- Home
- Entertainment
- TV Talk
- ಮದುವೆಗೆ ಬರ್ತಿದ್ದ ನನ್ನ ಗಂಡನನ್ನು ಹಿರಿ ಮಗಳು ತಡೆದಳು; ಚೈತ್ರಾ ಕುಂದಾಪುರ ತಂದೆ ಆರೋಪಕ್ಕೆ ಪತ್ನಿ ಪ್ರತಿಕ್ರಿಯೆ!
ಮದುವೆಗೆ ಬರ್ತಿದ್ದ ನನ್ನ ಗಂಡನನ್ನು ಹಿರಿ ಮಗಳು ತಡೆದಳು; ಚೈತ್ರಾ ಕುಂದಾಪುರ ತಂದೆ ಆರೋಪಕ್ಕೆ ಪತ್ನಿ ಪ್ರತಿಕ್ರಿಯೆ!
ಚೈತ್ರಾ ಕುಂದಾಪುರ ದುಡ್ಡಿಗೋಸ್ಕರ ಏನು ಬೇಕಿದ್ರೂ ಮಾಡ್ತಾಳೆ, ಸರಿಯಿಲ್ಲ ಎಂದು ಅವಳ ತಂದೆಯೇ ಮಾಧ್ಯಮದ ಮುಂದೆ ಆರೋಪ ಮಾಡಿದ್ದಾರೆ. ಇದಕ್ಕೀಗ ಚೈತ್ರಾ ಕುಂದಾಪುರ ತಾಯಿ ರೋಹಿಣಿ ಅವರು ಉತ್ತರ ಕೊಟ್ಟಿದ್ದಾರೆ.

ನನ್ನ ಪತಿ ಜವಾಬ್ದಾರಿ ಇಲ್ಲದ ವ್ಯಕ್ತಿ. ನಮ್ಮ ಮನೆಯ ಯಾವ ಕಷ್ಟಕ್ಕೂ ಸ್ಪಂದಿಸಿದವರಲ್ಲ. ದೊಡ್ಡ ಮಗಳು ಹೇಳಿಕೊಟ್ಟದ್ದನ್ನು ಅವರು ಹೇಳುತ್ತಿದ್ದಾರೆ. ಯಾವ ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡ ವ್ಯಕ್ತಿಯಲ್ಲ. ಕೆಲಸ ಮಾಡುತ್ತೇನೆ ಎಂದು ಎಲ್ಲೆಲ್ಲೋ ಹೋಗುತ್ತಾರೆ, ಅಲ್ಲಿ ದುಡಿದು ಹಣವನ್ನು ದೊಡ್ಡ ಮಗಳಿಗೆ ಕೊಡುತ್ತಾರೆ. ನನ್ನ ದೊಡ್ಡ ಮಗಳು ಆಸ್ತಿಗೋಸ್ಕರ ತಂದೆಗೆ ಈ ರೀತಿ ಮಾತನಾಡಲು ಹೇಳಿಕೊಟ್ಟಿದ್ದಾಳೆ. ಮಕ್ಕಳಿಗೆ ಓದಿಸುವಾಗಲು ಸಹಾಯ ಮಾಡಿಲ್ಲ, ಮಕ್ಕಳನ್ನು ಕೆಲಸಕ್ಕೆ ಹಾಕು ಎನ್ನುತ್ತಿದ್ದರು.
ಮೂರು ಹೆಣ್ಣು ಮಕ್ಕಳಿಗೂ ವಿದ್ಯಾಭ್ಯಾಸ ನೀಡಿದವರಲ್ಲ. ಆ ಕಾಲದಲ್ಲಿ ಒಂದುವರೆ ಎರಡು ಲಕ್ಷ ರೂಪಾಯಿಯಲ್ಲಿ ಮನೆ ಕಟ್ಟಿದರು. ಅವರು ಕಟ್ಟಿದ ಮನೆ ಬಿದ್ದು ಹೋಗಿದೆ. ನನ್ನ ಗಂಡನಿಗೆ ಮಾತನಾಡಲು ಬರುವುದಿಲ್ಲ, ಅವರು ಒಂಥರ ಮಾನಸಿಕ ವ್ಯಕ್ತಿ. ರಾತೋರಾತ್ರಿ ಮನೆ ಬಿಟ್ಟು ಹೋಗುತ್ತಾರೆ. ಕೆಲವೊಮ್ಮೆ ಏನೇನೋ ಮಾತನಾಡುತ್ತಾರೆ.
