- Home
- Entertainment
- TV Talk
- ಸುಧಿಗೆ Bigg Boss ಮನೆಯಲ್ಲಿ ಸಿಕ್ಕ ಸಂಭಾವನೆ ಎಷ್ಟು? 50 ಕೋಟಿ ಬಗ್ಗೆ ಮಾತನಾಡಿದ್ದೇಕೆ ಕಾಕ್ರೋಚ್?
ಸುಧಿಗೆ Bigg Boss ಮನೆಯಲ್ಲಿ ಸಿಕ್ಕ ಸಂಭಾವನೆ ಎಷ್ಟು? 50 ಕೋಟಿ ಬಗ್ಗೆ ಮಾತನಾಡಿದ್ದೇಕೆ ಕಾಕ್ರೋಚ್?
ಬಿಗ್ ಬಾಸ್‌ನಿಂದ ಹೊರಬಂದ ನಂತರ ಕಾಕ್ರೋಚ್ ಸುಧಿ ಅವರ ಜನಪ್ರಿಯತೆ ಹೆಚ್ಚಾಗಿದೆ. ತಮ್ಮ ಪತಿಯ ಶೀಘ್ರ ಎಲಿಮಿನೇಷನ್‌ಗೆ ಅಶ್ವಿನಿ ಮತ್ತು ಜಾಹ್ನವಿ ಕಾರಣ ಎಂದು ಅವರ ಪತ್ನಿ ಹೇಳಿದರೆ, 50 ಕೋಟಿ ಕೊಟ್ಟರೂ ಸಿಗದ ಬಿಗ್ ಬಾಸ್ ಮನೆಯ ಅನುಭವವೇ ತನಗೆ ಮುಖ್ಯ, ಸಂಭಾವನೆಯಲ್ಲ ಎಂದು ಸುಧಿ ಹೇಳಿದ್ದಾರೆ.

ಹೆಚ್ಚಿದ ಜನಪ್ರಿಯತೆ
ಬಿಗ್‌ಬಾಸ್ (Bigg Boss) ಮನೆಯಿಂದ ಹೊರಕ್ಕೆ ಬಂದ ಮೇಲೆ ಕಾಕ್ರೋಚ್ ಸುಧಿ ಇನ್ನೂ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಯಾರೇ ಆಗಲೀ, ಯಾವುದೇ ಕ್ಷೇತ್ರದಲ್ಲಿ ಎಷ್ಟೇ ಸಾಧನೆ ಮಾಡಿದ್ದರೂ ಒಂದಷ್ಟು ದಿನ ಬಿಗ್ಬಾಸ್ಗೆ ಹೋದರೆ ಅವರ ಲೆವೆಲ್ಲೇ ಬೇರೆಯಾಗಿ ಹೋಗುತ್ತದೆ. ಅವರ ಹೆಸರಿನ ಜೊತೆ ಬಿಗ್‌ಬಾಸ್ ಸೇರಿಕೊಳ್ಳುತ್ತದೆ.
ಕೀರ್ತಿ ಹೆಚ್ಚಳ
ಮುಂದಿನ ಸೀಸನ್ ಬರುವವರೆಗೂ ಈ ಬಿಗ್‌ಬಾಸ್ ಖ್ಯಾತಿ ಇದ್ದರೂ, ಆ ಒಂದು ವರ್ಷದಲ್ಲಿ ಕೆಲವು ಸ್ಪರ್ಧಿಗಳ ಅದೃಷ್ಟವೇ ಬದಲಾಗುವುದು ಇದೆ. ಅದೇ ರೀತಿ ಇದಾಗಲೇ ಸಿನಿಮಾಗಳಲ್ಲಿ ಸಾಕಷ್ಟು ಹೆಸರು ಮಾಡಿರೋ ಕಾಕ್ರೋಚ್ ಸುಧಿ ಅವರು, ಸದ್ಯ ಇನ್ನಷ್ಟು ಕೀರ್ತಿ ಹೆಚ್ಚಿಸಿಕೊಂಡಿದ್ದಾರೆ.
