- Home
- Entertainment
- TV Talk
- Bigg Boss ಕಾರ್ತಿಕ್ ಮಹೇಶ್- ನಮ್ರತಾ ಗೌಡ ಶೀಘ್ರ ಮದುವೆ ? ಕೊನೆಗೂ ಮೌನ ಮುರಿದ ನಟಿ ಹೇಳಿದ್ದೇನು?
Bigg Boss ಕಾರ್ತಿಕ್ ಮಹೇಶ್- ನಮ್ರತಾ ಗೌಡ ಶೀಘ್ರ ಮದುವೆ ? ಕೊನೆಗೂ ಮೌನ ಮುರಿದ ನಟಿ ಹೇಳಿದ್ದೇನು?
ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಮತ್ತು ಕಾರ್ತಿಕ್ ಮಹೇಶ್ ನಡುವಿನ ಸಂಬಂಧದ ಬಗ್ಗೆ ಗಾಸಿಪ್ ಹಬ್ಬಿದೆ. ಈ ಹಿಂದೆ ಕಾರ್ತಿಕ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದರೂ, ಇದೀಗ ನಮ್ರತಾ ಗೌಡ ಅವರು ಮದುವೆಯ ಪ್ರಶ್ನೆಗೆ ನಿಗೂಢವಾಗಿ ಉತ್ತರಿಸಿದ್ದಾರೆ.

ಏನಿದು ಸುದ್ದಿ?
ಕೆಲವು ತಿಂಗಳುಗಳಿಂದ ಬಿಗ್ಬಾಸ್ ಖ್ಯಾತಿಯ ಹಾಗೂ ಕರ್ಣ ಸೀರಿಯಲ್ ನಿತ್ಯಾ ಆಗಿ ಫೇಮಸ್ ಆಗಿರೋ ನಮ್ರತಾ ಗೌಡ (Namratha Gowda) ಮತ್ತು ಬಿಗ್ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರ ನಡುವೆ ಸಮ್ಥಿಂಗ್ ಇದೆ ಎನ್ನುವ ಗುಲ್ಲು ಹಬ್ಬಿದೆ.
ನಮ್ರತಾ-ಕಾರ್ತಿಕ್ ಜೊತೆಯಲ್ಲಿ
ಅಷ್ಟಕ್ಕೂ, ನಮ್ರತಾ ಗೌಡ ಅವರು ಆಗಾಗ ಟ್ರಿಪ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರು ವಿದೇಶಕ್ಕೆ ಹೋಗಿದ್ದರು. ಅಲ್ಲಿ ಅವರು ಭೇಟಿ ನೀಡಿರುವ ಸ್ಥಳಗಳಲ್ಲಿ ಫೋಟೋ, ವಿಡಿಯೋ ಮಾಡಿಕೊಂಡಿದ್ದರು. ಆ ವೇಳೆ ಅವರು ಒಬ್ಬರ ಕೈ ಹಿಡಿದುಕೊಂಡು ತಿರುಗಿದ್ದಾರೆ. ಆ ಕೈಗೆ ಹಾಕಿಕೊಂಡ ಬ್ಲ್ಯಾಕ್ ಬಾಂಡ್ ಹಾಗೂ ಕಾರ್ತಿಕ್ ಮಹೇಶ್ ಹಾಕಿಕೊಂಡ ಬ್ಯಾಂಡ್ ಎರಡೂ ಸೇಮ್ ಇದೆ ಎನ್ನಲಾಗಿತ್ತು.
ಕಾರ್ತಿಕ್ ನೀಡಿದ್ದ ಉತ್ತರ
ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಉತ್ತರ ನೀಡಿದ ಕಾರ್ತಿಕ್ ಮಹೇಶ್ ಅವರು, “ಇಲ್ಲ, ಏನಾದರೂ ಇದ್ದಾಗ ನಾವು ಹೇಳುತ್ತೀವಿ. ನಾನು ಕೈಗೆ ಬ್ಯಾಂಡ್ ಹಾಕಿಕೊಂಡಿಲ್ಲ. ಈ ರೀತಿ ಜೋಡಿ ಮಾಡಿದ್ದನ್ನು ನಾನು, ನಮ್ರತಾ ಚರ್ಚೆ ಮಾಡಿಕೊಂಡು ನಕ್ಕಿದ್ದೇವೆ. ಅಭಿಮಾನಿಗಳು ಪೋಸ್ಟ್ ಹಾಕಿದಾಗ ಖುಷಿ ಆಗುತ್ತದೆ, ಈ ರೀತಿ ಬೇರೆಯವರ ಜೊತೆ ಕೂಡ ಫೋಟೋ ಹಾಕಿದ್ದಾರೆ. ಏನಾದರೂ ಇದ್ದರೆ ತಿಳಿಸುತ್ತೇವೆ” ಎಂದು ಹೇಳಿದ್ದರು.
