- Home
- Entertainment
- TV Talk
- Amruthadhaare Serial Twist: ಗೌತಮ್ ಬ್ಲಡ್ ರಿಪೋರ್ಟ್ನಲ್ಲಿ ಆಘಾತಕಾರಿ ರಹಸ್ಯ? ಡಾಕ್ಟರ್ ಹೇಳಿದ್ದೇನು
Amruthadhaare Serial Twist: ಗೌತಮ್ ಬ್ಲಡ್ ರಿಪೋರ್ಟ್ನಲ್ಲಿ ಆಘಾತಕಾರಿ ರಹಸ್ಯ? ಡಾಕ್ಟರ್ ಹೇಳಿದ್ದೇನು
ಅಮೃತಧಾರೆ ಧಾರಾವಾಹಿಯಲ್ಲಿ, ಆಫೀಸ್‌ನಲ್ಲಿ ತಲೆಸುತ್ತಿ ಬಿದ್ದ ಗೌತಮ್‌ನನ್ನು ವೈದ್ಯರು ಬ್ಲಡ್ ರಿಪೋರ್ಟ್ ಆಧರಿಸಿ ಆಸ್ಪತ್ರೆಗೆ ಕರೆದಿದ್ದಾರೆ. ಈ ವಿಷಯ ತಿಳಿಯದೆ ಭೂಮಿಕಾ ಆತಂಕಗೊಂಡಿದ್ದು, ಇತ್ತ ಶಕುಂತಲಾ ಮತ್ತು ಜೈದೇವ್ ಇವರಿಬ್ಬರ ಸರ್ವನಾಶಕ್ಕೆ ಸಂಚು ರೂಪಿಸುತ್ತಿದ್ದಾರೆ.

ಅಮೃತಧಾರೆ ಟ್ವಿಸ್ಟ್
ಅಮೃತಧಾರೆ ಸೀರಿಯಲ್ (Amruthadhaare Kannada Serial)ನಲ್ಲಿ ಈಗ ರೋಚಕ ಟ್ವಿಸ್ಟ್ ಸಿಕ್ಕಿದೆ. ಗೌತಮ್ ಮತ್ತು ಭೂಮಿಕಾ ಬಾಳಲ್ಲಿ ಎಲ್ಲವೂ ಸರಿಯಾಗ್ತಿದೆ ಅಂದುಕೊಳ್ಳುವಾಗಲೇ ಏನೋ ಅಪಶಕುನ ಆರಂಭವಾಗುವ ಹಾಗೆ ಕಾಣಿಸ್ತಿದೆ.
ಸರ್ವನಾಶ ಮಾಡುವ ಪಣ
ಒಂದೆಡೆ, ಶಕುಂತಲಾ ಮತ್ತು ಜೈದೇವ ಒಗ್ಗಟ್ಟಾಗಿದ್ದು, ಗೌತಮ್ ಮತ್ತು ಭೂಮಿಕಾರನ್ನು ಸರ್ವನಾಶ ಮಾಡುವ ಮಹಾ ಪ್ಲ್ಯಾನ್ ಹಾಕುತ್ತಿದ್ದಾರೆ. ಅದೇ ಇನ್ನೊಂದೆಡೆ ಗೌತಮ್ಗೆ ಜೀವಕ್ಕೆ ಅಪಾಯ ಬಂದಿದ್ಯಾ ಎನ್ನುವ ಆತಂಕವೂ ಕಾಡುತ್ತಿದೆ.
ತಲೆ ಸುತ್ತಿಬಿದ್ದ ಗೌತಮ್
ಇದಾಗಲೇ ಆಫೀಸ್‌ನಲ್ಲಿ ಗೌತಮ್ ತಲೆ ಸುತ್ತಿ ಬಿದ್ದಿದ್ದ. ಇದನ್ನು ನೋಡಿ ಆನಂದ್ ಚಿಂತಾಕ್ರಾಂತನಾಗಿದ್ದ. ಈ ವಿಷಯವನ್ನು ಅವನು ಭೂಮಿಕಾಗೂ ಕೂಡ ತಿಳಿಸಿದ್ದ. ಭೂಮಿಕಾ ಕೂಡ ಪತಿಯ ಆರೋಗ್ಯಕ್ಕೆ ಏನಾದರೂ ಆಗಿರಬಹುದಾ ಎಂದು ಅವಳು ಆಲೋಚನೆ ಮಾಡಿದ್ದಳು.
ವೈದ್ಯರಿಂದ ಕರೆ
ಇದೀಗ ಶಾಕ್ ಎನ್ನುವಂತೆ ವೈದ್ಯರು ಕರೆ ಮಾಡಿ ಗೌತಮ್‌ನನ್ನು ಆಸ್ಪತ್ರೆಗೆ ಕರೆದಿದ್ದಾರೆ. ಭೂಮಿಕಾ ಕಾಲ್ ಪಿಕ್ ಮಾಡಿದ್ರೂ ವೈದ್ಯರು ಆಕೆಗೆ ಏನೂ ವಿಷಯ ತಿಳಿಸಲಿಲ್ಲ.
ಭೂಮಿಕಾಗೆ ಶಾಕ್
ಗೌತಮ್ ಅವರೇ ಆಸ್ಪತ್ರೆಗೆ ಬರಬೇಕು ಎಂದು ವೈದ್ಯರು ಹೇಳಿದಾಗ ಭೂಮಿಕಾಗೆ ಶಾಕ್ ಆಗಿದೆ. ಆ ಬ್ಲಡ್ ರಿಪೋರ್ಟ್ನಲ್ಲಿ ಏನಾದ್ರೂ ಸಮಸ್ಯೆ ಇರುವ ಬಗ್ಗೆ ಬಂದಿದ್ಯಾ ಎನ್ನುವ ಆತಂಕ ಭೂಮಿಕಾಳನ್ನು ಕಾಡುತ್ತಿದೆ.
ಇನ್ನಷ್ಟು ರೋಚಕ
ಒಟ್ಟಿನಲ್ಲಿ ಸೀರಿಯಲ್ ಇನ್ನಷ್ಟು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಗೌತಮ್ನಿಗೆ ಗಂಭೀರ ಕಾಯಿಲೆ ಏನಾದರೂ ಬಂದರೆ ಒಂದಷ್ಟು ವರ್ಷ ಸೀರಿಯಲ್ ಎಳೆಯುವುದರಲ್ಲಿ ಸಂದೇಹವಿಲ್ಲ. ಆದರೆ ಗೌತಮ್ ಮತ್ತು ಭೂಮಿಕಾಗೆ ಏನೂ ಮಾಡಬೇಡಿ ಎಂದು ವೀಕ್ಷಕರು ವಿನಂತಿಸಿಕೊಳ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