ಸುಧಿ ಪತ್ನಿ ಮಾತು
ತಮ್ಮ ಪತಿ ಇಷ್ಟು ಬೇಗ ಹೊರಕ್ಕೆ ಬರಲು ಅಶ್ವಿನಿ ಗೌಡ ಮತ್ತು ಜಾಹ್ನವಿ ಕಾರಣದ ಎಂದು ಅವರ ಪತ್ನಿ ಹೇಳುತ್ತಿದ್ದಾರೆ. ಇನ್ನಷ್ಟು ಎಫರ್ಟ್ ಹಾಕಿ ತಮ್ಮ ಆಟವನ್ನು ಆಡಬೇಕಿತ್ತು. ಅವರಲ್ಲಿ ಇನ್ನು ಹೆಚ್ಚು ಸಾಮರ್ಥ್ಯವಿತ್ತು. ಅಶ್ವಿನಿ ಗೌಡ ಮತ್ತು ಜಾಹ್ನವಿ ಗುಂಪಿನಿಂದ ಹೊರಗೆ ಬಂದು ಆಟ ಆಡಬೇಕಿತ್ತು. ಆ ಗುಂಪಿನಿಂದ ಹೊರ ಬಂದು ಆಟವಾಡಿದ್ರೆ ಇನ್ನೊಂದಿಷ್ಟು ದಿನ ಬಿಗ್‌ಬಾಸ್ ಮನೆಯಲ್ಲಿರುತ್ತಿತ್ತು ಎಂದು ಸುಧಿ ಅವರ ಪತ್ನಿ ಹೇಳಿದರು.
ಎಷ್ಟು ಹಣ ಸಿಕ್ಕಿತು?
ಅದೇನೇ ಇದ್ದರೂ ಇದೀಗ ಸುಧಿ ಅವರು ಬಿಗ್‌ಬಾಸ್ ಮನೆಯಲ್ಲಿನ ಕೆಲವು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಮೊದಲಿಗೆ ಎದುರಾಗುವ ಪ್ರಶ್ನೆ ಬಿಗ್‌ಬಾಸ್ ಮನೆಯಿಂದ ಎಷ್ಟು ಸಂಭಾವನೆ ಪಡೆದುಕೊಂಡರು ಎನ್ನುವ ಬಗ್ಗೆ. ಆದರೆ ಬಿಗ್ಬಾಸ್ನ ಷರತ್ತುಗಳಲ್ಲಿ ಇದೂ ಒಂದಾಗಿರುವ ಕಾರಣ, ಯಾರೂ ಸಂಭಾವನೆ ಬಗ್ಗೆ ಬಾಯಿ ಬಿಡುವುದಿಲ್ಲ.
ಸಂಭಾವನೆ ಬಗ್ಗೆ
ಸುಧಿ ಅವರು ಕೂಡ ತುಂಬಾ ಚೆನ್ನಾಗಿ ಸಂಭಾವನೆ ಕೊಟ್ಟಿದ್ದಾರೆ. ಅದರಲ್ಲಿ ಯಾರಿಗೂ ಮೋಸ ಮಾಡುವುದಿಲ್ಲ. ನಾವು ಹೇಗೆ, ಎಷ್ಟು ಆಡಿರುತ್ತೇವೆಯೋ ಅಷ್ಟು ಚೆನ್ನಾಗಿ ಸಂಭಾವನೆ ಸಿಗುತ್ತದೆ ಎಂದಿದ್ದಾರೆ.
50 ಕೋಟಿ ರೂ ಕೊಟ್ಟರೂ...
ಅದೇ ವೇಳೆ ನೀವು ಒಂದಷ್ಟು ಲಕ್ಷ ಕೊಟ್ಟರೆ ವಿವಿಧ ದೇಶಗಳಿಗೆ ಟೂರ್ ಹೋಗಬಹುದು. ಆದರೆ 50 ಕೋಟಿ ರೂಪಾಯಿ ಕೊಡ್ತೇನೆ ಎಂದರೂ ಬಿಗ್‌ಬಾಸ್ ಮನೆಯೊಳಕ್ಕೆ ಹೋಗಲು ಆಗುವುದಿಲ್ಲ. ಎಷ್ಟೇ ಇನ್ಫ್ಲುಯೆನ್ಸ್ ಮಾಡಿದ್ರೂ ಅದು ಸಾಧ್ಯವಿಲ್ಲ. ಆ ಅದೃಷ್ಟ ನನಗೆ ಒಲಿದಿದೆ. ಅದಕ್ಕಿಂತ ನನಗೆ ಸಂಭಾವನೆ ಮುಖ್ಯವಲ್ಲ ಎಂದಿದ್ದಾರೆ.