ಸೆರಗು ಎಲ್ಲಮ್ಮ? ಸರಿಯಾಗಿ ಕೂರಮ್ಮ; ನಿವೇದಿತಾ ಗೌಡ ನಕ್ಕರೂ ಕಾಲೆಳೆದ ನೆಟ್ಟಿಗರು!
ಪದೇ ಪದೇ ಟ್ರೋಲ್ ಆಗುತ್ತಿದ್ದಾಳೆ ಬಾರ್ಬಿ ಡಾಲ್. ಯಾಕೆ ಯಾರ ಬಗ್ಗೆನೂ ತಲೆ ಕೆಡಿಸಿಕೊಂಡಿಲ್ಲ ಅನ್ನೋದೆ ದೊಡ್ಡ ಪ್ರಶ್ನೆ....

ಕನ್ನಡ ಕಿರುತೆರೆಯ ಬಾರ್ಬಿ ಡಾಲ್ ನಿವೇದಿತಾ ಗೌಡ ಡಿವೋರ್ಸ್ ಪಡೆದುಕೊಂಡ ನಂತರ ಏನೇ ಕೆಲಸ ಮಾಡಿದರೂ ಅದರಲ್ಲಿ ಒಂದು ತಪ್ಪು ಅಥವಾ ನೆಗೆಟಿವ್ ಹುಡುಕಿ ನೆಟ್ಟಿಗರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
ಗಿಚ್ಚಿ ಗಿಲಿಗಿಲಿ ಕಾಮಿಡಿ ರಿಯಾಲಿಟಿ ಶೋ ನಂತರ ನಿವೇದಿತಾ ಗೌಡ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಷ್ಠಿತ ಬ್ರಾಂಡ್‌ಗಳ ಜೊತೆ ಸೇರಿಕೊಂಡು ಫೋಟೋಶೂಟ್ ಮಾಡುತ್ತಿದ್ದರು. ಇದೊಂದು ರೀತಿಯಲ್ಲಿ ಆನ್‌ಲೈನ್ ಜಾಹೀರಾತು ಎನ್ನಬಹುದು.
ಮಾಯಾ ಡಿಸೈನರ್ ಸ್ಟುಡಿಯೋ ಅವರ ಕಿತ್ತಲೆ ಬಣ್ಣದ ಫ್ಲೋರಲ್ ಇಂಡೋ ವೆಸ್ಟ್ರನ್ ಗೌನ್ ಧರಿಸಿ ನಿವೇದಿತಾ ಗೌಡ ಪೋಸ್ ಕೊಟ್ಟಿದ್ದಾರೆ. ರೂಮಿನಲ್ಲಿ ಹಾಸಿಗೆ ಬಳಿ ಕುಳಿತು ಕ್ಯಾಂಡಿಡ್ ಪೋಸ್ ನೀಡಿದ್ದಾರೆ.
ಇಲ್ಲಿ ಬ್ಲೌಸ್ ಮತ್ತು ಲಂಗ ಧರಿಸಿರುವ ಕಾರಣ ಕೆಲವರು ಗರಂ ಆಗಿದ್ದಾರೆ. ಒಂದು ಸೆರಗು ಧರಿಸಬೇಕು ಇಲ್ಲವಾದರೆ ಸರಿಯಾಗಿ ಕೂರಬೇಕು, ನಿಮ್ಮನ್ನು ನೋಡಿ ನಮ್ಮ ಮನೆ ಮಕ್ಕಳು ಕಲಿಯುವುದು ಬರೀ ಕೆಟ್ಟದ್ದು ಎಂದು ಕಾಮೆಂಟ್ ಮಾಡಿದ್ದರು.
ಇತ್ತೀಚಿನ ದಿನಗಳ ಟ್ರೋಲ್‌ಗಳು ಹೆಚ್ಚಾಗುತ್ತಿದೆ ಆದರೆ ನಿವೇದಿತಾ ಗೌಡ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕೂಲ್ ಆಗಿ ತಮ್ಮ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಅಲ್ಲದೆ ಡಿವೋರ್ಸ್ ನಂತರ ನಿವೇದಿತಾ ಮುಖದಲ್ಲಿ ಒಂದು ರೀತಿಯ ಗ್ಲೋ ಕಾಣಿಸುತ್ತಿದೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. 2 ಮಿಲಿಯನ್ ಫಾಲೋರ್ಸ್ ಹೊಂದಿರುವ ನಿವೇದಿತಾ ಏನೇ ಅಪ್ಲೋಡ್ ಮಾಡಿದ್ದರು ವೈರಲ್ ವೈರಲ್ ವೈರಲ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.