MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಸಿನಿಮಾ, ಧಾರಾವಾಹಿ ಬಿಟ್ಟು ಬಿಗ್ ಬಾಸ್ ಮನೆಗೆ ಹೋಗಿಬಂದು ಹಣಕ್ಕಾಗಿ ಪರದಾಡುತ್ತಿರುವ ನಟಿ! ಭಾವನಾತ್ಮಕ ಪೋಸ್ಟ್

ಸಿನಿಮಾ, ಧಾರಾವಾಹಿ ಬಿಟ್ಟು ಬಿಗ್ ಬಾಸ್ ಮನೆಗೆ ಹೋಗಿಬಂದು ಹಣಕ್ಕಾಗಿ ಪರದಾಡುತ್ತಿರುವ ನಟಿ! ಭಾವನಾತ್ಮಕ ಪೋಸ್ಟ್

ಬಿಗ್ ಬಾಸ್ ರಿಯಾಲಿಟಿ ಶೋ ನಂತರ 15 ತಿಂಗಳ ಕಾಲ ಸ್ಥಿರ ಆದಾಯವಿಲ್ಲದೆ, ಸಾಲದ ಭಾರದಿಂದ ಈ ನಟಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಮಾನಸಿಕ ಒತ್ತಡ ಮತ್ತು ಆರ್ಥಿಕ ಸಂಕಷ್ಟಗಳ ನಡುವೆ ನಿಜವಾದ ಬೆಂಬಲಿಗರನ್ನು ಗುರುತಿಸುವ ಅವಕಾಶ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

2 Min read
Sathish Kumar KH
Published : May 17 2025, 12:22 PM IST
Share this Photo Gallery
  • FB
  • TW
  • Linkdin
  • Whatsapp
18

ಭಾರತೀಯ ಕಿರುತೆರೆಯ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಟಿವಿ ಶೋ ಆಗಿರುವ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿ ಬಂದ ನಂತರ ಸತತವಾಗಿ 15 ತಿಂಗಳಾದರೂ ಯಾವುದೇ ಸ್ಥಿರ ಆದಾಯವಿಲ್ಲ. ಆಗ ನನಗೆ ಸಾಲಕೊಟ್ಟವರು ನನ್ನ ಬಗ್ಗೆ ತೀರಾ ಕೆಟ್ಟದಾಗಿ ನೋಡಿದ್ದಾರೆ. ಆಗ ನನ್ನ ಆರೋಗ್ಯವೂ ಕೈಕೊಟ್ಟು ಆಸ್ಪತ್ರೆ ಸೇರಿದ್ದೆ ಎಂದು ಕಷ್ಟದ ದಿನಗಳನ್ನು ಬಿಗ್ ಬಾಸ್ ಮಾಜಿ ಸ್ಪರ್ಧಿ ಮನೀಷ ಹಂಚಿಕೊಂಡಿದ್ದಾರೆ.

28

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆಯಾಗಿರುವ ಮನೀಷಾ ಕೆ.ಎಸ್. ಅವರು, ನಟನೆ, ಗಾಯನ, ಡಬ್ಬಿಂಗ್ ಮೂಲಕ ಬ್ಯೂಸಿ ಆಗಿದ್ದವರು. ಆದರೆ, ಈ ಎಲ್ಲವನ್ನೂ ಬಿಟ್ಟು ಶ್ರೀಮಂತ ರಿಯಾಲಿಟಿ ಶೋ  ಮಲಯಾಳಂ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರಿಗೆ ಖ್ಯಾತಿಯನ್ನು ಗಳಿಸುವುದಕ್ಕೆ ಬಂದರು.

ಮಲಯಾಳಂ ಸೇರಿ ದಕ್ಷಿಣ ಭಾರತದ ವಾಹಿನಿಗಳ ಎಲ್ಲ ವೀಕ್ಷಕರು ನಟಿ ಮನೀಷ ಕೆ.ಎಸ್. ಅವರನ್ನು ಬಿಗ್ ಬಾಸ್ ಮನೆಯಿಂದ ಗುರುತಿಸಿದರು. ಆದರೆ, ಬಿಗ್ ಬಾಸ್ ಹೋಗಿಬಂದ ನಂತರ ನಟಿ ಮನಿಷಾ ಅವಕಾಶಗಳನ್ನು ಬಿಟ್ಟು ಹೋಗಿದ್ದರಿಂದ ಸ್ಥಿರ ಆದಾಯವಿಲ್ಲದೆ ತನಗಾದ ಆರ್ಥಿಕ  ಸಂಕಕಷ್ಟ ಅನುಭವಗಳನ್ನು ವೀಕ್ಷಕರ ಮುಂದೆ ಸಾಮಾಜಿಕ ಜಾಲತಾಣದ ಮೂಲಕ ಬಿಚ್ಚಿಟ್ಟಿದ್ದಾರೆ.
 

Related Articles

Related image1
Now Playing
ನಮ್ರತಾ ಗೌಡಗೆ ಕೋಪ ತರಿಸಿದ ಮೆಸೇಜ್, 'ರಾಜಕಾರಣಿ, VIPಗಳಿಗೆ ಕಂಪನಿ ಬೇಕು, ಬರ್ತೀಯಾ' ಎಂದಿದ್ದು ಯಾರು?
Related image2
ಮದುವೆಗೆ ಬರ್ತಿದ್ದ ನನ್ನ ಗಂಡನನ್ನು ಹಿರಿ ಮಗಳು ತಡೆದಳು; ಚೈತ್ರಾ ಕುಂದಾಪುರ ತಂದೆ ಆರೋಪಕ್ಕೆ ಪತ್ನಿ ಪ್ರತಿಕ್ರಿಯೆ!
38

ನಟಿ, ಗಾಯಕಿ ಮತ್ತು ಡಬ್ಬಿಂಗ್ ಕಲಾವಿದೆಯೂ ಆಗಿರುವ ಮನೀಷ ಅವರು, ಒಬ್ಬ ನಟಿಗೆ ನಿಯಮಿತ ಆದಾಯ ಇಲ್ಲದಿದ್ದೆ ಜೀವನದಲ್ಲಿ ಏನೆಲ್ಲಾ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದು, ಇದೀಗ ದೇಶದ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿದೆ.

