- Home
- Entertainment
- TV Talk
- Bigg Bossನಿಂದ ನಟಿ ವೈಷ್ಣವಿ ಕೌಂಡಿಲ್ಯಗೆ ಸಿಕ್ಕ ಹಣವೆಷ್ಟು? ನೀವೇ ನನ್ನ ಕ್ರಷ್ ಎಂದಾಗ ಕಿಚ್ಚ ಹೇಳಿದ್ದೇನು
Bigg Bossನಿಂದ ನಟಿ ವೈಷ್ಣವಿ ಕೌಂಡಿಲ್ಯಗೆ ಸಿಕ್ಕ ಹಣವೆಷ್ಟು? ನೀವೇ ನನ್ನ ಕ್ರಷ್ ಎಂದಾಗ ಕಿಚ್ಚ ಹೇಳಿದ್ದೇನು
ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ನಟಿ ವೈಷ್ಣವಿ ಕೌಂಡಿನ್ಯ ತಮ್ಮ ಜರ್ನಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸುದೀಪ್ ಅವರನ್ನು ತಮ್ಮ ಕ್ರಶ್ ಎಂದು ಹೇಳಿರುವ ಅವರು, ಸ್ಪಾನ್ಸರ್‌ಗಳಿಂದ 3.5 ಲಕ್ಷ ರೂ. ಬಹುಮಾನ ಪಡೆದಿದ್ದಾರೆ. ಮುಂದೆ ಸೀರಿಯಲ್‌ಗಳಲ್ಲಿ ನಟಿಸುವುದಾಗಿ ಅವರು ತಿಳಿಸಿದ್ದಾರೆ.

ವೈಷ್ಣವಿ ಕೌಂಡಿನ್ಯ
ದೇಹವೆಲ್ಲಾ ಪ್ರದರ್ಶನ ಮಾಡುವ ಉಡುಗೆ ತೊಟ್ಟು ಸಿಕ್ಕಾಪಟ್ಟೆ ಟ್ರೋಲ್ಗೆ ಒಳಗಾಗುವ ಮೂಲಕ ಬಿಗ್ಬಾಸ್ನಲ್ಲಿ ಎಂಟ್ರಿ ಪಡೆದುಕೊಂಡಿದ್ದ ವೈಷ್ಣವಿ ಕೌಂಡಿನ್ಯ (Vaishanavi Koundinya) ಬಿಗ್ಬಾಸ್ನಿಂದ ಎಲಿಮಿನೇಟ್ ಆಗಿ ಹೊರಕ್ಕೆ ಬಂದಿದ್ದಾರೆ. ಬಿಗ್‌ಬಾಸ್ ಜರ್ನಿಯ ಕುರಿತು ಮಾತನಾಡಿರುವ ಅವರು, ಅಲ್ಲಿ ಆಗಿರುವ ಅನುಭವಗಳ ಬಗ್ಗೆ ಹಂಚಿಕೊಂಡಿದ್ದಾರೆ.
ಗುಟ್ಟು ಬಿಟ್ಟುಕೊಡಲ್ಲ
ಸಾಮಾನ್ಯವಾಗಿ ಬಿಗ್‌ಬಾಸ್ ಸ್ಪರ್ಧಿಗಳು ಯಾರೂ ಸಂಭಾವನೆಯ ಬಗ್ಗೆ ಹೇಳುವುದಿಲ್ಲ. ಏಕೆಂದರೆ ಅದು ಅವರಿಗೆ ವಿಧಿಸುವ ಮೊದಲ ಷರತ್ತು ಆಗಿರುತ್ತದೆ. ಸಂಭಾವನೆ ವಿಷಯದ ಗುಟ್ಟನ್ನು ಬಿಟ್ಟುಕೊಡಬಾರದು ಎನ್ನುವುದು. ಏಕೆಂದರೆ, ಅವರ ಅರ್ಹತೆ, ಟ್ಯಾಲೆಂಟ್, ಅವರಿಗೆ ಇರುವ ಅಭಿಮಾನಿಗಳ ಬಳಗ, ಬಿಗ್‌ಬಾಸ್ ಮನೆಯೊಳಕ್ಕೆ ಹೋದರೆ ಅವರಿಗೆ ಹೊರಗೆ ಇದ್ದಾಗ ಆಗುವ ಹಣದ ನಷ್ಟವನ್ನು ಭರಿಸುವಿಕೆ... ಹೀಗೆ ಒಬ್ಬೊಬ್ಬ ಸ್ಪರ್ಧಿಗೆ ಒಂದೊಂದು ರೀತಿಯ ಸಂಭಾವನೆ ಫಿಕ್ಸ್ ಮಾಡಲಾಗಿರುತ್ತದೆ.
