- Home
- Entertainment
- TV Talk
- Varun Aaradhya: ಯುಟ್ಯೂಬ್ ಆದಾಯದ ಗುಟ್ಟು ಬಿಚ್ಚಿಟ್ಟ 'ಬೃಂದಾವನ' ನಟ ವರುಣ್ ಆರಾಧ್ಯ: ಹೇಗಿರತ್ತೆ ಲೈಫ್
Varun Aaradhya: ಯುಟ್ಯೂಬ್ ಆದಾಯದ ಗುಟ್ಟು ಬಿಚ್ಚಿಟ್ಟ 'ಬೃಂದಾವನ' ನಟ ವರುಣ್ ಆರಾಧ್ಯ: ಹೇಗಿರತ್ತೆ ಲೈಫ್
'ಬೃಂದಾವನ' ಧಾರಾವಾಹಿ ಖ್ಯಾತಿಯ ನಟ ಮತ್ತು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವರುಣ್ ಆರಾಧ್ಯ, ತಮ್ಮ ಬದುಕಿನ ಏರಿಳಿತಗಳ ಬಗ್ಗೆ ಮಾತನಾಡಿದ್ದಾರೆ. ಕೇವಲ ಯುಟ್ಯೂಬ್ ಆದಾಯದಿಂದ ಜೀವನ ನಡೆಸುವುದು ಕಷ್ಟಕರವಾಗಿದ್ದು, ಅದಕ್ಕೆ ಮಾಡುವ ಹೂಡಿಕೆ ಮತ್ತು ಖರ್ಚುಗಳ ಬಗ್ಗೆ ವಿವರಿಸಿದ್ದಾರೆ.

ಬೃಂದಾವನ ನಟ
'ಬೃಂದಾವನ' ಧಾರಾವಾಹಿ (Brindavana Serial) ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ವರುಣ್ ಆರಾಧ್ಯ ಅವರು ಕಿರುತೆರೆ ನಟ ಮಾತ್ರ ಅಲ್ಲದೇ, ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಕೂಡ ಹೌದು. ಬಹುತೇಕ ನಟರಂತೆ ಬದುಕಿನಲ್ಲಿ ಹಲವಾರು ಏರಿಳಿತಗಳನ್ನು ಕಂಡಿರುವ ವರುಣ್ ಅವರು, . ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಅತ್ಯಂತ ಕಷ್ಟದ ದಿನಗಳನ್ನು ನೆನೆದು ಭಾವುಕರಾಗಿದ್ದರು. ತಮ್ಮ ಕುಟುಂಬ ಸದಸ್ಯರಿಗೆ ಬರುತ್ತಿರುವ ಕೆಟ್ಟ ಕಮೆಂಟ್‌ಗಳನ್ನು ಮಾಡುವವರ ವಿರುದ್ಧ ಕೆಂಡ ಕಾರಿದ್ದರು.
ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್
ಇದರ ನಡುವೆಯೇ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆದಾಯದ ಕುರಿತು ಖುದ್ದು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ವರುಣ್ ಅವರು ಮಾತನಾಡಿದ್ದಾರೆ. ಅಷ್ಟಕ್ಕೂ ಇದಾಗಲೇ ಹಲವಾರು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಇದರಿಂದಲೇ ಜೀವನ ನಡೆಸುವವರು ಇದ್ದಾರೆ. ಪೇಯ್ಡ್ ಪ್ರಮೋಷನ್, ಜಾಹೀರಾತು ಎಲ್ಲಾ ಬಂದಾಗ ಸುಲಭದಲ್ಲಿ ಜೀವನ ಮಾಡಬಹುದು. ಆದರೆ ಸರಿಯಾದ ರೀತಿಯಲ್ಲಿ, ಅಶ್ಲೀಲತೆಯ ಸೋಂಕು ಇಲ್ಲದೇ ಪ್ರಾಮಾಣಿಕವಾಗಿ ಯುಟ್ಯೂಬ್ ನಡೆಸಿಕೊಂಡು ಹೋಗುವವರಿಗೆ ಆಗುವ ಸಮಸ್ಯೆ ಏನು, ಇದರ ಆದಾಯದಿಂದ ಹೊಟ್ಟೆ ತುಂಬತ್ತಾ ಎಲ್ಲವುಗಳ ಬಗ್ಗೆ ನಟ ಮಾತನಾಡಿದ್ದಾರೆ.
