- Home
- Entertainment
- TV Talk
- ನಾನೇನೂ ಮೂರು ಬಿಟ್ಟೋಳಲ್ಲ, ಮರ್ಯಾದೆ ಇರೋಳು; ನನ್ನ ದೇಹ- ನನ್ನ ಬಟ್ಟೇರಿ: Bigg Boss ವೈಷ್ಣವಿ ಗರಂ
ನಾನೇನೂ ಮೂರು ಬಿಟ್ಟೋಳಲ್ಲ, ಮರ್ಯಾದೆ ಇರೋಳು; ನನ್ನ ದೇಹ- ನನ್ನ ಬಟ್ಟೇರಿ: Bigg Boss ವೈಷ್ಣವಿ ಗರಂ
ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆದ ವೈಷ್ಣವಿ ಕೌಂಡಿನ್ಯ, ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಬಟ್ಟೆಯ ಬಗ್ಗೆ ಕಮೆಂಟ್ ಮಾಡಿದವರಿಗೆ ತಿರುಗೇಟು ನೀಡಿರುವ ಅವರು, ಕಿರಣ್ ಶಾಸ್ತ್ರಿ ಅವರನ್ನು ಗಿಲ್ಲಿ ನಟನಿಗೆ ಹೋಲಿಸಬೇಡಿ ಎಂದು ಕಿಡಿಕಾರಿದ್ದಾರೆ.

ಬಿಗ್ಬಾಸ್ನಿಂದ ಎಲಿಮಿನೇಟ್
ಬಿಗ್ಬಾಸ್ನಲ್ಲಿ ಎಂಟ್ರಿ ಪಡೆದುಕೊಂಡಿದ್ದ ವೈಷ್ಣವಿ ಕೌಂಡಿನ್ಯ (Vaishanavi Koundinya) ಬಿಗ್ಬಾಸ್ನಿಂದ ಎಲಿಮಿನೇಟ್ ಆಗಿ ಹೊರಕ್ಕೆ ಬಂದಿದ್ದಾರೆ. ಬಿಗ್‌ಬಾಸ್ ಜರ್ನಿಯ ಕುರಿತು ಮಾತನಾಡಿರುವ ಅವರು, ಅಲ್ಲಿ ಆಗಿರುವ ಅನುಭವಗಳ ಬಗ್ಗೆ ಹಂಚಿಕೊಂಡಿದ್ದಾರೆ. ಕೆಲವು ಸ್ಪರ್ಧಿಗಳಿಂದ ಆಗಿರುವ ಅವಮಾನ, ಬಾಯಿಗೆ ಬಂದಂತೆ ಮಾತನಾಡುತ್ತಿರುವ ಬಗ್ಗೆಯೂ ನಟಿ ಗರಂ ಆಗಿದ್ದಾರೆ.
ಮೂರು ಬಿಟ್ಟು ಬಂದಿದ್ದೀವಿ ಅಂತಾರೆ
ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ನಟಿ, ತಮ್ಮನ್ನು ಟ್ರೋಲ್ ಮಾಡುವವರಿಗೆ ಹಾಗೂ ಬಿಗ್‌ಬಾಸ್ ಮನೆಯೊಳಕ್ಕೆ ತಮ್ಮ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿದವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೂರೂ ಬಿಟ್ಟು ಬಂದಿದ್ದೀನಿ ಅಂತ ಹೇಳ್ತಾರೆ ಗೊತ್ತಾ? ಅಂಥ ಜನಗಳಿಗೆ ನಾನು ಏನೂ ಹೇಳಲು ಆಗುವುದಿಲ್ಲ. ನಾವು ಮೂರು ಬಿಟ್ಟು ಅಲ್ಲಿ ನಿಂತಿಲ್ಲ, ಹಾಗೆ ನಿಲ್ಲಲೂ ಆಗುವುದಿಲ್ಲ ಎಂದು ನೊಂದು ನುಡಿದಿದ್ದಾರೆ ವೈಷ್ಣವಿ. ನಾವು ತುಂಬಾ ಕಷ್ಟಪಟ್ಟು ಮರ್ಯಾದೆ ಗಳಿಸಿಕೊಂಡು ಬಂದಿರ್‍ತೇವೆ. ಆದರೆ ಮೂರು ಬಿಟ್ಟು ನಿಲ್ಲಕ್ಕೆ ನಾವಲ್ಲಿ ನಿಂತಿಲ್ಲ. ಹಾಗೆ ಹೇಳಿದ್ರೆ ನೋವಾಗತ್ತೆ ಎಂದಿದ್ದಾರೆ.