ಸಂಭಾವನೆ
ಅದೇ ರೀತಿ ವೈಷ್ಣವಿ ಅವರಿಗೂ ಸಂಭಾವನೆ ಫಿಕ್ಸ್ ಮಾಡಿದ್ದು, ಅದನ್ನೇನೂ ಅವರು ರಿವೀಲ್ ಮಾಡಲಿಲ್ಲ. ಆದರೆ, ನಿನ್ನೆ ಅರ್ಥಾತ್ ಸೆ.27ರ ಸಂಚಿಕೆಯಲ್ಲಿ ವೈಷ್ಣವಿ ಅವರನ್ನ ವೇದಿಕೆ ಮೇಲೆ ಕರೆದ ಸುದೀಪ್ ಅವರು ನಟಿಗೆ ಬಹುಮಾನ ನೀಡಿದ್ದಾರೆ. ಅದರಲ್ಲಿ ವಿವಿಧ ಸ್ಪಾನ್ಸರ್ಸ್‌ಗಳಿಂದ ಬಂದಿರುವ ಬಹುಮಾನವೇ 3ಲಕ್ಷದ 50ಸಾವಿರ ರೂಪಾಯಿ ಆಗಿದೆ. ಆದರೆ ಬಿಗ್ಬಾಸ್ನಿಂದ ಬಂದಿರುವ ಸಂಭಾವನೆ ರಿವೀಲ್ ಆಗಲಿಲ್ಲ.
ನೀವೇ ನನ್ನ ಕ್ರಶ್
ಇನ್ನು, ಸುದೀಪ್ ಅವರ ಜೊತೆ ಮಾತನಾಡಿದಾಗ, ವೈಷ್ಣವಿ ಅವರು, ನೀವೇ ನನ್ನ ಕ್ರಶ್ ಎಂದರು. ನಾನು 4ನೇ ಕ್ಲಾಸ್‌ನಲ್ಲಿ ಇರುವಾಗಿನಿಂದಲೂ ನಿಮ್ಮ ಮೇಲೆ ನನಗೆ ಕ್ರಶ್ ಇದೆ ಸರ್, ನಾನು ನಿಮ್ಮನ್ನ ಒಂದು ಬಾರಿ ಅಪ್ಪಿ ಕೊಳ್ಳಬಹುದೇ?” ಎಂದಾಗ, ಸುದೀಪ್, “ಪಚ್ಚ ಅಂತ ಗೊತ್ತಲ್ಲ ಅಮ್ಮ, ಆ ರೀತಿ ನನ್ನ ಅಪ್ಪಚ್ಚಿ ಮಾಡಬೇಡಿ” ಎಂದು ತಮಾಷೆ ಮಾಡುತ್ತಾ ತಲೆಬಾಗಿದರು.
ಮುಳ್ಳಾಗಿದ್ದು ಏನು?
ಇನ್ನು, ಸುದೀಪ್, ನಿಮ್ಮ ಜರ್ನಿಯಲ್ಲಿ ಮುಳ್ಳಾಗಿದ್ದು ಏನು ಎಂದು ಪ್ರಶ್ನಿಸಿದಾಗ, ವೈಷ್ಣವಿ, "ನಾನು ಚೈಲ್ಡ್ ರೀತಿ ಆಡುತ್ತೇನೆ ನಿಜ. ನನಗೆ ಯಾರನ್ನು ಮ್ಯಾನುಪ್ಲೇಟ್ ಮಾಡಲು ಬರುವುದಿಲ್ಲ ಸರ್. ಮೊದಲ ವಾರದ ತಪ್ಪುಗಳನ್ನ ತಿದ್ದಿಕೊಂಡು ಈ ವಾರ ನನ್ನ ಬಗ್ಗೆ ನಾನು ಸ್ಟ್ಯಾಂಡ್ ತಗೋಳ್ಳಿಕ್ಕೆ ಶುರು ಮಾಡಿದ್ದೆ, ಅಷ್ಟರಲ್ಲಿ ನಿಮ್ಮ ಮುಂದೆ ಸ್ಟ್ಯಾಂಡ್ ಆಗ್ಬಿಟ್ಟಿದ್ದೀನಿ" ಎಂದು ನಕ್ಕರು
ವೈಷ್ಣವಿ ಮುಂದಿನ ಪ್ಲ್ಯಾನ್
ಕಿಚ್ಚ ಸುದೀಪ್ ಅವರು ವೈಷ್ಣವಿ ಅವರ ಫ್ಯೂಚರ್ ಪ್ಲ್ಯಾನ್ ಕುರಿತು ಹೇಳಿದಾಗ, ನಟಿ, "ಸೀರಿಯಲ್ ನಟನೆಯನ್ನ ಮುಂದುವರೆಸಿಕೊಂಡು ಹೋಗುವುದಾಗಿ" ಉತ್ತರ ನೀಡಿದರು. ಅಂದಹಾಗೆ, ವೈಷ್ಣವಿ, ಈ ಹಿಂದೆ ಮಿಥುನ ರಾಶಿ, ಪ್ರೇಮಕಾವ್ಯ ಸೇರಿದಂತೆ ಕನ್ನಡ, ತೆಲುಗು, ಮಲಯಾಳಂ ಕಿರುತೆರೆಯಲ್ಲಿ ಹೆಸರು ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