ಯುಟ್ಯೂಬ್ ಆದಾಯದ ಬಗ್ಗೆ ನಟ
ಹಲವರಿಗೆ ಕೇವಲ ಯೂಟ್ಯೂಬ್ ಮಾಡಿಕೊಂಡು ಜೀವನ ಸಾಗಿಸೋದಕ್ಕೆ ಆಗಲ್ಲ. ಅದರ ಜೊತೆಗೆ ಬೇರೆ ಕೆಲಸ ಇದ್ದರೆ ಬದುಕು ಸಾಗುತ್ತದೆ. ಯುಟ್ಯೂಬ್ ಒಂದನ್ನೇ ನಂಬಿಕೊಂಡು ಇರಲಿ ಆಗುವುದಿಲ್ಲ ಎಂದಿದ್ದಾರೆ ವರುಣ್. ನಾವು ಯೂಟ್ಯೂಬ್‌ನಲ್ಲಿ ಏನು ವಿಡಿಯೋಗಳನ್ನ ಮಾಡ್ತಿದ್ದೇವೆ ಅದಕ್ಕೆ ನಾವು ಅಷ್ಟೇ ಬಂಡವಾಳನ್ನೂ ಹೂಡಬೇಕಾಗುತ್ತದೆ. ಯೂಟ್ಯೂಬ್‌ನಿಂದ ಬರೋ ದುಡ್ಡನ್ನ ಮತ್ತೆ ನಾವು ಅಲ್ಲಿಗೆ ಹಾಕಬೇಕು. ಒಂದು ವಿಡಿಯೋ ಮಾಡಬೇಕು ಎಂದರೆ, ಅಲ್ಲಿ ಅಷ್ಟೇ ಖರ್ಚುಗಳಿರುತ್ತವೆ. ಕ್ಯಾಮೆರಾ ಮತ್ತು ಎಡಿಟಿಂಗ್ ಟೀಮ್ ಇರುತ್ತೆ. ಹಾಗಾಗಿ, ಅದರ ಜೊತೆಗೆ ಬಿಜಿನೆಸ್ಸೋ ಅಥವಾ ಇನ್ನಾವುದೋ ಕೆಲಸ ಇದ್ದರೆ ಉತ್ತಮ ಎಂದಿದ್ದಾರೆ ವರುಣ್.
ಟ್ರಾವೆಲ್ ಬ್ಯುಸಿನೆಸ್
ಅಂದಹಾಗೆ ವರುಣ್ ಅವರದ್ದು ಪಂದು ಟ್ರಾವೆಲ್ ಬ್ಯುಸಿನೆಸ್ ಇದೆ. ಅದರ ಜೊತೆ ಕಿರುತೆರೆಯಲ್ಲಿ ನಟನೆ ಹಾಗೂ ಯುಟ್ಯೂಬ್ ಕೂಡ ಇರುವ ಕಾರಣ, ಮ್ಯಾನೇಜ್ ಮಾಡುತ್ತಿದ್ದಾರೆ. ನಟ, ಮೊದಲು ಟಿಕ್ ಟಾಕ್‌ನಲ್ಲಿ ವಿಡಿಯೋ ಮಾಡುತ್ತಿದ್ದರು. ಬಳಿಕ ಇನ್ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಾ ಫೇಮಸ್ ಆದರು. ಈ ಮೂಲಕವೇ ʻಬೃಂದಾವನʼ ಧಾರಾವಾಹಿಯಲ್ಲಿ ನಟಿಸುವ ಆಫರ್ ಸಿಕ್ಕಿತು. ಆದರೆ, ಕೆಲ ತಿಂಗಳಲ್ಲೇ ಆ ಧಾರಾವಾಹಿ ಮುಗಿದಿದ್ದು, ಸದ್ಯ ಯೂಟ್ಯೂಬ್ ವ್ಲಾಗ್ ಜೊತೆಗೆ ತಮ್ಮದೇ ಟ್ರಾವೆಲ್ ಬ್ಯುಸಿನೆಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ ವರುಣ್ ಆರಾಧ್ಯ.