ಕುಟುಂಬ, ಫ್ಯಾಮಿಲಿ ಇದೆ
ನಮಗೆ ಅಂತ ಒಂದು ಕುಟುಂಬ ಇದೆ, ಫ್ಯಾಮಿಲಿ ಇದೆ. ನಾವು ಊರು ಮರ್ಯಾದೆ ಉಳಿಸಕೊಬೇಕಾಗುತ್ತೆ. ಆದರೆ ಕೆಲವೊಮ್ಮೆ ಕೆಟ್ಟದ್ದಾಗಿ ಮಾತನಾಡುತ್ತಾರೆ. ಎಲ್ಲರ ಮನೆಯಲ್ಲಿಯೂ ಹೆಣ್ಣು ಮಕ್ಕಳಿಗೆ ತಗ್ಗಿ ಬಗ್ಗಿ ನಡೆದುಕೊಂಡು ಹೋಗಲು ಹೇಳಿರುತ್ತಾರೆ. ಆದರೆ ತುಂಬಾ ಜನಕ್ಕೆ ಮುಜುಗರ ಆಗುವ ರೀತಿ ಮಾತನಾಡ್ತಾರೆ. ಅದು ಸರಿಯಲ್ಲ ಎಂದು ನುಡಿದಿದ್ದಾರೆ ವೈಷ್ಣವಿ.
ನನ್ನ ದೇಹ, ನನ್ನ ಬಟ್ಟೆ
ನನ್ನ ದೇಹ, ಅದಕ್ಕೆ ಯಾವ ಬಟ್ಟೆ ಹಾಕಬೇಕು, ಹಾಕಬಾರದು ಎಂದು ನನಗೆ ಗೊತ್ತಿದೆ. ನನ್ನ ಬಟ್ಟೆಗೆ ಯಾವೊಬ್ಬನೂ ಒಂದು ಪೈಸೆಯನ್ನೂ ಕೊಟ್ಟಿಲ್ಲ. ಅವರು ಹೇಳಿದಂತೆ ನಾನ್ಯಾಕೆ ಕೇಳಬೇಕು. ಯಾವ್ ನನ್ ಮಗ.... ಹೇಳಿದ್ದಾನೆ ಅಂತ ನಾನು ಕೇಳಬೇಕು. ನನಗೆ ಇಷ್ಟ ಆಗಿರೋ ಬಟ್ಟೆ ತೊಟ್ಟಿಕೊಳ್ಳುವ ಅಧಿಕಾರ ನನಗೆ ಇದೆ ಎಂದು ಗರಂ ಆಗಿ ಹೇಳಿದ್ದಾರೆ.
ಗಿಲ್ಲಿ ನಟನ ಹೋಲಿಕೆ
ಕಿರಣ್ ಶಾಸ್ತ್ರಿ ಅವರನ್ನು ಗಿಲ್ಲಿ ನಟನಿಗೆ ಹೋಲಿಸ್ತಾರೆ. ಆದರೆ ದಯವಿಟ್ಟು ಹಾಗೆ ಮಾಡಬೇಡಿ ಎಂದಿದ್ದಾರೆ ನಟಿ. ಕಿರಣ್ ಶಾಸ್ತ್ರಿ ಅವರನ್ನು ನೋಡಿದರೆ ಸಿಕ್ಕಾಪಟ್ಟೆ ಕೋಪ ಬರತ್ತದೆ. ಎಲ್ಲಿಯ ಗಿಲ್ಲಿ, ಎಲ್ಲಿಯ ಕಿರಣ್ ಶಾಸ್ತ್ರಿ ಎಂದು ಪ್ರಶ್ನಿಸಿದ್ದಾರೆ.
ಗಿಲ್ಲಿ ಕೆಟ್ಟದ್ದು ಮಾತನಾಡಿದ್ದನ್ನು ನೋಡ್ತೀರಾ
ಗಿಲ್ಲಿ ನಟ ಯಾವತ್ತು ಕೆಟ್ಟ ಕೆಟ್ಟದಾಗಿ ಮಾತಾಡಿರೋದು ನೋಡಿದ್ದೀರಾ? ಯಾರನ್ನಾದರೂ ಅವಮಾನ ಮಾಡೋದು ನೋಡಿದ್ದೀರಾ ಅಥವಾ ಯಾರದೋ ಕೆರಿಯರ್ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತಾಡೋದು ನೋಡಿದ್ದೀರಾ? ಅವರಿಗೂ ಇವರಿಗೂ ಸಂಬಂಧನೇ ಇಲ್ಲ. ಹೋಲಿಕೆ ಮಾಡಲು ಸಾಧ್ಯನೇ ಇಲ್ಲ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

