Ramachar : ವೈಶಾಖಾ ಬಾಯಿ ಮುಚ್ಚಿಸಲು ಕ್ಲಾಸ್ ಇಂದ ಮಾಸ್ ಆದ ಚಾರು
ಮನೆ ಮುರಿಯೋ ಕೆಲಸ ಮಾಡುತ್ತಿರುವ ವೈಶಾಖಳ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯ ಇಲ್ಲ ಎಂದು ಅಂದ್ಕೊಂಡಿರುವಾಗಲೇ ಚಾರು ತನ್ನ ಮಾತಿನ ಮೂಲಕವೇ ವೈಶಾಖಗೆ ನಡುಕ ಹುಟ್ಟಿಸಿದ್ದಾಳೆ.
ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರ ಆಗುತ್ತಿರುವ ರಾಮಾಚಾರಿ ಸೀರಿಯಲ್ ನಲ್ಲಿ ವೈಶಾಖಗೆ ಎದುರೇಟು ಕೊಡಲು ಯಾರಿಂದಲೂ ಸಾಧ್ಯವೇ ಇಲ್ಲ ಎಂದು ಎಲ್ಲರೂ ಅಂದುಕೊಂಡಿರುವಾಗಲೇ, ಚಾರು ವೈಶಾಖಗೆ ಸರಿಯಾಗಿಯೇ ಬೆವರಿಳಿಸಿದ್ದಾಳೆ.
ವೈಶಾಖಾ ಬಾಯಿ ಮುಚ್ಚಿಸಲು ಕ್ಲಾಸ್ ಇಂದ ಮಾಸ್ ಆದ ಚಾರು (Charu), ಮತ್ತೊಬ್ರ ಮನೆ ನೆಮ್ಮದಿ ಹಾಳ್ ಮಾಡೊಕೆ ಹುಟ್ಟಿರೋ ರಾಕ್ಷಸಿ ತರ ಆಡ್ತಿಯಲ್ಲ. ಏನೇ ಬಂದಿರೋದು ನಿನಗೆ ದೊಡ್ಡ ರೋಗ, ದರಿದ್ರದೋಳೆ, ಹಾಳಾದೋಳೆ, ಮನೆ ಹಾಳಿ ಎಂದೆಲ್ಲಾ ಬಯ್ತಾಳೆ.
ಜೊತೆಗೆ ಇದೇ ಕೊನೆ ಇನ್ನೊಂದ್ಸಲ ಆ ಮನೆಯವರಿಗೆ ತೊಂದ್ರೆ ಕೊಟ್ರೆ ನಿನ್ನ ನಾಲಿಗೆ ಕಟ್ ಮಾಡಿ ಬಿಡ್ತೀನಿ ಎಂದು ಸವಾಲು ಹಾಕ್ತಾಳೆ. ನಾನು ಸುಮ್ನೆ ಇದ್ದೀನಿ ಅಂತ ಕಾಲು ಕೆರ್ಕೊಂಡು ಜಗಳಕ್ಕೆ ಬರ್ತ್ಯಾ ಎಂದು ವೈಶಾಖ ಕೇಳಿದಾಗ, ಚಾರು ಮತ್ತೆ ನೀನು ಆ ಮನೆಯವರ ಜೊತೆ ಕಾಲು ಕೆರ್ಕೊಂಡು ಜಗಳಕ್ಕೆ ಹೋಗ್ತಾ ಇದ್ರೆ ನಾನು ಸುಮ್ನೆ ಇರ್ಲಾ ಎಂದು ಪ್ರತಿ ಸವಾಲು ಹಾಕ್ತಾಳೆ.