ಜಾಲತಾಣದಲ್ಲಿ ಸದ್ದು
ಆದರೂ ಇವರಿಬ್ಬರ ನಡುವಿನ ಸಂಬಂಧ (Bigg Boss Karthik Mahesh and Namratha Gowda marriage) ಮದುವೆಯವರೆಗೂ ಹೋಗಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಸದ್ದು ಮಾಡುತ್ತಲೇ ಇರುತ್ತದೆ. ಇದೀಗ ಬಿಗ್ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ಅವರ ಹಾಡಿನ ಪ್ರಮೋಷನ್ಗೆ ಹೋಗಿದ್ದ ಸಂದರ್ಭದಲ್ಲಿ ನಮ್ರತಾ ಗೌಡ ಅವರಿಗೆ ಇದೇ ಪ್ರಶ್ನೆ ಎದುರಾಗಿದೆ.
ನಟಿಗೆ ಎದುರಾದ ಪ್ರಶ್ನೆ
ನಿಮ್ಮ ಮತ್ತು ಕಾರ್ತಿಕ್ ಮಹೇಶ್ ನಡುವೆ ಗಾಸಿಪ್ ಕೂಡ ಇದೆ, ಅದರ ಬಗ್ಗೆ ಎಂದು ಕೇಳುತ್ತಲೇ ಓಕೆ ಬೈ ಎಂದು ಉತ್ತರ ಹೇಳಲು ನುಣುಚಿಕೊಂಡರು ನಮ್ರತಾ ಗೌಡ. ಆದರೂ ಬಿಡದೇ ಅವರಿಗೆ ಪ್ರಶ್ನೆ ಕೇಳಲಾಯಿತು. ಇದನ್ನು ಎಫ್ಡಿಎಫ್ಎಸ್ ಚಾನೆಲ್ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.
ಎಲ್ಲರದ್ದೂ ಒಂದು ಪ್ಲ್ಯಾನ್
ಪ್ರಶ್ನೆ ಕೇಳಿದಾಗ, ಇದು ನಿಜನೂ ಅನ್ನದೇ, ಸುಳ್ಳು ಎಂದೂ ಹೇಳದ ನಟಿ, ನಾನು ಮದುವೆಯಾದರೆ ಖಂಡಿತ ಎಲ್ಲರನ್ನೂ ಕರೆಯುತ್ತೇನೆ. ಎಲ್ಲರಿಗೂ ಹೇಳುತ್ತೇನೆ. ನೋಡಿ ನಾವೊಂದು ಪ್ಲ್ಯಾನ್ ಮಾಡಿರಬಹುದು. ನಮ್ಮ ಅಪ್ಪ-ಅಮ್ಮ ಇನ್ನೊಂದು ಪ್ಲ್ಯಾನ್ ಮಾಡಿರುತ್ತಾರೆ. ದೇವರು ಒಂದು ಪ್ಲ್ಯಾನ್ ಮಾಡಿರುತ್ತಾನೆ ಎಂದಿದ್ದಾರೆ.
ಅವರನ್ನೇ ಮದ್ವೆಯಾಗ್ತೇನೆ
ಹಣೆಯಲ್ಲಿ ಯಾರು ಬರೆದಿದ್ದಾನೋ ಅವರನ್ನೇ ಮದುವೆಯಾಗುತ್ತೇನೆ. ಮದುವೆ ಆಗಬೇಕು ಎಂದುಕೊಂಡಿದ್ದೇನೆ. ನೋಡೋಣ ಎಂದಿದ್ದಾರೆ. ಈ ಬಗ್ಗೆ ಹೆಚ್ಚಿಗೆ ಏನೂ ಹೇಳಲು ಇಷ್ಟಪಡದ ಅವರು ಸಂಗೀತನಾ ಸಪೋರ್ಟ್ ಮಾಡಿ, ಈ ಸಾಂಗ್ನ ಹೆಚ್ಚು ವೈರಲ್ ಮಾಡಿ ಎಂದು ಹೇಳಿ ಮಾತು ಮುಗಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