'ಬೃಂದಾವನ' ಆಫರ್ ಬಂದಿದ್ದು ಹೇಗೆ?:
ವರುಣ್ ಆರಾಧ್ಯ ಅವರಿಗೆ 'ಬೃಂದಾವನ' ಸೀರಿಯಲ್ ಆಫರ್ ಬಂದ ಕಥೆಯೇ ಒಂದು ವಿಚಿತ್ರ ಅನುಭವ. ರೀಲ್ಸ್ ಮತ್ತು ಡಬ್ಬಿಂಗ್ ಮಾಡುತ್ತಿದ್ದ ಅವರಿಗೆ ಒಂದು ದಿನ ಮಧ್ಯರಾತ್ರಿ 1 ಗಂಟೆಗೆ (Midnight 1 AM) ಪ್ರಸಿದ್ಧ ನಿರ್ದೇಶಕ ರಾಮ್‌ಜಿ ಅವರ ಪ್ರೊಡಕ್ಷನ್‌ನಿಂದ ಕರೆ ಬಂದಿತ್ತು. 'ಅಷ್ಟು ರಾತ್ರಿಯಲ್ಲಿ ಯಾರೋ ಕಾಲ್ ಮಾಡಿ ನಟಿಸುವ ಅವಕಾಶ ಇದೆ ಅಂದಾಗ, ಅದು ಪ್ರ್ಯಾಂಕ್ (Prank) ಅಥವಾ ಫೇಕ್ ಇರಬಹುದು ಎಂದು ಅಂದುಕೊಂಡಿದ್ದೆ. ಆದರೆ ಅದು ನಿಜವಾದ ಆಫರ್ ಆಗಿತ್ತು' ಎಂದಿದ್ದಾರೆ.
ನಟನೆಯಲ್ಲಿ ಸೈ
ತಕ್ಷಣವೇ ಆಡಿಷನ್‌ಗೆ (Audition) ಹೋದ ವರುಣ್, ಅಲ್ಲಿ ನೀಡಲಾದ ಸ್ಕ್ರಿಪ್ಟ್ (Script) ಓದಿ ನಟಿಸಿ ತೋರಿಸಿದರು. ಅವರ ನಟನೆಯನ್ನು ಮೆಚ್ಚಿದ ತಂಡ ತಕ್ಷಣವೇ ಅವರನ್ನು ಸರಣಿಗೆ ಆಯ್ಕೆ ಮಾಡಿಕೊಂಡಿತು. ದುರದೃಷ್ಟವಶಾತ್ ಈ ಧಾರಾವಾಹಿ ಕೆಲವೇ ತಿಂಗಳುಗಳಲ್ಲಿ ಅಂತ್ಯವಾಯಿತಾದರೂ, ವರುಣ್ ಅವರಿಗೆ ಇದು ದೊಡ್ಡ ಮಟ್ಟದ ಬ್ರೇಕ್ ನೀಡಿತ್ತು. ಸದ್ಯ ಟ್ರೋಲ್‌ಗಳ ಸಂಕಷ್ಟದಿಂದ ಹೊರಬಂದಿರುವ ವರುಣ್ ಆರಾಧ್ಯ, ತಮ್ಮ ಕರಿಯರ್ (Career) ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅವರು, ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