ಮಾವ ಅಂದ್ರೆ ತಂದೆ, ಅತ್ತೆ ಅಂದ್ರೆ ತಾಯಿ, ಬೆಳಗ್ಗೆ ಎದ್ದು ಅವರ ಕಾಲು ಹಿಡಿಬೇಕು, ಅದ್ರ ಬದ್ಲು ಅವರ ಜುಟ್ಟು ಹಿಡಿಯಲು ಹೋದ್ರೆ ನಿನ್ನ ಜುಟ್ಟನ್ನೆ ಕತ್ರಿಸಿ ಬಿಡ್ತೀನಿ ಎಂದು ಆವಾಜ್ ಹಾಕ್ತಾಳೆ ಚಾರು. ನನಗೆ ವಾರ್ನಿಂಗ್ ಕೊಡೋಕೆ ನೀನ್ಯಾರು ಎಂದು ವೈಶಾಖ ಕೇಳ್ತಾಳೆ.
ಇದಕ್ಕೆ ಫಟ್ ಎಂದು ಉತ್ತರ ಕೊಡುವ ಚಾರು ನಾನು ರಾಮಾಚಾರಿ (Ramachari) ಫ್ರೆಂಡ್, ಆ ಮನೆಯವರಿಗೆ ತುಂಬಾನೆ ಹತ್ರದವಳು, ಆ ಫ್ಯಾಮಿಲಿ ನಮ್ಮ ಫ್ಯಾಮಿಲಿ ಸರಿ ಹೋಗೋಕೆ ತುಂಬಾನೆ ಸಹಾಯ ಮಾಡಿದೆ. ಯಾವುದೋ ಹುಳ ಬಂದು ಆ ಫ್ಯಾಮಿಲಿಗೆ ಕಾಟ ಕೊಡ್ತಿದೆ ಅಂದ್ರೆ ನಾನದನ್ನು ಸಹಿಸಲ್ಲ, ಎನ್ನುತ್ತಾಳೆ.
ರಾಮಚಾರಿ ಮನೆ ಅಂದ್ರೆ ನೂರು ಜನಕ್ಕೆ ಒಳ್ಳೆದು ಮಾಡುವ ಮನೆ, ಅದ್ರೊಳಗೆ ನಿನ್ನಂತ ಹುಳ ಬಂದು ತಿಂದು ಮುಗಿಸ್ತೇನೆ ಅಂದ್ರೆ ನಿದ್ರೆ ಮಾಡೋದನ್ನ ನನ್ನ ಸ್ಟೈಲ್, ಒದ್ದು ಓಡ್ಸೋದು. ಇದು ನಿಂಗೆ ಕಡೇ ವಾರ್ನಿಂಗ್, ಸರಿಯಾಗಿಲ್ಲ ಅಂದ್ರೆ ಗೇಟ್ ಪಾಸ್ ಕೊಟ್ಟು ಓಡ್ಸೋದು ಎಂದು ಖಡಕ್ ಆಗಿ ವಾರ್ನ್ ಮಾಡ್ತಾಳೆ ಚಾರು.
ಚಾರು ಮಾತಿಗೆ ಭಯದಿಂದ ನಡುಗಿ ಒಂದೇ ಮಾತನಾಡದ ವೈಶಾಖ ಇದೀಗ ತನ್ನನ್ನೆ ತಾನು ಡೌಟ್ ಮಾಡ್ತಿದ್ದಾಳೆ. ಅಷ್ಟರಲ್ಲೆ ಹೊಸ ಎಂಟ್ರಿಯಾಗಿ ವೈಶಾಖ ತಂಗಿ ಬರ್ತಾಳೆ. ಆಕೆ ಜೊತೆ ತನ್ನ ಮನೆಯ ಕತೆ, ರಾಮಾಚಾರಿ ಬಗ್ಗೆ ಕಿವಿ ಊದುವ ವೈಶಾಖ, ಇನ್ನು ಮುಂದೆ ತಂಗಿ ಜೊತೆ ಸೇರಿ ಏನು ನಾಟಕ ಮಾಡ್ತಾಳೆ ಕಾದು ನೋಡಬೇಕು.