- Home
- Entertainment
- TV Talk
- ಒಂದೂ ಸೌಂಡ್ ಮಾಡದೆ ಹೊಸ ಮೈಲಿಗಲ್ಲು ಸೃಷ್ಟಿಸಿದ Ninna Jothe Nanna Kathe Serial: ಇದು ಕನ್ನಡದ ತಾಕತ್ತು
ಒಂದೂ ಸೌಂಡ್ ಮಾಡದೆ ಹೊಸ ಮೈಲಿಗಲ್ಲು ಸೃಷ್ಟಿಸಿದ Ninna Jothe Nanna Kathe Serial: ಇದು ಕನ್ನಡದ ತಾಕತ್ತು
Ninna Jothe Nanna Kathe serial: ಕೆಲ ಧಾರಾವಾಹಿಗಳು ಟ್ರೋಲ್ ವಿಚಾರಕ್ಕೋ/ ಇನ್ಯಾವುದೋ ವಿಚಾರಕ್ಕೋ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತವೆ, ಆದರೆ TRP ಕಡಿಮೆ ಇರುತ್ತದೆ. ಇಲ್ಲೊಂದು ಸೀರಿಯಲ್ ಸೋಶಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಸೌಂಡ್ ಮಾಡದಿದ್ರೂ ಟಿಆರ್‌ಪಿಯಲ್ಲಿ ಕಮಾಲ್ ಮಾಡುತ್ತಿದೆ.

ವಾರದಿಂದ ವಾರಕ್ಕೆ TRP ಜಾಸ್ತಿ ಆಯ್ತು
ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿ ಪ್ರಸಾರ ಆಗುತ್ತಿದೆ. ಸೀರಿಯಲ್ ಶುರು ಆದಾಗಿನಿಂದ ಈ ಸೀರಿಯಲ್ ಒಳ್ಳೆಯ ವೀಕ್ಷಕರನ್ನು ಹೊಂದಿದೆ. ಈಗ ಈ ವೀಕ್ಷಕರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ವಾರದಿಂದ ವಾರಕ್ಕೆ ಇದರ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಕನ್ನಡದ ಸ್ವಮೇಕ್ ಕಥೆ ಎನ್ನೋದು ಖುಷಿಯ ವಿಷಯ.
ಈ ಧಾರಾವಾಹಿ ಕಥೆ ಏನು?
ಅಜಿತ್ ರಾಮ್‌ನಾರಾಯಣ್, ಭೂಮಿ ಸುತ್ತ ನಡುವೆ ನಡೆಯುವ ಕಥೆ ಇದು. ಅಜಿತ್ ಪೊಲೀಸ್ ಇನ್‌ಸ್ಪೆಕ್ಟರ್ ಆದರೆ, ಭೂಮಿ ಅವನ ಪೊಲೀಸ್ ಸ್ಟೇಶನ್ ಪಕ್ಕದಲ್ಲಿ ಟೀ ಮಾರುವ ಹುಡುಗಿ. ಅತ್ತೆ ಮಗಳನ್ನು ಮದುವೆ ಆಗಲು ಇಷ್ಟಪಡದ ಅಜಿತ್ ಪ್ಲ್ಯಾನ್ ಮಾಡಿ ಭೂಮಿಯನ್ನು ಕಾಂಟ್ರ್ಯಾಕ್ಟ್ ಮ್ಯಾರೇಜ್ ಆಗುತ್ತಾನೆ. ಇದು ಒಂದು ವರ್ಷದ ಮದುವೆ ಒಪ್ಪಂದ. ತನ್ನನ್ನೇ ಮದುವೆ ಆಗಬೇಕು ಎಂದು ಹಠ ಹಿಡಿದು ಕೂತ ಅತ್ತೆ ಮಗಳಿಂದ ದೂರ ಆಗುವ ಯತ್ನ.
ಭೂಮಿ ಯಾರ ಮಗಳು ಎನ್ನೋ ಸತ್ಯ ಗೊತ್ತಿಲ್ಲ
ಈ ಒಂದು ವರ್ಷದಲ್ಲಿ ಅತ್ತೆ ಮಗಳಿಗೆ ಬೇರೆ ಹುಡುಗಿಯನ್ನು ಹುಡುಕಿ ಮದುವೆ ಮಾಡಬೇಕು ಎನ್ನೋದು ಅವನ ದೂರದ ಯೋಚನೆ ಆಗಿತ್ತು. ಆದರೆ ಭೂಮಿಯ ಒಳ್ಳೆಯನ ಇಡೀ ಮನೆಯವರ ಮನಸ್ಸು ಗೆದ್ದಿದೆ, ಎಲ್ಲರೂ ಇವಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾರೆ. ತನ್ನ ಮಾವ ಶ್ರವಣ್ ಅವರ ಕಳೆದು ಹೋದ ಮಗಳು ಭೂಮಿ ಎನ್ನೋದು ಯಾರಿಗೂ ಗೊತ್ತೇ ಇಲ್ಲ. ಇನ್ನೋರ್ವ ಅತ್ತೆ ದೇವಯಾನಿ ಕುತಂತ್ರದಿಂದಲೇ ಶ್ರವಣ್, ತನ್ನ ಹೆಂಡತಿ, ಮಗಳಿಂದ ದೂರ ಇರುವ ಹಾಗೆ ಆಯ್ತು.
ಭೂಮಿ ಜೊತೆ ಪ್ರೀತಿಯಲ್ಲಿ ಬಿದ್ದ ಅಜಿತ್
ಮೊದಲು ಅಜಿತ್, ಸಾಹಿತ್ಯಳನ್ನು ಪ್ರೀತಿ ಮಾಡುತ್ತಲಿದ್ದ, ಅವಳು ತೀರಿ ಹೋದಳು. ಅವಳ ನೆನಪಿನಲ್ಲಿ ಸಾಯೋವರೆಗೂ ಬದುಕುವೆ ಎನ್ನುತ್ತಿದ್ದ ಅಜಿತ್, ಈಗ ಭೂಮಿಯನ್ನು ಪ್ರೀತಿಸಲು ಆರಂಭಿಸಿದ್ದಾನೆ, ಅವಳಿಗೆ ತನ್ನ ಪ್ರೀತಿಯನ್ನು ಹೇಳಿಕೊಂಡರೂ ಕೂಡ ಭೂಮಿ ನಂಬಲು ರೆಡಿ ಇಲ್ಲ. ಮನೆಯವರ ಮುಂದೆ ಗಂಡ-ಹೆಂಡತಿ ಎಂದು ನಾಟಕ ಮಾಡುವ ನಾವು ರಿಯಲ್ ಆಗಿ ಗಂಡ ಹೆಂಡತಿ ಆಗಿ ಬದುಕಲು ಸಾಧ್ಯವಿಲ್ಲ ಎಂದು ಅಂದುಕೊಂಡಿದ್ದಾಳೆ.
ಮುಂದೆ ಏನಾಗಲಿದೆ?
ಈಗ ಭೂಮಿಗೆ ತನ್ನ ಪ್ರೀತಿಯನ್ನು ಹೇಳಿಕೊಳ್ಳಬೇಕು ಎಂದು ಅಜಿತ್ ಒದ್ದಾಡುತ್ತಿದ್ದರೆ, ಅತ್ತ ರಿಪೋರ್ಟ್ ಬದಲಾಗಿದೆಯೋ ಏನೋ ಭೂಮಿ ತಾಯಿಯಾಗುತ್ತಿದ್ದಾಳೆ ಎನ್ನುವ ರಿಪೋರ್ಟ್ ಬಂದಿದೆ. ಮನೆಯವರು ತಾನು ಗರ್ಭಿಣಿ ಎಂದು ನಂಬಿಕೊಂಡು ಖುಷಿಯಲ್ಲಿದ್ದಾರೆ, ನಾಳೆ ಸತ್ಯ ಗೊತ್ತಾದರೆ ಒದ್ದಾಡುತ್ತಾರೆ ಎಂದು ಭೂಮಿ ಚಿಂತೆಯಲ್ಲಿದ್ದಾಳೆ. ಭೂಮಿ-ಅಜಿತ್ ಒಪ್ಪಂದದ ವಿಷಯ ಮನೆಯವರಿಗೆ ಗೊತ್ತಾದರೆ ಏನಾಗುವುದು? ಭೂಮಿ ಯಾರ ಮಗಳು ಎನ್ನೋ ಸತ್ಯ ಹೊರಬೀಳುವುದು ಯಾವಾಗ? ದೇವಯಾನಿ ಕುತಂತ್ರಗಳು ಬಯಲಾಗೋದು ಯಾವಾಗ ಎಂಬ ಪ್ರಶ್ನೆ ಎದುರಾಗಿದೆ.
ವೀಕ್ಷಕರ ಬಯಕೆ ಏನು?
ಅಂದಹಾಗೆ ಭೂಮಿ ಹಾಗೂ ಅಜಿತ್ ಅವರ ಕೋಳಿ ಜಗಳಗಳು, ಮನೆಯವರ ಮುಂದೆ ನಾವು ಅನೋನ್ಯ ಗಂಡ-ಹೆಂಡತಿ ಎಂದು ನಾಟಕ ಮಾಡೋದು ಅನೇಕರಿಗೆ ಇಷ್ಟ ಆಗಿದೆ. ಇವರಿಬ್ಬರು ಧಾರಾವಾಹಿಯಲ್ಲಿ ಒಂದಾಗಲಿ ಎಂದು ವೀಕ್ಷಕರು ಬಯಸುತ್ತಿದ್ದಾರೆ. ಮುಂದೆ ಏನಾಗುವುದೋ ಎನೋ! ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಸೀರಿಯಲ್ ನಂ 1 ಸ್ಥಾನದಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