ನಾನು ಚೂರುಪಾರು ಹಣವನ್ನು ದೊಡ್ಡ ಮಗಳ ಗಂಡನ ಸೊಸೈಟಿಯಲ್ಲಿ ಇಟ್ಟಿದ್ದೆ. ಅದನ್ನು ಕೂಡ ನನ್ನ ಗಂಡ ದೊಡ್ಡ ಮಗಳಿಗೆ ಕೊಟ್ಟಿದ್ದಾರೆ. ನಮ್ಮ ಭೂಮಿ ಬೇಕು ಎಂದು ದೊಡ್ಡ ಮಗಳು ಬೆನ್ನು ಬಿದ್ದಿದ್ದಾಳೆ. ಅವಳ ಮನೆಗೆ ಸಹಾಯ ಮಾಡಲು ಚೈತ್ರ ಜಾಗ ಬರೆದುಕೊಟ್ಟಿದ್ದಾಳೆ. 25 ಲಕ್ಷ ರೂಪಾಯಿಯನ್ನು ಸಾಲವನ್ನು ನಾವೇ ಮಾಡಿಕೊಟ್ಟಿದ್ದೇವೆ. ಅಪ್ಪನ ಬಳಿ ಸಹಿ ಪಡೆದು ಜಾಗ ಒಳ ಹಾಕುವ ಸಂಚು ಮಾಡಿದ್ದಾಳೆ. ಅಮ್ಮ ಮೋಸ ಮಾಡಿದಳು ಎಂದು ಹೇಳಿಕೊಂಡು ಬರುತ್ತಿದ್ದಾಳೆ. ಅಪ್ಪ ಮದುವೆಗೆ ಬರದ ಹಾಗೆ ದೊಡ್ಡ ಮಗಳು ತಡೆದಿದ್ದಾಳೆ.
ಕುಂದಾಪುರದವರೆಗೆ ಬಂದವರನ್ನು ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಮರ್ಯಾದೆ ತೆಗೆಯಲು ಈ ರೀತಿ ಮಾಡಿದ್ದಾಳೆ. ತಂದೆಗೆ ಮದುವೆಗೆ ಬರಬೇಕು ಎಂದು ಬಹಳ ಇಷ್ಟ ಇತ್ತು. ತಾನೆ ಹೋಗಿ ಮದುವೆ ಕಾಗದವನ್ನು ಹಿರಿಯರ ಮನೆಗೆ ಕೊಟ್ಟು ಬಂದಿದ್ದಾರೆ. ಮನೆ ಪೇಂಟಿಂಗ್ ಕೂಡ ತಾವೇ ನಿಂತು ಮಾಡಿಸಿದ್ದಾರೆ. ಮದುವೆಗೆ ಬರುತ್ತೇನೆ ಎಂದು ಹೇಳಿದವರನ್ನು ಮಗಳು ತಡೆದಿದ್ದಾಳೆ.
ನಾನು ಸಹಿ ಹಾಕಿಲ್ಲ ಅಂತ ಹಿರಿಯ ಮಗಳು ಹೀಗೆ ಮಾಡುತ್ತಿದ್ದಾಳೆ. ನನ್ನ ಗಂಡ ಯಾವ ವಿಷಯದಲ್ಲಿ ಜವಾಬ್ದಾರಿ ತಗೊಂಡಿಲ್ಲ. ಅವರಿಗೆ ಮಾತನಾಡಲು ಬರುವುದಿಲ್ಲ ಅವರು , ಅವರ ಅಣ್ಣ ಎಲ್ಲರೂ ಒಂದು ರೀತಿ ಮಾನಸಿಕ ವ್ಯಕ್ತಿಗಳು. ದೊಡ್ಡ ಮಗಳ ಮದುವೆಗೂ ಅವರು ಸರಿಯಾಗಿ ಬಂದಿರುವುದಿಲ್ಲ. ಎಲ್ಲೋ ಬಸ್ಸು ಹತ್ತಿ ಕೂತವರನ್ನು ಹುಡುಗರು ತರ ಕರೆದುಕೊಂಡು ಬಂದಿದ್ದರು. ಚೈತ್ರಾ ಪತಿ 12 ವರ್ಷದಿಂದ ನಮ್ಮ ಮನೆಯಲ್ಲಿ ಇರಲಿಲ್ಲ. ಎರಡು-ಮೂರು ವರ್ಷದ ಹಿಂದೆ ನಮಗೆ ಅವನ ಪರಿಚಯವಾಗಿತ್ತು. ಅವನು ನಮ್ಮ ಮನೆಗೆ ಬಂದು ನೀರು ಸಹ ಕುಡಿಯುತ್ತಿರಲಿಲ್ಲ. ನಾನೇ ಹೆಣ್ಣು ಮಕ್ಕಳನ್ನು ಬೆಳೆಸಿದ್ದು. ಏನಾದರೂ ಹೇಳಿದರೆ ಹೊಡೆಯಲು ಬರುತ್ತಾರೆ, ಜಬರ್ದಸ್ತ್ ಮಾಡುತ್ತಾರೆ. ಇದನ್ನೆಲ್ಲ ನೋಡಿ ನೋಡಿ ನಮಗೆ ಸಾಕಾಗಿದೆ ಅವರ ವಿಷಯ ಬಿಟ್ಟಿದ್ದೇವೆ.