮ್‌ಸಂಗ್ ಮತ್ತು ಹಲವು ಕಂಪನಿಗಳಲ್ಲಿ ಪ್ರಮೋಟರ್ ಕೆಲಸ ಮಾಡುತ್ತಿದ್ದೆ. ಸೇಲ್ಸ್‌ಮ್ಯಾನ್ ಆಗಿ ಸುಮಾರು ಶೋ ರೂಮ್‌ಗಳಲ್ಲಿ ಕೆಲಸ ಮಾಡಿದ್ದೀನಿ.
ನನ್ನದೊಂದು ಸ್ಟೈಲ್ ಇತ್ತು...ಬೂಟ್ಸ್ ಹಾಕಿಕೊಂಡು ಅವರು ಕೊಟ್ಟ ಶರ್ಟ್‌ಗೆ ಬ್ಲ್ಯಾಕ್ ಪ್ಯಾಂಟ್ ಮತ್ತು ಗ್ಲಾಸ್ ಧರಿಸಿ ಹೇರ್ ಸ್ಟೈಲ್ ಮಾಡಿಕೊಂಡು ರೆಡಿಯಾಗುತ್ತಿದ್ದೆ ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಸಂಗೀತಾ ಹೇಳಿದ್ದಾರೆ.
ನಾನು ಕೆಲಸ ಮಾಡುವ ಸಮಯದಲ್ಲಿ ನಾಲ್ಕು ಲಕ್ಷದ ಟಿವಿ ವ್ಯಾಪಾರ ಮಾಡುತ್ತಿದ್ದೆ. ಏಕೆಂದರೆ ಜನರನ್ನು ಅಟ್ರ್ಯಾಕ್ಟ್ ಮಾಡಿ ಒಪ್ಪಿಸುತ್ತಿದ್ದೆ.
ಅಷ್ಟೇ ಅಲ್ಲದೆ ಮದುವೆ ಮನೆಯಲ್ಲಿ ಸ್ವಾಗತ ಮಾಡುವ ಹುಡುಗಿಯರ ಕೆಲಸ ಮಾಡಿದ್ದೀನಿ. ಆ ವಯಸ್ಸಿನಲ್ಲಿ ದುಡಿಯಬೇಕು ಅನ್ನೋ ಅಷ್ಟೆ ತಲೆಯಲ್ಲಿತ್ತು.
ನಾನು ದುಡಿದ 500 ರೂಪಾಯಿ ಆದ್ರೂ ಖುಷಿ ಕೊಡುತ್ತಿತ್ತು. ನಾವು ದುಡಿದ ಹಣವನ್ನು ಹುಷಾರ್ ಆಗಿ ಖರ್ಚು ಮಾಡುತ್ತಿದ್ದೆ ತುಂಬಾ ಸೇವ್ ಮಾಡುತ್ತಿದ್ದೆ.
ಅಪ್ಪ ಅಮ್ಮ ಕೊಡುವ ಹಣವನ್ನು ಸುಲಭವಾಗಿ ಖರ್ಚು ಮಾಡುತ್ತಿದ್ದೆ ಆದರೆ ನಾವು ದುಡಿದ ಹಣದಲ್ಲಿ 10 ರೂಪಾಯಿ ಇಡ್ಲಿ ಮಾತ್ರ ತಿನ್ನುತ್ತಿದ್ದೆ ಅಷ್ಟು ಸೇವ್ ಮಾಡುತ್ತಿದ್ದೆ.