48

ಮನೀಷ ಅವರ ಪೋಸ್ಟ್‌ನ ಪೂರ್ಣರೂಪ:
'ಜೀವನವು ವಿಸ್ಮಯಗಳಿಂದ ತುಂಬಿದ ಚಿತ್ರಕಥೆಯಂತೆ. ಕೆಲವು ತಿಂಗಳುಗಳಿಂದ ಹಲವು ಕಾರಣಗಳಿಂದಾಗಿ ದುಃಖದ ವಾತಾವರಣದ ಮೂಲಕ ಜೀವನ ಸಾಗುತ್ತಿದೆ. ಮಾನಸಿಕ ಒತ್ತಡ ಹೆಚ್ಚಾದಾಗ ದೇಹವು ಅದರ ಸ್ವಾಭಾವಿಕ ಪ್ರತಿಕ್ರಿಯೆಗಳನ್ನು ತೋರಿಸಲು ಪ್ರಾರಂಭಿಸಿತು. ಆಸ್ಪತ್ರೆಗೆ ದಾಖಲಾಗುವುದು ಸಹ ಪದೇ ಪದೇ ಆಯಿತು.

58

ಸಾಲ ತೆಗೆದುಕೊಂಡವರ ಬೈಗುಳಗಳು ಮನಸ್ಸಿಗೆ ತುಂಬಾ ನೋವುಂಟುಮಾಡಿದೆ. ಸುಧೀರ್ಘ 15 ತಿಂಗಳುಗಳಿಗೂ ಹೆಚ್ಚು ಕಾಲ ಸ್ಥಿರ ಆದಾಯವಿಲ್ಲ. ಆದಾಯವಿಲ್ಲದಿರುವುದು ಖರ್ಚಿನ ಮೇಲೆ ಯಾವುದೇ ರೀತಿಯಲ್ಲೂ ಪರಿಣಾಮ ಬೀರಲಿಲ್ಲ. 

68

ಕೆಲಸ ಮಾಡಿದ ಹಣ ಸಿಗದಿರುವುದರ ಬೇಸರ ಪ್ಯಾನಿಕ್ ಅಟ್ಯಾಕ್ ಮತ್ತು ಇತರ ಹಲವು ದೈಹಿಕ ಸಮಸ್ಯೆಗಳಿಗೆ ಕಾರಣವಾಯಿತು. ಈ ಸಮಯದಲ್ಲಿ ನಿಜವಾಗಿಯೂ ಯಾರು ನನ್ನ ಜೊತೆಗಿದ್ದಾರೆಂದು ತಿಳಿದುಕೊಳ್ಳಲು ಒಂದು ಸುವರ್ಣಾವಕಾಶ ಸಿಕ್ಕಿತು. ಅನೇಕರು ಕರೆ ಮಾಡಿದರೂ ಫೋನ್ ಸಹ ಎತ್ತಲಿಲ್ಲ. ಜೀವನದ ಆ ಅಧ್ಯಾಯದ ಬಗ್ಗೆ ಕೆಲವರನ್ನು ಉಲ್ಲೇಖಿಸಿ ಮತ್ತೊಂದು ಪೋಸ್ಟ್ ಶೀಘ್ರದಲ್ಲೇ ಬರೆಯುತ್ತೇನೆ. 

78

ಈ ಪೋಸ್ಟ್ ಅನ್ನು ಸ್ವಯಂ ಪ್ರೇರಣೆಗಾಗಿ ಬರೆಯುತ್ತಿದ್ದೇನೆ. ಆಲೋಚಿಸಿದರೆ ಏನೂ ಇಲ್ಲ, ಆಲೋಚಿಸದಿದ್ದರೆ ಏನೂ ಇಲ್ಲ ಎಂದು ಕುಂಞಣ್ಣಿ ಮಾಸ್ಟರ್ ಹೇಳಿದಂತೆ ಜೀವನವು ತನ್ನದೇ ಆದ ಲಯದಲ್ಲಿ ಮುಂದುವರಿಯುತ್ತದೆ. ಏರಿಳಿತಗಳು ಎಲ್ಲಾ ಮನುಷ್ಯರಿಗೂ ಅನ್ವಯಿಸುತ್ತದೆ.

88

ಕಷ್ಟದ ಸಮಯದಲ್ಲಿ ಜೊತೆಯಲ್ಲಿದ್ದ ಕೆಲವರಿಗೆ ಹೃದಯಪೂರ್ವಕ ಧನ್ಯವಾದಗಳು. ಯಾವುದೇ ಕಷ್ಟದ ಸಮಯದಲ್ಲೂ ನಗುತ್ತಿರಲು ಶಕ್ತಿ ನೀಡಿದ ದೇವರಿಗೆ ನೂರು ನೂರು ಧನ್ಯವಾದಗಳು' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ನಟಿ ಮನೀಷಾ ಪೋಸ್ಟ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ. https://www.instagram.com/p/DJpfw85otdf/?hl=en&img_index=1

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬಿಗ್ ಬಾಸ್
ಮಲಯಾಳಂ ಸಿನೆಮಾ
ದಕ್ಷಿಣ ಭಾರತದ ನಟಿ
ನಟಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved